ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಟ್ಟದ ಕತ್ತಿಯಿಟ್ಟು ಅರಮನೆಯಲ್ಲಿ ಖಾಸಗಿ ದರ್ಬಾರ್ ಆರಂಭ

|
Google Oneindia Kannada News

ಮೈಸೂರು, ಸೆ. 25 : ಮೈಸೂರು ದಸರಾ ಗುರುವಾರ ಬೆಳಗ್ಗೆ ಉದ್ಘಾಟನೆಗೊಂಡ ನಂತರ ಅರಮನೆಯಲ್ಲಿ ನಡೆಯುವ ಖಾಸಗಿ ದರ್ಬಾರ್‌ಗೂ ಚಾಲನೆ ಸಿಕ್ಕಿದೆ. ದೊರೆ ಇಲ್ಲದ ದಸರಾ ದರ್ಬಾರ್‌ಗೆ ಈ ಬಾರಿ ಪಟ್ಟದ ಕತ್ತಿ ನೇತೃತ್ವ ವಹಿಸಿದ್ದು,ಸಿಂಹಾಸನದ ಮೇಲೆ ಪಟ್ಟದ ಕತ್ತಿಯನ್ನು ಇಟ್ಟು, ಪೂಜಿಸಿ ಖಾಸಗಿ ದರ್ಬಾರ್ ಆರಂಭಿಸಲಾಯಿತು.

ಮೈಸೂರು ಸುತ್ತಮುತ್ತಲಿನ ದೇವಾಲಯಗಳಿಂದ ಅರ್ಚರು ಪ್ರಸಾದವನ್ನು ಹಿಡಿದು ಅರಮನೆಗೆ ಆಗಮಿಸಿದ ನಂತರ ಖಾಸಗಿ ದರ್ಬಾರ್‌ಗೆ ಚಾಲನೆ ಸಿಕ್ಕಿತು. ಸಿಂಹಾಸನಕ್ಕೆ ಮೊದಲು ಪೂಜೆ ಸಲ್ಲಿಸಿದ ಅರ್ಚರು ಅದಕ್ಕೆ ಪ್ರಸಾದವನ್ನು ಸಮರ್ಪಿಸಿದರು. ನಂತರ ಸಿಂಹಾಸನದ ಮೇಲೆ ಪಟ್ಟದ ಕತ್ತಿಯಿಟ್ಟು ಒಂಭತ್ತು ದಿನಗಳ ದರ್ಬಾರ್‌ಅನ್ನು ಆರಂಭಿಸಲಾಯಿತು. [ಮೈಸೂರು ದಸರಾಕ್ಕೆ ಚಾಮುಂಡಿ ಬೆಟ್ಟದಲ್ಲಿ ಚಾಲನೆ]

Private Darbar

ರಾಣಿ ಪ್ರಮೋದಾ ದೇವಿ ಅವರ ಮಾರ್ಗದರ್ಶನದಲ್ಲಿ ಆರಂಭವಾದ ಖಾಸಗಿ ದರ್ಬಾರ್ ಆಚರಣೆಗಳಲ್ಲಿ ದಿ.ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಸಹೋದರಿ ಗಾಯತ್ರಿ ದೇವಿ ಪುತ್ರ ಕಾಂತರಾಜ ಅರಸ್ ಪಾಲ್ಗೊಂಡಿದ್ದರು. ಶ್ರೀಕಂಠದತ್ತ ಒಡೆಯರ್ ನಿಧನದ ನಂತರ ಉತ್ತರಾಧಿಕಾರಿ ನೇಮಕವಾಗದ ಕಾರಣ, ಪಟ್ಟದ ಕತ್ತಿ ಇಟ್ಟು ಈ ಬಾರಿ ಖಾಸಗಿ ದರ್ಬಾರ್ ನಡೆಸಲಾಗುತ್ತಿದೆ. [ಮೈಸೂರು ದಸರಾ ಚಿತ್ರಗಳನ್ನು ನೋಡಿ]

1971, 1972, 1973, 1974ರಲ್ಲಿ ರಾಜರಿದ್ದರೂ ಪಟ್ಟದ ಕತ್ತಿ ಇಟ್ಟು ದರ್ಬಾರ್ ನಡೆಸಲಾಗಿತ್ತು. ಈ ಬಾರಿ ರಾಜನಿಲ್ಲದ ಕಾರಣ ಪಟ್ಟದ ಕತ್ತಿಯನ್ನಿಟ್ಟು ಖಾಸಗಿ ದರ್ಬಾರ್ ನಡೆಸಲಾಗುತ್ತಿದೆ ಎಂದು ಇತಿಹಾಸ ತಜ್ಞ ಪ್ರೊ.ಪಿ.ವಿ. ನಂಜರಾಜ ಅರಸ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

English summary
Private Darbar begins in Mysore amba vilas palace on Thursday, September 25. Private Darbar one of the attractions of the Mysore Dasara celebrations, which reminds the glory of Mysore King. Special pooja performs for Sword of Wodeyar during private durbar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X