ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ದಸರಾ 2014, ಗೋಲ್ಡ್ ಕಾರ್ಡ್‌ ಬಿಡುಗಡೆ

|
Google Oneindia Kannada News

ಮೈಸೂರು, ಸೆ.15 : ವಿಶ್ವ ವಿಖ್ಯಾತ ನಾಡ ಹಬ್ಬ ಮೈಸೂರು ದಸರಾಕ್ಕೆ ಆಗಮಿಸುವ ಪ್ರವಾಸಿಗರ ಅನುಕೂಲಕ್ಕಾಗಿ ಜಿಲ್ಲಾಡಳಿತ ಗೋಲ್ಡ್ ಕಾರ್ಡ್‌ಅನ್ನು ಸೋಮವಾರ ಬಿಡುಗಡೆ ಮಾಡಿದೆ. ಒಂದು ಗೋಲ್ಡ್ ಕಾರ್ಡ್ ಬೆಲೆ ರೂ. 7,500 ಆಗಿದ್ದು, ಆನ್‌ಲೈನ್ ಮೂಲಕವೂ ಕಾರ್ಡ್‌ ಕಾಯ್ದಿರಿಸುವ ವ್ಯವಸ್ಥೆ ಕಲ್ಪಿಸಲಾಗಿದೆ.

ಸೋಮವಾರ ಮೈಸೂರು ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸ ಪ್ರಸಾದ್ ಕಾರ್ಡ್‌ ಬಿಡುಗಡೆ ಮಾಡಿದರು. ಸಹಕಾರ ಸಚಿವ ಹೆಚ್.ಎಸ್.ಮಹದೇವ ಪ್ರಸಾದ್, ಶಾಸಕರಾದ ವಾಸು, ಜಿ.ಟಿ.ದೇವೆಗೌಡ, ಜಿಲ್ಲಾಧಿಕಾರಿ ಶಿಖಾ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Gold Card

ಒಂದು ಗೋಲ್ಡ್ ಕಾರ್ಡ್‌ ಬೆಲೆ ರೂ. 7,500 ಆಗಿರುತ್ತದೆ. ಒಂದು ಕಾರ್ಡಿಗೆ ಇಬ್ಬರು ವಯಸ್ಕರು ಹಾಗೂ ಆರು ವರ್ಷದೊಳಗಿನ ಒಂದು ಮಗುವಿಗೆ ಪ್ರವೇಶವಿದ್ದು, ಪ್ರೇಕ್ಷಣೀಯ ಸ್ಥಳಗಳ ಪ್ರವೇಶ ದ್ವಾರದಲ್ಲಿ ಗೋಲ್ಡ್ ಕಾರ್ಡ್ ಪ್ರದರ್ಶಿಸಿದರೆ ಉಚಿತ ಪ್ರವೇಶ ದೂರೆಯಲಿದೆ. ಗೋಲ್ಡ್ ಕಾರ್ಡ್‍ಗಳ ಅವಧಿ ಸೆಪ್ಟೆಂಬರ್ 25ರಿಂದ ಅಕ್ಟೋಬರ್ 4ರ ವರೆಗೆ ಇರುತ್ತದೆ. [ಜನರನ್ನು ದಸರಾಕ್ಕೆ ಆಹ್ವಾನಿಸಲಿದೆ ಆಮಂತ್ರಣ ರಥ]

ಗೋಲ್ಡ್ ಕಾರ್ಡ್ ಹೊಂದಿರುವವರಿಗೆ ಶ್ರೀ ಚಾಮರಾಜೇಂದ್ರ ಮೃಗಾಲಯ, ಜಗನ್ ಮೋಹನ್ ಆರ್ಟ್ ಗ್ಯಾಲರಿ, ಕಾರಂಜಿ ಕೆರೆ, ರೈಲ್ವೆ ಸಂಗ್ರಾಹಲಯ, ಚಾಮುಂಡೇಶ್ವರಿ ದೇವಸ್ಥಾನ, ಮೈಸೂರು ಅರಮನೆ, ದಸರಾ ವಸ್ತು ಪ್ರದರ್ಶನ, ಮಂಡ್ಯ ಜಿಲ್ಲೆಯ ಪ್ರೇಕ್ಷಣಿಯ ಸ್ಥಳಗಳಾದ ರಂಗನತಿಟ್ಟು ಪಕ್ಷಿಧಾಮ, ಕೃಷರಾಜ ಜಲಾಶಯದ ಬೃಂದಾವನವಕ್ಕೆ ಉಚಿತ ಪ್ರವೇಶ ಕಲ್ಪಿಸಲಾಗಿದೆ. [ದಸರಾ ಮಾಹಿತಿ ಇಲ್ಲಿದೆ ನೋಡಿ]

ಇಬ್ಬರು ಜಂಬೂ ಸವಾರಿ ವೀಕ್ಷಿಸಬಹುದು : ಕಾರ್ಡ್ ಪಡೆದವರಿಗೆ ಅ. 4 ರಂದು ನಡೆಯಲಿರುವ ಜಂಬೂ ಸವಾರಿ ವೀಕ್ಷಿಸಲು ಇಬ್ಬರಿಗೆ ಅವಕಾಶವಿದ್ದು, ಅರಮನೆಗೆ ವರಹ ಬಾಗಿಲು ಗೇಟ್ ನಂ. 4 ರಿಂದ ಪ್ರವೇಶವಿರುತ್ತದೆ ಹಾಗೂ ವಾಹನ ನಿಲುಗಡೆಗೆ ದೊಡ್ಡಕೆರೆ ಮೈದಾನದಲ್ಲಿ ವ್ಯವಸ್ಥೆ ಮಾಡಲಾಗಿರುತ್ತದೆ.

ಸಂಜೆ ಬನ್ನಿಮಂಟಪದಲ್ಲಿ ನಡೆಯಲಿರುವ ಪಂಜಿನ ಕವಾಯತು ಕಾರ್ಯಕ್ರಮ ವೀಕ್ಷಿಸಲು ಇಬ್ಬರಿಗೆ ವ್ಯವಸ್ಥೆ ಇರುತ್ತದೆ. ಮೊದಲು ಬಂದವರಿಗೆ ಆದ್ಯತೆ ಮೇಲೆ ಕಾರು ನಿಲುಗಡೆ ಮಾಡಲು ಗೇಟ್ ನಂ.3ರಲ್ಲಿ ವ್ಯವಸ್ಥೆ ಇರುತ್ತದೆ. ಗೋಲ್ಡ್ ಕಾರ್ಡ್ ಪಡೆಯಲು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪ್ರತ್ಯೇಕ ವಿಭಾಗವನ್ನು ತೆರೆಯಲಾಗಿದೆ.

ಆನ್‍ಲೈನ್ ಬುಕ್ ಮಾಡಲು http://www.ticketgenie.in/ ಮತ್ತು http://www.mysoredasara.gov.in/ ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ಹೆಚ್ಚಿನ ಮಾಹಿತಿಗಾಗಿ 0821-2423800 ದೂರವಾಣಿ ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ.

English summary
Mysore district minister V.Shrinivas Prasad on Monday released Mysore Dasara 2014 Gold Card.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X