ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ಮೃಗಾಲಯಕ್ಕೆ ಬಂದ ವಿರಾಟ್, ಬಬ್ಲಿ

|
Google Oneindia Kannada News

ಮೈಸೂರು, ಜು. 22 : ಮೈಸೂರಿನ ಚಾಮರಾಜೇಂದ್ರ ಮೃಗಾಲಯದ ಆಕರ್ಷಣೆ ಮತ್ತಷ್ಟು ಹೆಚ್ಚಾಗಿದೆ. ಬಿಹಾರ ರಾಜಧಾನಿ ಪಟನಾದಿಂದ ಒಂದು ಕೊಂಬಿನ ಜೋಡಿ ಘೇಂಡಾಮೃಗಗಳನ್ನು ಮೃಗಾಲಯಕ್ಕೆ ತರಿಸಲಾಗಿದೆ. ಭಾನುವಾರ ತಡರಾತ್ರಿ ಇಬ್ಬರು ಹೊಸ ಅತಿಥಿಗಳು ಮೃಗಾಲಯಕ್ಕೆ ಸುರಕ್ಷಿತವಾಗಿ ಬಂದು ಸೇರಿದ್ದಾರೆ.

ಹೊಸ ಅತಿಥಿಗಳ ಆಗಮನದ ಬಗ್ಗೆ ಮಾಹಿತಿ ನೀಡಿರುವ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಪಿ.ರವಿ ಅವರು, ಬಿಹಾರದ ಪಟನಾದಿಂದ ಜೋಡಿ ಘೇಂಡಾಮೃಗಗಳನ್ನು ತರಲಾಗಿದೆ. 2,200 ಕಿ.ಮೀ. ದೂರದಿಂದ ಆಗಮಿಸಿರುವ ಅತಿಥಿಗಳ ಹೆಸರು ವಿರಾಟ್‌ ಮತ್ತು ಬಬ್ಲಿ ಎಂದು ತಿಳಿಸಿದ್ದಾರೆ.

Mysore zoo

13 ದಿನಗಳ ಸುದೀರ್ಘ‌ ಪ್ರಯಾಣದ ಬಳಿಕ ಭಾನುವಾರ ತಡರಾತ್ರಿ ಘೇಂಡಾಮೃಗಗಳು ಮೃಗಾಲಯ ತಲುಪಿವೆ. ದಶಕದ ನಂತರ ಮೈಸೂರು ಮೃಗಾಲಯದಲ್ಲಿ 1 ಕೊಂಬುಳ್ಳ ಭಾರತದ ಘೇಂಡಾಮೃಗವನ್ನು ಪ್ರದರ್ಶಿಸುವ ಅವಕಾಶ ಸಿಕ್ಕಿದೆ ಎಂದು ಹೇಳಿದ್ದಾರೆ.

ಮೂರು ವರ್ಷ ವಯಸ್ಸಿನ ವಿರಾಟ್‌ 1,360 ಕೆಜಿ ತೂಕವಿದೆ. ಒಂದು ವರ್ಷದ ಬಬ್ಲಿ 725 ಕೆಜಿ ತೂಕವಿದ್ದು ಮೃಗಾಲಯ ಪರಿಸರದಲ್ಲಿ ಘೇಂಡಾಮೃಗಗಳು 40 ವರ್ಷಗಳವರೆಗೆ ಜೀವಿಸಬಲ್ಲವು ಎಂದು ಮಾಹಿತಿ ನೀಡಿದ್ದಾರೆ. [ಮೃಗಾಲಯಕ್ಕೆ ನಾಲ್ಕು ಹೊಸ ಅತಿಥಿಗಳು]

ಗಂಡು ಮತ್ತು ಹೆಣ್ಣು ಎರಡೂ ಘೇಂಡಾಮೃಗಗಳು ಮೃಗಾಲಯ ಪರಿಸರದಲ್ಲಿ ಶೀಘ್ರದಲ್ಲಿಯೇ ಪ್ರವರ್ಧಮಾನಕ್ಕೆ ಬಂದು ಅವುಗಳ 6 ಮತ್ತು 5ನೇ ವಯಸ್ಸಿನಲ್ಲಿ ತಮ್ಮ ಸಂತಾನಾಭಿವೃದ್ಧಿ ಪ್ರಕ್ರಿಯೆ ಪ್ರಾರಂಭಿಸುತ್ತವೆ ಎಂದು ತಿಳಿಸಿದ್ದಾರೆ. [ಮೈಸೂರು ಮೃಗಾಲಯದ ವೆಬ್ ಸೈಟ್]

ಕಳೆದ ತಿಂಗಳು ಇಸ್ರೇಲ್ ನ ರಾಮತ್ ಗಾನ್ ಮೃಗಾಲಯದಿಂದ ಎಳೆಯ ವಯಸ್ಸಿನ ನಾಲ್ಕು ಜೀಬ್ರಾಗಳನ್ನು ತಂದು ಮೃಗಾಲಯದಲ್ಲಿ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು.

English summary
After five days of journey from Patna a pair of Greater One-horned rhinoceros arrived to Mysore zoo on Sunday night. Virat and Bobbli are exploring their new home at the Mysore zoo. Virat is three-years-old while Bobbli is a year old.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X