ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಏರೋ ಮಾಡೆಲಿಂಗ್‌ಗೆ ಸಾಕ್ಷಿಯಾದ 15 ವಿಮಾನಗಳು

|
Google Oneindia Kannada News

ಮೈಸೂರು, ಸೆ. 30 : ಮೈಸೂರು ದಸರಾ ಅಂಗವಾಗಿ ಜಿಲ್ಲಾಡಳಿತ ಹಾಗೂ ಮೈಸೂರು ಫ್ಲಲಿಂಗ್ ಅಸೋಸಿಯೇಷನ್ ವತಿಯಿಂದ ಆಯೋಜಿಸಿದ್ದ ಏರೋ ಮಾಡೆಲಿಂಗ್ ಪ್ರದರ್ಶನ ಸೋಮವಾರ ನಡೆಯಿತು. ಒಟ್ಟು 15 ರಿಮೋಟ್ ನಿಯಂತ್ರಣ ವಿಮಾನಗಳು ಆಕಾಶದಲ್ಲಿ ಹಾರಾಡುವ ಮೂಲಕ ಪ್ರದರ್ಶನ ವೀಕ್ಷಿಸಲು ಬಂದಿದ್ದ ಜನರ ಮೆಚ್ಚುಗೆಗಳಿಸಿದವು.

ಬನ್ನಿ ಮಂಟಪದ ಕವಾಯತು ಮೈದಾನದಲ್ಲಿ ಆಯೋಜಿಸಲಾಗಿದ್ದ ಏರೋ ಮಾಡೆಲಿಂಗ್ ಪ್ರದರ್ಶನಕ್ಕೆ ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಚಾಲನೆ ನೀಡಿದರು. ಜಿಲ್ಲಾಧಿಕಾರಿ ಸಿ.ಶಿಖಾ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಪಾಲಯ್ಯ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. [ಮೈಸೂರು ದಸರಾ ಚಿತ್ರಗಳನ್ನು ನೋಡಿ]

ಮೈಸೂರು, ಮಡಿಕೇರಿ, ಬೆಂಗಳೂರು ಹಾಗೂ ಸುತ್ತಮುತ್ತಲಿನ ವೃತ್ತಿಪರ ರಿಮೋಟ್ ನಿಯಂತ್ರಣ ವಿಮಾನ ಫ್ಲೈಯರ್‌ಗಳು ಪ್ರದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಒಟ್ಟು 15 ರಿಮೋಟ್ ನಿಯಂತ್ರಣ ವಿಮಾನಗಳು ಆಕಾಶದಲ್ಲಿ ಹಾರಾಡುವ ಮೂಲಕ ಜನರನ್ನು ರಂಜಿಸಿದವು.

ಅತಿ ಕಿರಿಯ ರೇಡಿಯೋ ನಿಯಂತ್ರಣ ಪೈಲೆಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಬೆಂಗಳೂರಿನ ಏಳು ವರ್ಷದ ಆದಿತ್ಯ ಆರ್ ಪವಾರ್ ಅವರು ಪ್ರದರ್ಶನದ ಪ್ರಮುಖ ಆಕರ್ಷಣೆಯಾಗಿದ್ದರು. ರೇಡಿಯೋ ನಿಯಂತ್ರಣ ಪೈಲೆಟ್‍ಗಳಾದ ಅಲೆಕ್ಸ್ ಪ್ರವೀಣ್, ಅಭೈಯ್ ಪವಾರ್, ಸಾಗರ್, ಸ್ಯಾಮ್ಯಯೆಲ್, ಜಯಪ್ರಕಾಶ್, ರಾಜಿ, ಶಿವಕುಮಾರ್ ಪ್ರದರ್ಶನದಲ್ಲಿ ಭಾಗವಹಿಸಿದ್ದರು.

Aero Modelling Show
English summary
Mysore Dasara Aero-Modelling Show, organized by the Mysore Flying Association, witnessed 15 model aircraft including two helicopters at the Torchlight Parade Ground in Bannimantap on Monday, September 29.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X