ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ದಸರಾ ಕುರಿತ ಎಲ್ಲಾ ಗೊಂದಲಗಳಿಗೆ ತೆರೆ

|
Google Oneindia Kannada News

ಮೈಸೂರು, ಸೆ. 19 : ವಿಶ್ವ ವಿಖ್ಯಾತ ಮೈಸೂರು ದಸರಾ ಆಚರಣೆ ಬಗ್ಗೆ ಎದ್ದಿದ್ದ ಎಲ್ಲಾ ಗೊಂದಲಗಳಿಗೆ ತೆರೆ ಬಿದ್ದಿದೆ. ದಸರಾಕ್ಕೆ ಸಹಕಾರ ನೀಡುವುದಾಗಿ ಎರಡು ತಿಂಗಳ ಹಿಂದೆಯೇ ಸ್ಪಷ್ಟವಾಗಿ ಹೇಳಿದ್ದೇನೆ ಎಂದು ರಾಣಿ ಪ್ರಮೋದಾ ದೇವಿ ತಿಳಿಸಿದ್ದಾರೆ. ಸರ್ಕಾರದ ವತಿಯಿಂದ ಅವರಿಗೆ ಅಧಿಕೃತ ಆಹ್ವಾನವನ್ನು ನೀಡಲಾಗಿದೆ.

ಗುರುವಾರ ಸಂಜೆ ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸ ಪ್ರಸಾದ್ ಜಂಟಿ ಪತ್ರಿಕಾಗೋಷ್ಠಿ ನಡೆಸಿ, ದಸರಾ ಬಗ್ಗೆ ಎದ್ದಿದ್ದ ಎಲ್ಲಾ ಗೊಂದಲಗಳಿಗೆ ತೆರೆ ಎಳೆದರು. ಈ ಮಧ್ಯೆ, ಪ್ರಮೋದಾದೇವಿ ಒಡೆಯರ್ ಜಿಲ್ಲಾಡಳಿತದಿಂದ ಆಹ್ವಾನ ಸ್ವೀಕರಿಸಿದ್ದಾರೆ. ದಸರಾ ಆಚರಣೆ ವಿಷಯದಲ್ಲಿ ಯಾವುದೇ ಗೊಂದಲಗಳಿಲ್ಲ. ಸರ್ಕಾರಕ್ಕೆ ಅರಮನೆ ಎಲ್ಲಾ ಸಹಕಾರ ನೀಡುತ್ತಿದೆ ಎಂದು ಅವರು ಸ್ಪಷ್ಟಪಡಿಸಿದರು. [ಮೈಸೂರು ದಸರಾ ಸಿದ್ಧತೆ ಚಿತ್ರಗಳು]

ರಾಜವಂಶಸ್ಥರ ಭಾವನೆಗಳಿಗೆ ಸರ್ಕಾರ ಸ್ಪಂದಿಸಲಿದ್ದು, ಅರಮನೆ ಮುಂಭಾಗದಲ್ಲಿ ಅಬ್ಬರವಿಲ್ಲದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರೂಪಿಸುತ್ತೇವೆ. ಎಲ್ಲಾ ಕಾರ್ಯಕ್ರಮಗಳನ್ನು ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಅವರಿಗೆ ಅರ್ಪಿಸುತ್ತೇವೆ ಎಂದು ಪತ್ರಿಕಾಗೋಷ್ಠಿಯಲ್ಲಿ ಸಚಿವ ವಿ.ಶ್ರೀನಿವಾಸಪ್ರಸಾದ್ ತಿಳಿಸಿದರು.

