ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಸರಾ ಅತಿಥಿಗಳಿಗೆ ಔಷಧೀಯ ಸಸ್ಯಗಳ ಸ್ವಾಗತ

|
Google Oneindia Kannada News

ಮೈಸೂರು, ಸೆ.1 : ಮೈಸೂರು ದಸರಾಕ್ಕೆ ಆಗಮಿಸುವ ವಿಐಪಿಗಳು ಮತ್ತು ಅತಿಥಿಗಳಿಗೆ ಹೂಗುಚ್ಛ ನೀಡಿ ಸ್ವಾಗತಿಸುವ ಸಂಪ್ರದಾಯವನ್ನು ಸ್ಥಗಿತಗೊಳಿಸಲು ಜಿಲ್ಲಾಡಳಿತ ನಿರ್ಧರಿಸಿದೆ. ಈ ಬಾರಿಯ ದಸರಾಕ್ಕೆ ಆಗಮಿಸುವವರ ಕೈಗೆ ಔಷಧೀಯ ಸಸ್ಯ ನೀಡಿ ಸ್ವಾಗತಿಸಲಾಗುತ್ತದೆ.

ಮೈಸೂರು ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಪುಷ್ಪಾವತಿ ಅಮರನಾಥ್ ಅವರು ಇಂತಹ ವಿನೂತನ ಪ್ರಯತ್ನ ಆರಂಭಿಸಿದ್ದಾರೆ. ದಸರಾಕ್ಕೆ ಆಗಮಿಸುವ ವಿಐಪಿಗಳು ಮತ್ತು ಅತಿಥಿಗಳಿಗೆ ಈ ಬಾರಿ ಔಷಧೀಯ ಸಸ್ಯವನ್ನು ಹೊಂದಿರುವ ಪಾಟ್‌ಅನ್ನು ನೀಡಿ ಸ್ವಾಗತ ಕೋರಲಾಗುತ್ತದೆ.

B.Pushpa Amarnath

ಈಗಾಗಲೇ ಅತಿಥಿಗಳಿಗೆ ಔಷಧೀಯ ಸಸ್ಯ ನೀಡುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಜಿಲ್ಲಾಧಿಕಾರಿ ಸಿ.ಶಿಖಾ ಅವರ ಜೊತೆ ಪುಷ್ಪಾವತಿ ಅಮರನಾಥ್ ಮಾತುಕತೆ ನಡೆಸಿದ್ದು, ಸಿಎಂ ಸಿದ್ದರಾಮಯ್ಯ ಅವರು ವಿನೂತನ ಪ್ರಯತ್ನಕ್ಕೆ ಒಪ್ಪಿಗೆ ನೀಡಿದ್ದಾರೆ. [ಗುತ್ತಿಗೆದಾರನಿಗೆ ಬೆದರಿಕೆ ಕರೆ]

ಈ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ತಯಾರಿ ನಡೆಸಿರುವ ಜಿಲ್ಲಾಡಳಿತ, ಈಗಾಗಲೇ 5000 ಪಾಟ್‌ಗಳನ್ನು ಖರೀದಿಸಲು ಸಿದ್ಧತೆ ಆರಂಭಿಸಿದೆ. ದಸರಾ ಲಾಂಛನ ಹೊಂದಿರುವ ಪಾಟ್‌ಗಳಲ್ಲಿ ಔಷಧೀಯ ಸಸ್ಯಗಳನ್ನು ಇಟ್ಟು ಅತಿಥಿಗಳಿಗೆ ನೀಡಿ ಅವರನ್ನು ದಸರಾಕ್ಕೆ ಸ್ವಾಗತಿಸಲಾಗುತ್ತದೆ.

ಹೂಗುಚ್ಛ ನೀಡಿದರೆ ಅದನ್ನು ಅತಿಥಿಗಳನ್ನು ಮತೆತು ಬಿಡಬಹುದು ಅಥವ ಅಲ್ಲೇ ಬಿಟ್ಟು ಹೋಗಬಹುದು ಆದ್ದರಿಂದ ಔಷಧೀಯ ಸಸ್ಯಗಳನ್ನು ನೀಡುತ್ತಿದ್ದು, ಇದನ್ನು ತೆಗೆದುಕೊಂಡು ಹೋಗುತ್ತಾರೆ ಎಂದು ಪುಷ್ಪಾವತಿ ಅಮರನಾಥ್ ಹೇಳಿದ್ದಾರೆ. [ದಸರಾ ಮಾಹಿತಿ ಬೇಕೆ ಇಲ್ಲಿ ಕ್ಲಿಕ್ ಮಾಡಿ]

ಜಿಲ್ಲೆಯ ಪ್ರತಿ ತಾಲೂಕಿನಲ್ಲಿಯೂ ಔಷಧ ವನ ನಿರ್ಮಾಣ ಮಾಡುವ ಕನಸು ಷುಪ್ಪಾವತಿ ಅಮರನಾಥ್ ಅವರಿಗಿದೆ. ಹಾಗೆಯೇ ತಂಬಾಕು ರಹಿತ ದಸರಾವನ್ನು ಆಚರಿಸಲು ಅವರು ನಿರ್ಧರಿಸಿದ್ದು, ಧೂಮಪಾನ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.

English summary
VIPs and VVIPs visiting Mysore for the upcoming Dasara will have a surprise. They will be greeted with medicinal plants in clay pots instead of garlands or bouquets. The district administration has come out with the novel idea to sensitive people about the environment. There is a woman behind this idea Dr B.Pushpa Amarnath, President of Mysore Zilla Panchayat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X