ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮದ್ಯದ ದೊರೆಗೆ ಮಹಿಳಾ ಉದ್ಯೋಗಿಗಳ ಖಾರವಾದ ಪತ್ರ

By Srinath
|
Google Oneindia Kannada News

ಮುಂಬೈ,ಮಾರ್ಚ್ 7: ಮಹಿಳಾ ದಿನಾಚರಣೆ ಸಂದರ್ಭದಲ್ಲಿ ಕನ್ನಡದ ಜಾಕಿ, ಸಾಲಶೂರ ವಿಜಯ್ ಮಲ್ಯ ಅವರನ್ನು ಕಿಂಗ್ ಫಿಷರ್ ಏರ್ ಲೈನ್ಸ್ ಸಂಸ್ಥೆಯ ಮಹಿಳಾ ಉದ್ಯೋಗಿಗಳು ಸಮ ತರಾಟೆಗೆ ತೆಗೆದುಕೊಂಡಿದ್ದಾರೆ.

ಸಾವಿರಾರು ಕೋಟಿ ರೂ ಸಾಲ ಉಳಿಸಿಕೊಂಡು ಮಾನ ಹರಾಜು ಆಗುತ್ತಿದ್ದರೂ IPL ಹರಾಜಿನಲ್ಲಿ ಭಾಗವಹಿಸಿದ್ದ ವಿಜಯ್ ಮಲ್ಯ ವಿರುದ್ಧ ಕಳೆದ ತಿಂಗಳು ವ್ಯಾಲೆಂಟೈನ್ಸ್ ಡೆ ಸಂದರ್ಭದಲ್ಲಿ ಕಿಂಗ್ ಫಿಷರ್ ಏರ್ ಲೈನ್ಸ್ ಸಂಸ್ಥೆಯ ಮುಂಬೈ ಉದ್ಯೋಗಿಗಳು ಕ್ರಿಕೆಟ್ಟಿಗ ಯುವರಾಜ ಸಿಂಗ್ ಅವರಿಗೆ ಒಲುಮೆಯ ಓಲೆ ಬರೆದಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು. ಗಮನಾರ್ಹವೆಂದರೆ, ಯುವರಾಜ್ ಆ ಪತ್ರಕ್ಕೆ ಯಾವುದೇ ಪ್ರತ್ಯುತ್ತರ ನೀಡಿಲ್ಲ. ಈಗ ಮಹಿಳಾ ಉದ್ಯೋಗಿಗಳ ಸರದಿ. ಪತ್ರ ತುಸು ಹೆಚ್ಚೇ ಖಾರವಾಗಿದೆ.

ವಿಮಾನಯಾನ ಉದ್ಯಮವನ್ನು ಎಂದಿಗೂ ಗಂಭೀರವಾಗಿ ಪರಿಗಣಿಸದೆ ಕೊನೆಗೆ Kingfisher Airlines (KFA) ಸಂಸ್ಥೆಯ ಮಹಿಳಾ ಉದ್ಯೋಗಿಗಳನ್ನು ನಡುನೀರಿನಲ್ಲಿ ಕೈಬಿಟ್ಟಿದ್ದಕ್ಕೆ ಸ್ತ್ರೀಲೋಲ ಎಂದು ಖ್ಯಾತರಾಗಿರುವ ಮಲ್ಯ ವಿರುದ್ಧ ಮಹಿಳೆಯರು Women's Day ಸಂದರ್ಭದಲ್ಲಿ ಪತ್ರ ಮುಖೇನ ಕೆಂಡಾಮಂಡಲರಾಗಿದ್ದಾರೆ.

ಕಳೆದ 18 ತಿಂಗಳಿಂದ KFA ಸಂಸ್ಥೆಯ ಯಾವುದೇ ಉದ್ಯೋಗಿಗೆ ವಿಜಯ್ ಮಲ್ಯ ಒಂದು ನಯಾ ಪೈಸೆ ಸಂಬಳ ನೀಡಿಲ್ಲ. ಸಂಸ್ಥೆಯು ಜಗದ್ವಿಖ್ಯಾತಗೊಳ್ಳಲು ತಾವೆಲ್ಲಾ ಅಹಿರ್ನಿಷಿ ದುಡಿದಿದ್ದಾಗಿ ಹೇಳಿರುವ ಮಹಿಳಾ ಉದ್ಯೋಗಿಗಳು ಇಂದು ತಾವೆಲ್ಲ ಕಡುಕಷ್ಟದಲ್ಲಿರುವುದನ್ನು ಮಲ್ಯ ಗಮನಕ್ಕೆ ತಂದಿದ್ದಾರೆ. 'ಇಂತಹ ಪತ್ರ ಬರೆಯುವಂತಹ ದುಃಸ್ಥಿತಿಗೆ ಬಂದಿರುವುದಕ್ಕೆ ನಿಮಗೆ ನಾಚಿಕೆಯಾಗಬೇಕು' ಎಂದು ವಿಜಯ್ ಮಲ್ಯರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಮಲ್ಯ ಮಹಾಶಯನೇ ನಿನ್ನ ಯಾವ ಕೋರ್ಟಿಗೆ ಒಪ್ಪಿಸಬೇಕು?

