ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಜಕೀಯ ಬೇಡಪ್ಪಾ, ನಾನು ಬರೋಲ್ಲ : ದರ್ಶನ್

|
Google Oneindia Kannada News

ಮೈಸೂರು, ಏ.11 : ಮೈಸೂರಿನಲ್ಲಿ ಚುನಾವಣಾ ಪ್ರಚಾರಕ್ಕೆ ಶುಕ್ರವಾರ ತಾರಾ ಮೆರಗು ಸಿಕ್ಕಿದೆ. ಚಾಲೆಂಜಿಗ್ ಸ್ಟಾರ್ ದರ್ಶನ್ ಕಾಂಗ್ರೆಸ್ ಅಭ್ಯರ್ಥಿ ಎಚ್.ವಿಶ್ವನಾಥ್ ಪರ ಪ್ರಚಾರ ಆರಂಭಿಸಿದ್ದಾರೆ. ತಾವು ರಾಜಕೀಯಕ್ಕೆ ಬರುವುದಿಲ್ಲ ಎಂದು ಈ ಸಂದರ್ಭದಲ್ಲಿ ದರ್ಶನ್ ಪ್ರಕಟಿಸಿದರು.

ಶುಕ್ರವಾರ ಮೈಸೂರಿನಲ್ಲಿ ನಟ ದರ್ಶನ್ ಕಾಂಗ್ರೆಸ್ ಅಭ್ಯರ್ಥಿ ಎಚ್.ವಿಶ್ವನಾಥ್ ಪರವಾಗಿ ಪ್ರಚಾರ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ದರ್ಶನ್, ಸ್ಟಾರ್ ಗಿರಿಯನ್ನು ಬದಿಗಿಟ್ಟು ಪ್ರಚಾರಕ್ಕೆ ಬಂದಿದ್ದೇನೆ. ಶಿವಮೊಗ್ಗ ಮತ್ತು ಮಂಡ್ಯಕ್ಕೆ ಪ್ರಚಾರಕ್ಕೆ ತೆರಳುವುದಿಲ್ಲ. ನಾಳೆಯಿಂದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದೇನೆ ಎಂದು ದರ್ಶನ್ ಹೇಳಿದರು.

Darshan

ಕಳೆದ ಐದು ದಿನಗಳಿಂದ ಬಿಡುವಾಗಿದ್ದೆ. ಆದ್ದರಿಂದ ವಿವಿಧ ಪಕ್ಷಗಳ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಿದ್ದೇನೆ. ಒಂದು ತಿಂಗಳ ಮೊದಲೇ ಪ್ರಚಾರಕ್ಕೆ ಕರೆದಿದ್ದರು ಅವರ ಪರವಾಗಿ ಪ್ರಚಾರ ನಡೆಸಿದ್ದೇನೆ. ಇನ್ನು ಯಾವ ಅಭ್ಯರ್ಥಿಗಳು ಪ್ರಚಾರ ಮಾಡುವುದಿಲ್ಲ ಎಂದು ದರ್ಶನ್ ಸ್ಪಷ್ಟಪಡಿಸಿದರು.

ರಾಜಕೀಯಕ್ಕೆ ಬರುವುದಿಲ್ಲ : ರಾಜಕೀಯಕ್ಕೆ ಬರುತ್ತೀರಾ? ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ದರ್ಶನ್, ನನಗೆ ರಾಜಕೀಯ ಆಗಿಬರುವುದಿಲ್ಲ. ಆದ್ದರಿಂದ ನಾನು ಎಂದೂ ರಾಜಕಾರಣಕ್ಕೆ ಬರುವುದಿಲ್ಲ ಎಂದು ಹೇಳಿದರು. ನನಗೆ ಕೋಪ ಹೆಚ್ಚು ನನ್ನ ಕೋಪಕ್ಕೆ ರಾಜಕಾರಣ ಆಗಿ ಬರುವುದಿಲ್ಲ. ಆದ್ದರಿಂದ ರಾಜಕೀಯ ನಮಗೆ ಬೇಡ ಎಂದರು. [ಹೇಗಿದೆ ಮೈಸೂರು ಚುನಾವಣಾ ಕಣ]

ಪಕ್ಷಾತೀತ ಪರವಾದ ಪ್ರಚಾರ : ಒಂದೊಂದು ದಿನ ಒಂದೊಂದು ಪಕ್ಷದ ಪರವಾಗಿ ಪ್ರಚಾರ ಮಾಡುತ್ತಿದ್ದೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ದರ್ಶನ್, ನಾನು ಯಾವ ಪಕ್ಷದ ಪರವಾಗಿಯೂ ಇಲ್ಲ. ಕೆಲವು ಅಭ್ಯರ್ಥಿಗಳ ಪರವಾಗಿ ಮಾತ್ರ ಪ್ರಚಾರ ಮಾಡುತ್ತೇನೆ ಎಂದು ದರ್ಶನ್ ಹೇಳಿದರು. [ಪಿಸಿ ಮೋಹನ್ ಪರ ದರ್ಶನ್ ಪ್ರಚಾರ]

ದೊಡ್ಡವರ ಮಾತಿಗೆ ಪ್ರತಿಕ್ರಿಯೆ ನೀಡೋಲ್ಲ : ಸಿನಿಮಾ ನಟ-ನಟಿಯರು ಚುನಾವಣಾ ಪ್ರಚಾರ ಮಾಡುವ ಬಗ್ಗೆ ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್ ನೀಡಿರುವ ಹೇಳಿಕೆ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ದೊಡ್ಡವರ ಕುರಿತು ಯಾವುದೇ ಹೇಳಿಕೆ ನೀಡುವುದಿಲ್ಲ ಎಂದು ದರ್ಶನ್ ತಿಳಿಸಿದರು. [ಕಿಮ್ಮನೆ, ಆಯನೂರು ವಿರುದ್ಧ ತಿರುಗಿ ಬಿದ್ದ ಕಲಾವಿದರು]

English summary
Elections 2014 : I would never enter politics said Kannada actor Darshan. On Friday, April 11 Darshan campaigned for Mysore Congress candidate H Vishwanath. In campaigning he said, If there are people who want to get into the system and bring about some change, they can join politics.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X