ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು: ಎಸ್ ಐ ಸೇರಿ ನಾಲ್ವರ ಮೇಲೆ ದರೋಡೆ ಕೇಸ್

By Mahesh
|
Google Oneindia Kannada News

ಮೈಸೂರು, ಮಾ.10: ಕೇರಳ ಮೂಲದ ಉದ್ಯಮಿಯೊಬ್ಬರಿಂದ ವಶಪಡಿಸಿಕೊಂಡ ಕೋಟ್ಯಂತರ ರೂಪಾಯಿ ಹಣವನ್ನು ಪೊಲೀಸರು ಗೋಲ್ ಮಾಲ್ ಮಾಡಿರುವ ಪ್ರಕರಣ ನಡೆದಿದೆ. ಈ ರೋಲ್ ಕಾಲ್ ಪ್ರಕರಣಕ್ಕೂ ಸಿಎಂ ಸಿದ್ದರಾಮಯ್ಯ ಅವರ ದುಬಾರಿ ವಾಚ್ ಪ್ರಕರಣಕ್ಕೂ ಏನು ಸಂಬಂಧ ? ಮಾಜಿ ಸಿಎಂ ಎಚ್. ಡಿ ಕುಮಾರಸ್ವಾಮಿ ಅವರು ಶುಕ್ರವಾರ (ಫೆಬ್ರವರಿ 26) ಸುದ್ದಿಗೋಷ್ಠಿಯಲ್ಲಿ ಏನು ಹೇಳಿದರು ಮುಂದೆ ನಿರೀಕ್ಷಿಸಿ...

ರೋಲ್ ಕಾಲ್ ಮಾಡಿ ಅಭ್ಯಾಸವಿದ್ದ ಪೊಲೀಸರು ಈಗ ಗೋಲ್ ಮಾಲ್ ಮಾಡಲು ಹೋಗಿ ಸಿಕ್ಕಿಬಿದ್ದಿದ್ದಾರೆ. ಸಬ್ ಇನ್ಸ್ ಪೆಕ್ಟರ್ ಸೇರಿದಂತೆ ನಾಲ್ವರು ಪೊಲೀಸರ ಮೇಲೆ ದರೋಡೆ ಪ್ರಕರಣ ದಾಖಲಾಗಿದೆ.

ಡಿವೈಎಸ್ಪಿ ಸ್ಕ್ಯಾಡ್ ತಂಡದಲ್ಲಿದ್ದ ಮೈಸೂರು ದಕ್ಷಿಣ ಗ್ರಾಮಾಂತರ ಠಾಣೆ ಸಬ್ ‌ಇನ್ಸ್ ಪೆಕ್ಟರ್ ಜಗದೀಶ್, ಕಾನ್ ಸ್ಟೇಬಲ್ ಲತೀಫ್, ಬನ್ನೂರು ಠಾಣೆಯಿಂದ ನಿಯೋಜಿತ ಹೆಡ್ ಕಾನ್ ಸ್ಟೇಬಲ್ ಸತೀಶ ಹಾಗೂ ಬೆಟ್ಟದ ಪುರ ಠಾಣೆಯಿಂದ ಇಲಾವಾಲ ಠಾಣೆಗೆ ನಿಯೋಜಿತ ಕಾನ್ ಸ್ಟೇಬಲ್ ಅಶೋಕ್ ಈ ಪ್ರಕರಣದ ಆರೋಪಿಗಳಾಗಿದ್ದಾರೆ. ಈ ನಾಲ್ವರ ವಿರುದ್ಧ ಐಪಿಸಿ ಸೆಕ್ಷನ್ 392 (ದರೋಡೆ) ಹಾಗೂ 149 (ಕ್ರಿಮಿನಲ್ ಕಾನ್ ‌ಸ್ಪೆರಸಿ) ಅಡಿ ಇಲವಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಘಟನೆಯ ವಿವರ: ಜನವರಿ 4ರಂದು ಮಧ್ಯರಾತ್ರಿ 2 ರ ವೇಳೆಗೆ ತಮಗೆ ಬಂದ ಮಾಹಿತಿ ಆಧರಿಸಿ ಸಬ್ ಇನ್ಸ್ ‌ಪೆಕ್ಟರ್ ಜಗದೀಶ್, ಸಿಬ್ಬಂದಿ ಸತೀಶ, ಲತೀಫ್, ಅಶೋಕ್ ಹಾಗೂ ಇನ್ನಿತರರು ಖಾಸಗಿ ಬಸ್ಸೊಂದನ್ನು ಹಿಂಬಾಲಿಸಿ ಇಲವಾಲ ಪೊಲೀಸ್ ಠಾಣೆ ಎದುರೇ ಹುಣಸೂರು ರಸ್ತೆಯಲ್ಲಿ ಬಸ್ಸನ್ನು ತಡೆದು ನಿಲ್ಲಿಸಿ, ಪರಿಶೀಲಿಸಿದಾಗ ಟೂಲ್ಸ್ ಬಾಕ್ಸ್ ‌ನಲ್ಲಿ 2.25 ಕೋಟಿ ರೂ. ನಗದು ಹಣ ಪತ್ತೆಯಾಗಿತ್ತು. ಆದರೆ ಈ ತಂಡ ತಮಗೆ ಸಿಕ್ಕಿದ್ದು ಕೇವಲ 20 ಲಕ್ಷ ರೂ.ಗಳು ಮಾತ್ರ ಎಂದು ಇಲವಾಲ ಪೊಲೀಸ್ ಠಾಣೆಯಲ್ಲಿ ವರದಿ ನೀಡಿತ್ತು.