ಮಲ್ಯ ಮಹಾಶಯನೇ ನಿನ್ನ ಯಾವ ಕೋರ್ಟಿಗೆ ಒಪ್ಪಿಸಬೇಕು?

ದಿಲ್ಲಿ ರೇಪ್ ಬಾಧಿತೆ ದಾಮಿನಿ ಮೃತಪಟ್ಟಾಗ ರೇಪಿಸ್ಟುಗಳನ್ನು ಶಿಕ್ಷಿಸಲು ಫಾಸ್ಟ್ ಟ್ರಾಕ್ ಕೋರ್ಟ್ ಸ್ಥಾಪಿಸಬೇಕು ಎಂದು ಟ್ವೀಟ್ ಮಾಡಿದ ಮಲ್ಯ ಮಹಾಶಯನೇ ಈಗ ಹೇಳು ನಿನ್ನನ್ನು ಯಾವ ಕೋರ್ಟಿನಲ್ಲಿ ವಿಚಾರಣೆಗೊಳಪಡಿಸಬೇಕು?. ದಾಮಿನಿಯೇನೋ ಈ ಕ್ರೂರ ಪ್ರಪಂಚದಿಂದ ಮುಕ್ತಿ ಹೊಂದಳು. ಆದರೆ ನಮ್ಮ ಗತಿಯೇನು? ಎಂದೂ ಮಹಿಳೆಯರು ಕೇಳಿದ್ದಾರೆ.

ಮಲ್ಯಗೆ ಮಹಿಳೆಯರೆಂದರೆ ಐಭೋಗದ ಸರಕು

ಮಲ್ಯಗೆ ಮಹಿಳೆಯರೆಂದರೆ ಐಭೋಗದ ಸರಕು

ಈ ಸಂದರ್ಭದಲ್ಲಿ ಮಲ್ಯಗೆ ಹತ್ತಾರು ಪ್ರಶ್ನೆಗಳನ್ನು ಕೇಳಿರುವ KFA ಮಹಿಳಾ ಉದ್ಯೋಗಿಗಳು 'ಸಂಸ್ಥೆ ಮತ್ತು ಉದ್ಯೋಗಿಗಳಿಗಷ್ಟೇ ಅಲ್ಲ; ಇಡೀ ಉದ್ಯಮ ಮತ್ತು ದೇಶಕ್ಕೆ ಕಳಂಕ ತಂದಿದ್ದೀರಿ, ಅದೂ ಒಬ್ಬ ಎಂಪಿಯಾಗಿ' ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
'ನಿಮ್ಮಂತಹ ಕಾರ್ಪೊರೇಟ್ ಸಂಸ್ಥೆಗಳ ಒಡೆಯರು ಸಾರ್ವಜನಿಕ ಬ್ಯಾಂಕುಗಳನ್ನು ಲೂಟಿ ಮಾಡಿ, ಮೆರೆಯುತ್ತೀದ್ದೀರಿ. ನಾಚಿಕೆಯಾಗಬೇಕು ನಿಮಗೆಲ್ಲ. ಮಹಿಳೆಯರ ಬಗ್ಗೆ ನಿಮಗೆ ನಿಜಕ್ಕೂ ಗೌರವಿದೆಯಾ? ಅವರನ್ನೆಲ್ಲಾ ಸರಕು/ ಐಭೋಗದ ವಸ್ತುವನ್ನಾಗಿ ನೋಡಿದರೆ ಹೊರತು ಅವರಿಗೆ ಸಲ್ಲಬೇಕಾದ ಗೌರವವನ್ನು ಸಲ್ಲಿಸಲೇ ಇಲ್ಲ' ಎಂದು ಮಹಿಳೆಯರು ಪತ್ರದಲ್ಲಿ ಹೇಳಿದ್ದಾರೆ.

KFA ದುಃಸ್ಥಿತಿ ಬಗ್ಗೆ ಒಂದು ಟ್ವೀಟ್ ಮಾಡುವುದಕ್ಕೆ ಆಗೋಲ್ವಾ?

KFA ದುಃಸ್ಥಿತಿ ಬಗ್ಗೆ ಒಂದು ಟ್ವೀಟ್ ಮಾಡುವುದಕ್ಕೆ ಆಗೋಲ್ವಾ?

