ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿವಸೇನಾ 'ಮಹಾ' ಮೈತ್ರಿ ಉಳಿಸಿದ 'ಬಿಜೆಪಿ' ಶಾ

By Mahesh
|
Google Oneindia Kannada News

ಮುಂಬೈ, ಸೆ.23: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ ಬಿಜೆಪಿ ಮತ್ತು ಶಿವಸೇನೆ ನಡುವೆ ಸೀಟು ಹಂಚಿಕೆ ವಿವಾದ ತಾರಕಕ್ಕೇರಿ ಇನ್ನೇನು 'ಮಹಾ' ಮೈತ್ರಿ ಮುರಿದುಬೀಳಲಿದೆ ಎಂಬ ಪರಿಸ್ಥಿತಿ ನಿರ್ಮಾಣವಾಗಿತ್ತು. ಅದರೆ, ಕೊನೆ ಹಂತದಲ್ಲಿ ಅಂಗಳಕ್ಕಿಳಿದ ಬಿಜೆಪಿ ಅಧ್ಯಕ್ಷ ಅಮಿತ್ ಸಾ ಅವರು ಬಿಕ್ಕಟ್ಟು ಶಮನಗೊಳಿಸಿ ಶಿವಸೇನೆಯ 'ಹುಲಿ' ಉದ್ಧವ್ ಠಾಕ್ರೆ ಕೋಪವನ್ನು ತಣ್ಣಗೆ ಮಾಡಿದ್ದಾರೆ.

ಮಂಗಳವಾರ ಇತ್ಯರ್ಥವಾದ ಮಂಗಳಕರ ಒಪ್ಪಂದದಂತೆ ಮಹಾರಾಷ್ಟ್ರದ 288 ವಿಧಾನಸಭಾ ಕ್ಷೇತ್ರಗಳಲ್ಲಿ 151 ಕ್ಷೇತ್ರಗಳಲ್ಲಿ ಶಿವಸೇನಾ ಮತ್ತು ಬಿಜೆಪಿ 130 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ. ಉಳಿದ ಸ್ಥಾನಗಳನ್ನು ಮಿಕ್ಕ ಮಿತ್ರ ಪಕ್ಷಗಳಿಗೆ ಹಂಚಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಣತಿಯಂತೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಸಂಧಾನ ನಡೆಸಿ ಎರಡೂವರೆ ದಶಕದ ಮೈತ್ರಿಯನ್ನು ಭದ್ರಪಡಿಸಿದ್ದಾರೆ.

ಅಸೆಂಬ್ಲಿ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಕೇವಲ ನಾಲ್ಕು ದಿನಗಳು ಮಾತ್ರ ಬಾಕಿ ಇದೆ. ಈ ಹಂತದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳು ಬೇಡ. ಇದರಿಂದ ಮತದಾರರದಲ್ಲಿ ಗೊಂದಲ ಸೃಷ್ಟಿಯಾಗುತ್ತದೆ ಎಂದು ಶಾ ಕಿವಿಮಾತು ಹೇಳಿದ್ದಾರೆ.[ನಾನೇ ಸಿಎಂ ಎಂದ ಉದ್ದವ್]

Amit Shah

ಹೀಗಾಗಿ ಸೀಟು ಹಂಚಿಕೆ ಸಂಬಂಧ ಇಂದು ಮುಂಬೈನಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡು ಉಭಯ ನಾಯಕರು ಚರ್ಚಿಸಿದ್ದು, ಬಿಜೆಪಿ ಪಕ್ಷಕ್ಕೆ 130 ಸ್ಥಾನಗಳನ್ನು ಬಿಟ್ಟು ಕೊಡಲು ಶಿವಸೇನೆ ಸಿದ್ಧವಿದೆ. ಅಂತೆಯೇ ತಾನು 151 ಸ್ಥಾನಗಳಲ್ಲಿ ಸ್ಪರ್ಧಿಸುವುದಾಗಿ ಶಿವಸೇನೆ ಸ್ಪಷ್ಟಪಡಿಸಿದ್ದು, ಉಳಿದ 7 ಸ್ಥಾನಗಳಲ್ಲಿ ಮೈತ್ರಿಕೂಟದ ಸಣ್ಣ ಪಕ್ಷಗಳ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.

ಬಿಜೆಪಿಗೆ 119 ಸ್ಥಾನ, ಮೈತ್ರಿಕೂಟದಲ್ಲಿರುವ ಇತರೆ ಪಕ್ಷಗಳಿಗೆ 18 ಸ್ಥಾನ ಮತ್ತು ತನಗೆ 151 ಸ್ಥಾನ ಬೇಕು ಎಂದು ಶೀವಸೇನಾ ಈ ಮುಂಚೆ ಒತ್ತಡ ಹೇರಿತ್ತು. ಈ ಸೂತ್ರಕ್ಕೆ ಒಪ್ಪದೇ ಇದ್ದರೆ ತಾನು ಸ್ವತಂತ್ರವಾಗಿ ಸ್ಪರ್ಧಿಸಲು ಸಿದ್ಧ ಎಂದು ಶಿವಸೇನೆ ಖಾರವಾಗಿ ಪ್ರತಿಕ್ರಿಯಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

2009ರಲ್ಲಿ ಶಿವಸೇನೆ 169 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿ 44 ಸ್ಥಾನ ಗೆದ್ದಿತ್ತು. ಅದೇ ರೀತಿ ಬಿಜೆಪಿ 119 ಸ್ಥಾನಗಳಲ್ಲಿ ಸ್ಪರ್ಧಿಸಿ 46 ಕ್ಷೇತ್ರಗಳಲ್ಲಿ ವಿಜೇತರಾಗಿದ್ದರು. ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ನಮ್ಮ ಪಕ್ಷ 23 ಸ್ಥಾನಗಳನ್ನು ಹಾಗೂ ಶಿವಸೇನೆ 18 ಕ್ಷೇತ್ರಗಳಲ್ಲಿ ಗೆದ್ದಿದೆ. ರಾಜ್ಯದಲ್ಲಿ ಬಿಜೆಪಿ ಪರವಾದ ಅಲೆ ಇರುವುದರಿಂದ ಹೆಚ್ಚು ಸ್ಥಾನ ಕೇಳುವುದರಲ್ಲಿ ತಪ್ಪಿಲ್ಲ ಎಂದು ಅಮಿತ್ ಶಾ ಹೇಳಿದ್ದಾರೆ.

English summary
Making last minutes effort to save the 25-year-old alliance, the Shiv Sena has sent a new seat sharing proposal to the Bharatiya Janata Party on Tuesday. According to the new proposal, the Sena has offered 130 seats to the BJP, other allies 7 and kept 151 out of 288 seats for itself, said sources.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X