ಮಹಾರಾಣಿ ಅವರು ಹೇಳಿದ್ದೇನು ? : ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಣಿ ಪ್ರಮೋದಾ ದೇವಿ ಅವರು, ಪತಿ ಶ್ರೀಕಂಠದತ್ತ ನರಸಿಂಹ ಒಡೆಯರ್ ನಿಧನರಾಗಿರುವುದರಿಂದ ಅರಮನೆ ಎದುರು ಸರಳವಾಗಿ ಕಾರ್ಯಕ್ರಮ ನಡೆಸಿ ಎನ್ನುವ ಬೇಡಿಕೆಯನ್ನು ಸರ್ಕಾರದ ಮುಂದಿಟ್ಟಿದ್ದೆ. ದಸಾರಾಕ್ಕೆ ಯಾವುದೇ ಅಡ್ಡಿ ಪಡಿಸಿರಲಿಲ್ಲ ಎಂದರು. [ಅರಮನೆ ಸಂಕಷ್ಟ ನೆನೆದು ಕಣ್ಣೀರಿಟ್ಟ ಮೈಸೂರು ರಾಣಿ]

ಎರಡು ತಿಂಗಳ ಹಿಂದೆ ಪತ್ರಿಕಾಗೋಷ್ಠಿ ನಡೆಸಿದಾಗಲೇ ದಸರಾ ಆಚರಣೆಗೆ ಅರಮನೆ ಸಂಪೂರ್ಣ ಸಹಕಾರ ನೀಲಿದೆ ಎಂದು ಸ್ಪಷ್ಟಪಡಿಸಲಾಗಿತ್ತು. ಆದರೆ, ಕೆಲವರು ಹಲವಾರು ಗೊಂದಲಗಳನ್ನು ಸೃಷ್ಟಿಸಿದರು ಎಂದು ಅಸಮಾಧಾನ ವ್ಯಕ್ತಪಡಿಸಿದರು. ಜನರಿಗೆ ಇದು ಅರಮನೆಯಾದರೆ ನಮಗೆ ಮನೆ. ಸೂತಕದ ಸಂದರ್ಭದಲ್ಲಿ ಮನೆ ಮುಂದೆ ವಿಜೃಂಭಣೆಯ ಸಾಂಸ್ಕೃತಿಕ ಕಾರ್ಯಕ್ರಮ ಬೇಡ ಎಂದು ಹೇಳಿದ್ದೆವು. ಇದಕ್ಕೆ ಅಪಾರ್ಥ ಕಲ್ಪಿಸುವುದು ಬೇಡ ಎಂದು ರಾಣಿ ಮನವಿ ಮಾಡಿದರು.

Mysore Dasara 2014

ಅರಮನೆ ಹೊರಗೆ ನಡೆಸುವ ಕಾರ್ಯಕ್ರಮಗಳಿಗೆ ನಾವು ಅಡ್ಡಿ ಪಡಿಸಿಲ್ಲ. ವಾರಸದಾರರು ನೇಮಕವಾಗುವವರೆಗೆ ಸಿಂಹಾಸನದ ಮೇಲೆ ಯಾರೂ ಕೂರಲಾಗದು. ಆದ್ದರಿಂದ ವಿಜೃಂಭಣೆ ಇಲ್ಲದಿದ್ದರೂ ಸಂಪ್ರದಾಯದಂತೆ ಪೂಜಾ ವಿಧಿ ವಿಧಾನಗಳು ನಡೆಯಲಿವೆ ಎಂದು ಪ್ರಮೋದಾ ದೇವಿಯವರು ಹೇಳಿದರು. [ಮೈಸೂರಿನ ಬಗ್ಗೆ ತಿಳಿಯಿರಿ]

ಇದರಿಂದಾಗಿ ದಸರಾ ಆಚರಣೆ ಕುರಿತು ಎದ್ದಿದ್ದ ಎಲ್ಲಾ ಗೊಂದಲಗಳಿಗೆ ತೆರೆ ಬಿದ್ದಂತಾಗಿದ್ದು, ಸೆ.25ರಿಂದ ಅ.4ವರೆಗೆ ದಸರಾ ನಡೆಯಲಿದೆ. ಈಗಾಗಲೇ ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭಗೊಂಡಿದ್ದು, ಎರಡು ದಿನಗಳ ಹಿಂದೆ ಯುವ ದಸರಾಕ್ಕೆ ಚಾಲನೆ ಸಿಕ್ಕಿದೆ.

English summary
The Karnataka government has agreed to scale down the cultural programmes organized in front of the Mysore Palace as part of Mysore Dasara 2014 scheduled to start on September 25.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X