ಆಯಾ ಸಮಯಕ್ಕೆ ತಕ್ಕಂತೆ IPL, Hi Blitz, Sahara force India ಎಂದೆಲ್ಲಾ ಟ್ವೀಟ್ ಮಾಡುತ್ತಿರುತ್ತೀರಿ. ಯಾಕೆ ನಾವು ನಿಮಗೆ ಜ್ಞಾಪಕಕ್ಕೆ ಬರುವುದಿಲ್ಲವಾ? ನಮ್ಮ ಬಗ್ಗೆ, KFA ಸಂಸ್ಥೆಯ ದುಃಸ್ಥಿತಿ ಬಗ್ಗೆ ಒಂದೇ ಒಂದು ಟ್ವೀಟ್ ಮಾಡುವುದಕ್ಕೆ ನಿಮಗೆ ಆಗುವುದಿಲ್ವಾ? SHAME ON U, MALLYA ಎಂದು KFA ಮಹಿಳಾ ಉದ್ಯೋಗಿಗಳು ಝಾಡಿಸಿದ್ದಾರೆ.

cabin crewನ ಮಹಿಳೆಯರ ಜತೆ ಕೊಳಕು ಪಾರ್ಟಿಗಳಲ್ಲಿ

cabin crewನ ಮಹಿಳೆಯರ ಜತೆ ಕೊಳಕು ಪಾರ್ಟಿಗಳಲ್ಲಿ

cabin crewನಲ್ಲಿದ್ದ ಮಹಿಳೆಯರು ನಿಮ್ಮ ಕೊಳಕು ಪಾರ್ಟಿಗಳಲ್ಲಿ ಭಾಗವಹಿಸುವಂತೆ ಬಲವಂತಪಡಿಸುತ್ತಿದ್ದಿರಿ. ನೀವು ಮತ್ತು ನಿಮ್ಮಂತಹ ನಿಮ್ಮ ಗೆಸ್ಟುಗಳು ಅವರ ಜತೆ ಅಸಭ್ಯವಾಗಿ ವರ್ತಿಸುತ್ತಿದ್ದಿರಿ. ಇದಕ್ಕೆ ಒಪ್ಪದ ಮಹಿಳಾ ಉದ್ಯೋಗಿಗಳನ್ನು ನೀವು ಹಿಂಸಿಸುತ್ತಿದ್ದಿರಿ, ಕೆಲಸದಲ್ಲಿ ಕಿರುಕುಳ ನೀಡುತ್ತಿದ್ದಿರಿ. ಇದು ನಿಜವೇ ಆಗದಿದ್ದಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಂಡು ಇದೆಲ್ಲಾ ಸುಳ್ಳು ಎಂದು ಘೋಷಿಸಿ. ಆ ಸಾಮರ್ಥ್ಯ/ ನೈತಿಕತೆ ನಿಮಗೆ ಇದೆಯಾ, ಮಲ್ಯಾ? ಎಂದು ಮಹಿಳಾ ಉದ್ಯೋಗಿಗಳು ಕಿಡಿಕಾರಿದ್ದಾರೆ.

ಸದಾ ಕಾಲ ಮದ್ಯ ಸೇವಿಸುವ ಮದ್ಯದ ದೊರೆಯೇ

ಸದಾ ಕಾಲ ಮದ್ಯ ಸೇವಿಸುವ ಮದ್ಯದ ದೊರೆಯೇ

ನಿಮ್ಮ ಪಾರ್ಟ್ ನರ್ ಸಹಾರ ಶ್ರೀ ಈಗ ತಿಹಾರ್ ಜೈಲಿನಲ್ಲಿ ಪವಡಿಸುತ್ತಿದ್ದಾರೆ. ನಿಮಗೂ ಅಂತಹುದೇ ದುರ್ಗತಿ ಬೇಕಾ ಅಥವಾ ನಿಮ್ಮನ್ನು ಸರಿ ತಿದ್ದಿಕೊಳ್ಳುತ್ತೀರಾ? ಎಂದು ಮಹಿಳಾಮಣಿಗಳು ಮಲ್ಯರ ಕಿವಿಹಿಂಡಿದ್ದಾರೆ.
ಸದಾ ಕಾಲ ಮದ್ಯ ಸೇವಿಸುತ್ತಾ ಎಲ್ಲ ದುಃಖಗಳನ್ನು/ ಕಷ್ಟಗಳನ್ನು/ ಸಮಸ್ಯೆಗಳನ್ನು ಮರೆಯಬಹುದು ಅಂದುಕೊಳ್ಳಬೇಡಿ ಮದ್ಯದ ದೊರೆಯೇ. ನಶೆ ಇಳಿದ ಮೇಲೆ ಭ್ರಮಾಲೋಕದಿಂದ ಈ ಧರತಿಯ ಮೇಲೆ ಇಳಿಯಲೇಬೇಕು. ಆಗಲಾದರೂ ನಿಮಗೆ ವಾಸ್ತವತೆ ಅರಿವಾಗುತ್ತದೆ. ಅದು ಬೇಗನೇ ಕೈಗೂಡಲಿ ಎಂದು ಆಶಿಸುತ್ತೇವೆ.

English summary
After the grounded Kingfisher employees open letter to Yuvi on Mallya offer now It's the turn of Kingfisher women employees. On the eve of Women's Day they have written an open letter to Vijay Mallya explaining their present situations. The Open Letter written to Mallya: SHAME MALLYA says the women folk of KFA are forced to write this open letter to you today .
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X