ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನರ್ಮ್ ಯೋಜನೆಯಡಿ ಮೈಸೂರಿಗೆ ಕಬಿನಿ ನೀರು

|
Google Oneindia Kannada News

water
ಮೈಸೂರು, ಅ.1: ಮೈಸೂರು ಮತ್ತು ನಂಜನಗೂಡು ತಾಲೂಕುಗಳಿಗೆ ಕುಡಿಯುವ ನೀರು ಪೂರೈಸುವ ಸರ್ಕಾರ ಭರವಸೆ ಶೀಘ್ರವೇ ಈಡೇರಲಿದೆ. ನರ್ಮ್ ಯೋಜನೆಯಡಿ 30 ಗ್ರಾಮಗಳಿಗೆ ನೀರು ಪೂರೈಸಲು ಜಿಲ್ಲಾ ಪಂಚಾಯಿತಿ ಯೋಜನೆ ಸಿದ್ದಪಡಿಸಿದೆ.

ಯೋಜನೆಯ ಅನ್ವಯ ಮೈಸೂರು ಮತ್ತು ನಂಜನಗೂಡು ತಾಲೂಕುಗಳ 30 ಗ್ರಾಮಗಳಿಗೆ 31.14 ಕೋಟಿ ರೂ. ವೆಚ್ಚದಲ್ಲಿ ಕಬಿನಿಯಿಂದ ನೀರು ಪೂರೈಸಲು ಜಿಲ್ಲಾ ಪಂಚಾಯಿತಿ ಯೋಜನೆ ಸಿದ್ದಪಡಿಸಿದೆ. ಕೆಲವು ದಿನಗಳಲ್ಲಿ ಯೋಜನೆ ಕಾಮಗಾರಿ ಪ್ರಾರಂಭವಾಗಲಿದೆ.

ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನರ್ಮ್ ಯೋಜನಯಡಿ ಈ ಕುಡಿಯುವ ನೀರು ಪೂರೈಸುವ ಕಾಮಗಾರಿ ಕೈಗೊಳ್ಳಲಿದೆ. ದಸರಾ ಉತ್ಸವ ಮುಗಿಯುತ್ತಿದ್ದಂತೆ ಯೋಜನೆಗೆ ಕಾಮಗಾರಿ ಆರಂಭಿಸಲು ಸಿದ್ಧತೆ ನಡೆದಿದೆ.

ಯೋಜನೆ ಅನ್ವಯ ತಲೂರು ಕ್ರಾಸ್ ಬಳಿ ನಗರಕ್ಕೆ ನೀರು ಪೂರೈಸುವ ಟ್ಯಾಂಕ್ ಸಮೀಪ ಮತ್ತೊಂದು ಟ್ಯಾಂಕ್ ನಿರ್ಮಿಸಲಾಗುತ್ತದೆ ಇದರ ಮೂಲಕ ಮೈಸೂರು ನಗರಕ್ಕೆ ನೀರು ಪೂರೈಕೆ ಮಾಡಿ, ಓವರ್ ಹೆಡ್ ಟ್ಯಾಂಕ್ ಗಳ ಮೂಲಕ ಉಳಿದ 30 ಗ್ರಾಮಗಳಿಗೆ ನೀರು ಒದಗಿಸಲಾಗುತ್ತದೆ.

ನರ್ಮ್ ಯೋಜನೆಯಡಿ ಕೈಗೊಳ್ಳುವ ಈ ಕಾಮಗಾರಿಯಿಂದ 30 ಗ್ರಾಮಗಳ 12,000 ಮನೆಗಳಿಗೆ ನೀರು ದೊರೆಕುತ್ತದೆ. ಇದರಲ್ಲಿ ಮೈಸೂರು ಮತ್ತು ನಂಜನಗೂಡು ತಾಲೂಕುಗಳು ಸೇರಿವೆ. ಮೈಸೂರು ನಗರಕ್ಕೂ ಯೋಜನೆಯಿಂದ ಹೆಚ್ಚಿನ ನೀರು ಲಭ್ಯವಾಗಲಿದೆ.

ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಈ ಯೋಜನೆ ಪೂರ್ಣಗೊಳಿಸಿ ಐದು ವರ್ಷಗಳ ಕಾಲ ಅದರ ಉಸ್ತುವಾರಿ ನೋಡಿಕೊಳ್ಳಲಿದೆ. ನಂಜನಗೂಡು ತಾಲೂಕಿನ 3 ಗ್ರಾಮ ಮತ್ತು ಮೈಸೂರಿನ 27 ಗ್ರಾಮಗಳು ಯೋಜನೆ ವ್ಯಾಪ್ತಿಗೆ ಒಳಪಡಲಿವೆ.

English summary
Promises of water supply for water sparse villages in Mysore taluk is expected to be a reality soon as the Zilla Panchayat is ready with a water supply scheme to be implemented under Jawaharlal Nehru Urban Renewal Mission (JnNURM). Three villages in Nanjangud taluk and 27 villages from Mysore taluk will benefit from the scheme.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X