ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಸರಾಗೆ ಮೈಸೂರು ಟೂರಿಸ್ಟ್‌ ಪಾಸ್‌­ಪೋರ್ಟ್ ಲಭ್ಯ

|
Google Oneindia Kannada News

ಮೈಸೂರು, ಆ.20 : 2014ರ ದಸರಾ ಮಹೋ­ತ್ಸವ­ದಲ್ಲಿ ಪಾಲ್ಗೊಳ್ಳುವ ಪ್ರವಾಸಿ­ಗರು ಮೈಸೂರು ಹಾಗೂ ಸುತ್ತಮುತ್ತಲಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಅನುಕೂಲವಾಗುವಂತೆ 'ಮೈಸೂರು ಟೂರಿಸ್ಟ್‌ ಪಾಸ್‌­ಪೋರ್ಟ್' ಲಭ್ಯವಾಗಲಿವೆ. ಟಿಕೆಟ್ ಕೊಳ್ಳಲು ಆಗುವ ವಿಳಂಬ ತಪ್ಪಿಸಲು ಜಿಲ್ಲಾಡಳಿತ ಈ ಯೋಜನೆ ತಯಾರಿಸಿದೆ.

ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ದಸರಾ ಸಿದ್ಧತೆಗಳ ಸಭೆಯಲ್ಲಿ ಪ್ರವಾಸಿ ತಾಣಗಳ ಸುಲಭ ವೀಕ್ಷಣೆಗೆ, ಟಿಕೆಟ್‌ ಕೊಳ್ಳಲು ಆಗುವ ಕಾಲ ವಿಳಂಬವನ್ನು ತಪ್ಪಿಸಲು ಮೈಸೂರು ಟೂರಿಸ್ಟ್‌ ಪಾಸ್‌ಪೋರ್ಟ್ ಜಾರಿಗೆ ತರಲು ತೀರ್ಮಾನ ಕೈಗೊಳ್ಳಲಾಗಿದೆ.

Mysore Dasara

ಪಾಸ್‌ಪೋರ್ಟ್ ಬಗ್ಗೆ ಮಾಹಿತಿ ನೀಡಿದ ದಸರಾ ವಿಶೇಷಾಧಿಕಾ­ರಿಯೂ ಆದ, ಜಿಲ್ಲಾಧಿ­ಕಾರಿ ಸಿ. ಶಿಖಾ ಅವರು, ಸೆಪ್ಟೆಂಬರ್‌ ಮೊದಲ ವಾರದಲ್ಲಿ ಈ ಪಾಸ್‌ಪೋರ್ಟ್ ಲಭ್ಯ­ವಾಗಲಿದ್ದು, ಆನ್‌ಲೈನ್‌ ಮೂಲಕ ಈ ತಿಂಗಳ ಕೊನೆಯ ವಾರದಿಂದ ಕಾಯ್ದರಿಸಬಹುದಾಗಿದೆ ಎಂದು ಹೇಳಿದರು. [ಜಂಬೂ ಸವಾರಿ ಆನೆಗಳ ಬಯೋಡೇಟಾ]

ಮೈಸೂರಿನ ಅಂಬಾವಿಲಾಸ ಅರ­ಮನೆ, ಮೃಗಾಲಯ, ಕಾರಂಜಿಕೆರೆ ಉದ್ಯಾನ, ಚಾಮುಂಡಿಬೆಟ್ಟ, ಕೆಆರ್‌ಎಸ್‌ ಅಣೆಕಟ್ಟೆ ಹಾಗೂ ರಂಗನ­ತಿಟ್ಟು ಪಕ್ಷಿಧಾಮವನ್ನು ಮೈಸೂರು ಟೂರಿಸ್ಟ್‌ ಪಾಸ್‌ಪೋರ್ಟ್ ಮೂಲಕ ವೀಕ್ಷಿಸಬಹುದು. ಸೆಪ್ಟೆಂಬರ್‌ 15­ರಿಂದ ಅಕ್ಟೋಬರ್‌ 15­ರವರೆಗೆ ಈ ಪಾಸ್‌ಪೋರ್ಟ್ ಅವಧಿ ಇರುತ್ತದೆ.

