ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿನ್ನದ ದರ ಸ್ವಲ್ಪ ಸ್ವಲ್ಪವೇ ಏರುತ್ತಿದೆ

By Srinath
|
Google Oneindia Kannada News

sustained-buying-firm-global-cues-give-rise-to-gold-rates
ನವದೆಹಲಿ, ಜ.21: ವಿಶ್ವ ಆರ್ಥಿಕ ಮಾರುಕಟ್ಟೆಗಳು ಚೇತರಿಕೆ ಕಾಣುತ್ತಿದ್ದು, ವಿವಾಹ ಋತು ಮತ್ತೆ ಶುರುವಾಗಿರುವುದರಿಂದ ಮತ್ತು ದಾಸ್ತಾನುದಾರರು ಖರೀದಿಯಲ್ಲಿ ತೊಡಗಿರುವುದರಿಂದ ಚಿನ್ನದ ದರಗಳು ವರ್ಷಾರಂಭದಲ್ಲಿ ಸ್ವಲ್ಪ ಸ್ವಲ್ಪವೇ ಏರುತ್ತಿವೆ. ರಾಜಧಾನಿಯಲ್ಲಿ 10 ಗ್ರಾಂ ಚಿನ್ನದ ಬೆಲೆ 30,300 ರೂ. ಗೆ ತಲುಪಿದೆ. ಕಳೆದ ಒಂದೂವರೆ ತಿಂಗಳಿಂದ ಚಿನ್ನದ ದರ ಕೆಳಮುಖವಾಗಿತ್ತು.

ಬೆಳ್ಳಿ ಸಹ ಏರುಗತಿಯಲ್ಲಿದ್ದು, ಕೆಜಿ ಬೆಳ್ಳಿ ಬೆಲೆ 45,500 ರೂ ಗೆ ತಲುಪಿದೆ. ಔದ್ಯಮಿಕ ಖರೀದಿ ಮತ್ತು ನಾಣ್ಯ ತಯಾರಕರು ಮತ್ತೆ ಬೆಳ್ಳಿ ಖರೀದಿಯಲ್ಲಿ ತೊಡಗಿದ್ದಾರೆ.

ಮುಂಬೈನಲ್ಲಿ 99.9 ಪ್ರಮಾಣದ ಶುದ್ಧ ಚಿನ್ನದ ಬೆಲೆ 30,170 ನಷ್ಟಿತ್ತು. ಬೆಳ್ಳಿ ಕೆಜಿಗೆ 46,000 ರೂ ಇದೆ.

ಭಾರತದಲ್ಲಿ ಚಿನ್ನ-ಬೆಳ್ಳಿ ಬೆಲೆಗಳ ನಿರ್ಧಾರಕ್ಕೆ ಮಾರ್ಗ ಸೂಚಿಯಾಗುವ ಸಿಂಗಪುರದಲ್ಲಿ ಚಿನ್ನದ ಬೆಲೆ ಶೇ. 0.5ರಷ್ಟು ಏರಿಕೆಯಾಗಿದೆ. ಒಂದು ಔನ್ಸ್ ಚಿನದನ ಬೆಲೆ 1,260.07 ಅಮೆರಿಕ ಡಾಲರಿನಷ್ಟಿತ್ತು. ( ಚಿನ್ನದ ಸಾಲಸೋಲ: ಬಡ್ಡಿ ವಿಷ್ಯಾ ಹೇಗೆ? )

English summary
Sustained Buying and Firm Global cues give rise to Gold rates. What this means is that easy liquidity conditions would continue, which is good news for gold. Gold prices on the MCX rallied in trade on the back of strong global prices, which rallied to a six week high.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X