ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ರಂಗಾಯಣದಲ್ಲಿ ವಾರಾಂತ್ಯ ನಾಟಕೋತ್ಸವ

By Ashwath
|
Google Oneindia Kannada News

 Rangayana Mysore
ಮೈಸೂರು, ಮೇ.29: ಮೈಸೂರಿನ ರಂಗಾಸಕ್ತರಿಗೆ ಸಂತಸದ ಸುದ್ದಿ. ನಗರದ ರಂಗಾಯಣದಲ್ಲಿ ಇನ್ನು ಒಂದು ತಿಂಗಳ ಕಾಲ ವಾರಾಂತ್ಯದಲ್ಲಿ ರಾಜ್ಯದ ವಿವಿಧ ನಾಟಕ ತಂಡಗಳ ನಾಟಕಗಳು ಪ್ರದರ್ಶ‌ನಗೊಳ್ಳಲಿದೆ.

ಶನಿವಾರ ಮತ್ತು ಅದಿತ್ಯವಾರ ಒಂದು ತಿಂಗಳ ಕಾಲ ರಾಜ್ಯದ ಹೆಸರಾಂತ ತಂಡಗಳು ನಾಟಕ ಪ್ರದರ್ಶನ ನೀಡಲಿದ್ದು, ಒಂಭತ್ತು ತಂಡಗಳು ಹೆಸರು ನೋಂದಾಯಿಸಿದೆ ಎಂದು ರಂಗಾಯಣದ ನಿರ್ದೇಶಕ ಎಚ್‌ ಜನಾರ್ದ‌ನ ಹೇಳಿದ್ದಾರೆ.[ಮೈಸೂರು: ಬಿಸಿಎಂ ವಿದ್ಯಾರ್ಥಿನಿಲಯ ಪ್ರವೇಶಕ್ಕೆ ಅರ್ಜಿ]

ರಾಜ್ಯದಲ್ಲಿ ರಾಜ್ಯದಲ್ಲಿ ಉತ್ತಮ ನಾಟಕ ಕಲಾವಿದರಿದ್ದಾರೆ. ಆದರೆ ಆರ್ಥಿ‌ಕ ಕಾರಣಗಳಿಂದಾಗಿ ಅವರ ಪ್ರತಿಭೆಗಳಿಗೆ ಅವಕಾಶ ಇಲ್ಲದಂತಾಗಿದೆ. ಈ ಕಾರಣಕ್ಕಾಗಿ ಮೈಸೂರಿನಲ್ಲಿ ಕಲಾವಿದರ ಪ್ರತಿಭೆಯನ್ನು ಅನಾವರಣಗೊಳಿಸಿ, ನಾಟಕ ತಂಡಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಈ ನಾಟಕೋತ್ಸವವನ್ನು ಆಯೋಜನೆ ಮಾಡಲಾಗಿದೆ ಎಂದು ಎಂದು ಜನಾರ್ದನ ತಿಳಿಸಿದರು.

ಜೂನ್‌.1ರಂದು ನಾಟಕೋತ್ಸವ ಉದ್ಘಾಟನೆಯಾಗಲಿದೆ. ಲಿಂಗದೇವರು ಹಳೇಮನೆ ರಚಿಸಿದ ಚಿಕ್ಕದೇವ ಭೂಪ, ಬಿ.ವಿ ಕಾರಂತರ ಸತ್ತವರ ನೆರಳು, ಚಂದ್ರಶೇಖರ ಕಂಬಾರರ ಜೀಕೆ ಮಾಸ್ತರರ ಪ್ರಣಯ ಪ್ರಸಂಗ ನಾಟಕಗಳು ನಾಟಕೋತ್ಸವದಲ್ಲಿ ಪ್ರದರ್ಶ‌ನಗೊಳ್ಳಲಿದೆ.

English summary
Rangayana the state repertory is bringing one more theatre festival to the door step of the Mysoreans and this time it will be exhibition of theatre talent by the amateur troupe from all over the state. As a part of festival every week on Saturday and Sunday the amateur troupes will stage dramas and totally nine troupes have registered and acknowledged their participation with their plays
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X