ಮೂರು ಮಾದರಿಗಳು : ಮೈಸೂರು ಟೂರಿಸ್ಟ್‌ ಪಾಸ್‌­ಪೋರ್ಟ್ ಮೂರು ಮಾದರಿಗಳಲ್ಲಿ ಇರುತ್ತದೆ. ಮೊದಲ ಮಾದರಿಯಲ್ಲಿ ಅರಮನೆ ಹಾಗೂ ಮೃಗಾ­ಲಯ ಒಳಗೊಂಡಿದ್ದು, ಇದಕ್ಕಾಗಿ ಕಿತ್ತಲೆ ಬಣ್ಣದ ಪಾಸ್‌ಪೋರ್ಟ್ ಇರು­ತ್ತದೆ. ಇದರ ಅವಧಿ ಒಂದು ದಿನ ಮಾತ್ರ. ವಯಸ್ಕರಿಗೆ ರೂ 80, ಮಕ್ಕಳಿಗೆ ರೂ 40 ದರ ನಿಗದಿ ಮಾಡಲಾಗಿದೆ.

ಎರಡನೆಯ ಮಾದರಿಯಲ್ಲಿ ಅರ­ಮನೆ, ಮೃಗಾಲಯ, ಕಾರಂಜಿಕೆರೆ ಉದ್ಯಾನ ಹಾಗೂ ಚಾಮುಂಡಿ ಬೆಟ್ಟ ಒಳಗೊಂಡಿದ್ದು ಹಸಿರು ಬಣ್ಣದ ಪಾಸ್‌­ಪೋರ್ಟ್ ಇರುತ್ತದೆ. ಗರಿಷ್ಠ ಎರಡು ದಿನಗಳ ಅವಧಿ ಹೊಂದಿರುವ ಈ ಪಾಸ್‌ಪೋರ್ಟ್ ಪಡೆಯಲು ವಯಸ್ಕರು ರೂ. 120 ಹಾಗೂ ಮಕ್ಕಳು ರೂ. 75 ರೂ. ಪಾವತಿ ಮಾಡಬೇಕು.

ನೀಲಿ ಬಣ್ಣದ ಮೂರನೆ ಮಾದರಿಯ ಪಾಸ್‌ಪೋರ್ಟ್‌ ಮೂಲಕ ಅರಮನೆ, ಮೃಗಾ­ಲಯ, ಕಾರಂಜಿಕೆರೆ ಉದ್ಯಾನ, ಚಾಮುಂಡಿ ಬೆಟ್ಟ, ಕೆಆರ್‌ಎಸ್‌ ಅಣೆ­ಕಟ್ಟೆ ಹಾಗೂ ರಂಗನತಿಟ್ಟು ಪಕ್ಷಿಧಾಮ­ಗಳಿಗೆ ಭೇಟಿ ನೀಡಬಹುದಾಗಿದೆ. ಈ ಪಾಸ್‌ಪೋರ್ಟ್ ಅವಧಿ ಮೂರು ದಿನಗಳಾಗಿದ್ದು, ವಯಸ್ಕರು 160 ಹಾಗೂ ಮಕ್ಕಳು 100 ರೂ. ನೀಡಬೇಕಾಗಿದೆ.

ಎಲ್ಲ ಪ್ರವಾ­ಸೋದ್ಯಮ ಕೇಂದ್ರ, ಪ್ರವಾಸೋದ್ಯಮ ಇಲಾಖೆ, ಪ್ರಮುಖ ಹೋಟೆಲ್‌ಗಳಲ್ಲಿ ಪಾಸ್‌ಪೋರ್ಟ್ ಮಾರಾಟ ಮಾಡಲಾಗುತ್ತದೆ. ಪಾಸ್‌ಪೋರ್ಟ್ ಮೇಲೆ ಕಲರ್‌ ಕೋಡ್‌/ವಿನ್ಯಾಸ ಇರುತ್ತದೆ. ಇಂಟರ್‌ನೆಟ್‌ ಮೂಲಕ ಕಾಯ್ದರಿಸುವವರಿಗೆ ಗುರುತಿನಪತ್ರ ಕಡ್ಡಾಯ­.

English summary
Multi Destination Tourism passport is being introduced for tourists coming to Mysore in the time of Dasara. Passport available in three different packages said, Mysore Deputy Commissioner C.Shikha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X