Mysore: Four cops including a SI booked robbery case

ಈ ಹಣ ಉದ್ಯಮಿ ಅಬ್ದುಲ್ ರಹೀಂ ಎಂಬವರಿಗೆ ಸೇರಿದ್ದಾಗಿದ್ದು, ಕೇರಳದಲ್ಲಿ ಫ್ಲಾಟ್ ಖರೀದಿಸಲು ಖಾಸಗಿ ಬಸ್ಸಿನಲ್ಲಿ 2.25 ಕೋಟಿ ರೂ. ಹಣವನ್ನು ಕಳುಹಿಸಲಾಗಿತ್ತು. ಆದರೆ, ಪೊಲೀಸರು ಮಾತ್ರ 20 ಲಕ್ಷ ರೂ.ಗಳನ್ನು ಮಾತ್ರ ಎಫ್ ಐಆರ್ ನಲ್ಲಿ ದಾಖಲಿಸಿದ್ದಾರೆಂದು ಕೇರಳ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಹಾಗೂ ಅಲ್ಲಿನ ಗೃಹ ಸಚಿವ ರಮೇಶ್ ಅವರಿಗೆ ದೂರು ನೀಡಿದ್ದರು.

ಈ ಹಿನ್ನೆಲೆಯಲ್ಲಿ ರಮೇಶ್ ಅವರು ಕರ್ನಾಟಕ ಗೃಹ ಸಚಿವ ಕೆ.ಜೆ.ಜಾರ್ಜ್ ಅವರಿಗೆ ಕರೆ ಮಾಡಿ ಪ್ರಕರಣದ ಬಗ್ಗೆ ವಿವರಿಸಿದ್ದಾರೆ. ನಂತರ ಗೃಹ ಸಚಿವ ಜಾರ್ಜ್ ಅವರು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪಚಾವೋ ಅವರಿಗೆ ಪ್ರಕರಣದ ತನಿಖೆ ನಡೆಸುವಂತೆ ನಿರ್ದೇಶಿಸಿದ್ದಾರೆ.

ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಖರೆ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ವಿಚಾರಣೆಯ ಮೊದಲ ಹಂತದಲ್ಲಿ ಘಟನೆ ನಡೆದಿರುವುದು ಮೇಲ್ನೋಟಕ್ಕೆ ರುಜುವಾತಾಗಿರುವುದರಿಂದ ಹಣ ಕಳೆದುಕೊಂಡ ಉದ್ಯಮಿ ಅಬ್ದುಲ್ ರಹೀಂ ಎಂಬವರು ನೀಡಿದ್ದ ದೂರಿನ ಆಧಾರದ ಮೇಲೆ ಸ್ಕ್ವಾಡ್ ತಂಡದ ಪೊಲೀಸರ ವಿರುದ್ಧ ಪ್ರಕರಣ ದಾಖಲಾಗಿದೆ.

ಅಲ್ಲದೆ, ಎಸ್ಪಿ ಅಭಿನವ್ ಖರೆ ಅವರೇ ಸ್ವತಃ ಇಲವಾಲ ಠಾಣೆಗೆ ತೆರಳಿ, ಪ್ರಕರಣ ದಾಖಲಿಸಿದ್ದಲ್ಲದೆ, ಸಬ್ ಇನ್ಸ್ ಪೆಕ್ಟರ್ ಪುನಿತ್ ರಿಂದ ಎಫ್ ಐಆರ್ ಮಾಹಿತಿ ಒಳಗೊಂಡ ವರದಿಯನ್ನು ಪಡೆದುಕೊಂಡಿದ್ದಾರೆ. ಇದೀಗ ಸಾರ್ವಜನಿಕರ ಆಸ್ತಿ, ಪ್ರಾಣ ರಕ್ಷಣೆ ಮಾಡಬೇಕಾದ ಪೊಲೀಸರೇ ಜಾಗೃತ ದಳದ ಹೆಸರಲ್ಲಿ ಕೋಟ್ಯಂತರ ರೂ. ದರೋಡೆ ಮಾಡಿರುವುದು ಪೊಲೀಸ್ ಇಲಾಖೆಗೆ ಮುಜುಗರ ತಂದೊಡ್ಡಿದೆ

ವಿಚಾರಣೆ ಹಂತದಲ್ಲಿರುವ ಪ್ರಕರಣದಲ್ಲಿ ಡಿವೈಎಸ್ಪಿ ಸ್ಕ್ವಾಡ್ ನಲ್ಲಿ ಇದ್ದವರು ಯಾರು, ಸಿಕ್ಕಿದ ಹಣವೆಷ್ಟು, ಉಳಿಕೆ ಹಣ ಎಲ್ಲಿ ಹೋಯಿತು, ಈ ಪ್ರಕರಣದಲ್ಲಿ ಮೇಲಾಧಿಕಾರಿಗಳು ಶಾಮೀಲಾಗಿದ್ದಾರೆಯೇ? ಉದ್ಯಮಿಗೆ ಸೇರಲಾಗಿರುವ ಹಣ ದರೋಡೆಯಾಗುತ್ತಿತ್ತೇ? ದರೋಡೆಕೋರರೊಂದಿಗೆ ಮೈಸೂರು ಪೊಲೀಸರು ಸೇರಿಕೊಂಡು ಈ ಪ್ಲ್ಯಾನ್ ಮಾಡಿದ್ದಾರೆಯೇ? ಎಂಬ ಅಂಶಗಳು ಹೊರ ಬರಬೇಕಿದೆ.

English summary
The Mysore City Police are in the news again for wrong reasons as a case of robbery has been registered against four cops including a Sub-Inspector for having wrongly and wilfully recording Rs. 2.25 crore seized from a Kerala-based businessman from a bus on Jan.4, 2014, as Rs. 20 lakh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X