ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅರ್ಜುನನಿಗೆ ಅಂಬಾರಿ ಹೊರುವ ತಾಲೀಮು ಆರಂಭ

|
Google Oneindia Kannada News

ಮೈಸೂರು, ಸೆ. 22 : ವಿಶ್ವವಿಖ್ಯಾತ ಮೈಸೂರು ದಸರಾಕ್ಕೆ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊರುವ ಅರ್ಜುನನಿಗೆ ಮರದ ಅಂಬಾರಿ ಹೊರುವ ತಾಲೀಮನ್ನು ಭಾನುವಾರದಿಂದ ಆರಂಭಿಸಲಾಗಿದೆ.

ಅ.4ರಂದು ನಡೆಯುವ ಜಂಬೂ ಸವಾರಿ ಮಾದರಿಯಲ್ಲಿಯೇ ಭಾನುವಾರ ಅರ್ಜುನನ ತಾಲೀಮು ಆರಂಭಿಸಲಾಯಿತು. ಬಲರಾಮ, ಅಭಿಮನ್ಯು, ಗಜೇಂದ್ರ, ದುರ್ಗಾ ಪರಮೇಶ್ವರಿ ಹಾಗೂ ಕಾವೇರಿ ಆನೆಗಳು ತಾಲೀಮಿನ ವೇಳೆ ಅರ್ಜುನನ ಜೊತೆಗಿದ್ದರು. [ಮೈಸೂರು ದಸರಾ ಚಿತ್ರಗಳು]

Arjuna

250 ಕೆ.ಜಿ.ಮರದ ಅಂಬಾರಿಯನ್ನು ಆನೆಗಳ ತಾಲೀಮಿಗಾಗಿ ಸಿದ್ಧಪಡಿಸಲಾಗಿದೆ. ಅಂಬಾರಿಯೊಳಗೆ ಮರಳಿನ ಮೂಟೆಗಳನ್ನು ಇಟ್ಟು 600 ರಿಂದ 650 ಕೆ.ಜಿ.ತೂಕ ಹೊರುವ ತಾಲೀಮು ಮಾಡಿಸಲಾಗುತ್ತಿದೆ. ಭಾನುವಾರ ಬೆಳಗ್ಗೆ 8.30ಕ್ಕೆ ಅರಮನೆಯಿಂದ ಹೊರಟ ಅರ್ಜು 1.20 ನಿಮಿಷದ ಅವಧಿಯಲ್ಲಿ ಬನ್ನಿಮಂಟಪವನ್ನು ತಲುಪಿದ. [ದಸರಾ ಕುರಿತ ಎಲ್ಲಾ ಗೊಂದಲಗಳಿಗೆ ತೆರೆ]

ಆನೆಗಳೂ ಬನ್ನಿ ಮಂಟಪಕ್ಕೆ ತೆರಳುವಾಗ ಮಾತ್ರ ಅವುಗಳ ಮೇಲೆ ಮರಳಿನ ಮೂಟೆ ಹೊರಿಸಲಾಗುತ್ತದೆ. ವಾಪಸ್ ಆಗುವಾಗ ಕೇವಲ ಅಂಬಾರಿ ಹೊತ್ತು ಆನೆಗಳು ಅರಮನೆಗೆ ವಾಪಸ್ ಆಗುತ್ತವೆ. ಸಂಜೆ ಪುನಃ ಆರ್ಯವೇದ ವೃತ್ತದ ತನಕ ಆನೆಗಳನ್ನು ಕರೆದುಕೊಂಡು ಹೋಗಲಾಗುತ್ತದೆ ಎಂದು ಆನೆಗಳ ಯೋಗಕ್ಷೇಮ ನೋಡಿಕೊಳ್ಳುತ್ತಿರುವ ಡಾ.ನಾಗರಾಜ್ ಹೇಳಿದ್ದಾರೆ. [ಮೈಸೂರು ಬಗ್ಗೆ ತಿಳಿಯಿರಿ]

ಪ್ರತಿದಿನ ಒಂದು ಆನೆಯಂತೆ ಅರ್ಜುನ, ಬಲರಾಮ, ಗಜೇಂದ್ರ, ಅಭಿಮನ್ಯು ಆನೆಗಳಿಗೆ ಮರದ ಅಂಬಾರಿ ಹೊರುವ ತರಬೇತಿಯನ್ನು ನೀಡಲಾಗುತ್ತದೆ. ಪ್ರತಿ ದಿನ ಮರಳಿನ ಮೂಟೆಯ ಭಾರವನ್ನು ಹೆಚ್ಚು ಮಾಡುತ್ತಾ 750 ಕೆ.ಜಿ.ಗೆ ತರಲಾಗುತ್ತದೆ ಎಂದು ನಾಗರಾಜ್ ಹೇಳಿದ್ದಾರೆ. ಸೆ.25ರಂದು ದಸರಾಕ್ಕೆ ಚಾಲನೆ ದೊರೆಯಲಿದ್ದು, ಅ.4ರಂದು ಜಂಬೂ ಸವಾರಿ ನಡೆಯಲಿದೆ.

English summary
Mysore Dasara elephant Arjuna carries a wooden howdah, that weighs equal to the golden howdah, during a rehearsal for the Vijayadashami procession in Mysore on Sunday. Mysore Dasara 2014 will be celebrate from September 25th to October 4th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X