ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಧಾರ್ಮಿಕ ಭಾವನೆಗೆ ಧಕ್ಕೆ, ಸಲ್ಮಾನ್ ವಿರುದ್ಧ ಕೇಸ್

By Mahesh
|
Google Oneindia Kannada News

ಮುಂಬೈ, ಸೆ.12: ಬಾಲಿವುಡ್ ನ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರು ವಿನಾಕಾರಣ ಮತ್ತೊಂದು ಪ್ರಕರಣದಲ್ಲಿ ಸಿಲುಕಿದ್ದಾರೆ. ಸಲ್ಮಾನ್ ಖಾನ್ ಅವರ ಎನ್ ಜಿಒ ಆಯೋಜಿಸಿದ್ದ ಫ್ಯಾಷನ್ ಶೋನಲ್ಲಿ ರೂಪದರ್ಶಿಯೊಬ್ಬರು ತೊಟ್ಟಿದ್ದ ಬಟ್ಟೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಸಲ್ಮಾನ್ ವಿರುದ್ಧ ಕೇಸು ಹಾಕಲಾಗಿದೆ.

ಸಲ್ಮಾನ್ ಖಾನ್ ಅವರು ತಮ್ಮ ಸರ್ಕಾರೇತರ ಸಂಸ್ಥೆ ಬೀಯಿಂಗ್ ಹ್ಯೂಮನ್ ಮೂಲಕ ಅನೇಕ ಜನಹಿತ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಇತ್ತೀಚೆಗೆ ಇದೇ ಸಂಸ್ಥೆಯ ಮೂಲಕ ಫ್ಯಾಷನ್ ಶೋವೊಂದನ್ನು ಆಯೋಜಿಸಲಾಗಿತ್ತು. ಅದರಲ್ಲಿ ಮಾಡೆಲ್ ಒಬ್ಬರು ತೊಟ್ಟಿದ್ದ ದಿರಿಸಿನಲ್ಲಿ ಇಸ್ಲಾಂ ವಿರೋಧಿ, ಮುಸ್ಲಿಂ ಜನಾಂಗಕ್ಕೆ ಭಾವನೆ ಧಕ್ಕೆ ತರುವ ವಾಕ್ಯಗಳಿತ್ತು ಎಂದು ಆರೋಪಿಸಲಾಗಿದೆ. [ಅಶಕ್ತರಿಗೆ ಸಲ್ಮಾನ್ 'ಈದ್' ಮಹಾನ್ ಕೊಡುಗೆ]

ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಕಾರಣಕ್ಕೆ ಬಾಲಿವುಡ್ ನಟ ಸಲ್ಮಾನ್ ಖಾನ್ ವಿರುದ್ಧ ಮಹಾರಾಷ್ಟ್ರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.48 ವರ್ಷ ವಯಸ್ಸಿನ ಸಲ್ಮಾನ್ ಖಾನ್ ಅವರ ಮೇಲೆ ಭಾರತೀಯ ದಂಡ ಸಂಹಿತೆ ಸೆಕ್ಷನ್ 295 ಎ ಅನ್ವಯ ಕೇಸು ದಾಖಲಾಗಿದೆ. ಮಹಮ್ಮದ್ ಅಸಿಮ್ ಹಾಗೂ ಮಹಮ್ಮದ್ ಆರೀಫ್ ಎಂಬುವರು ಸಲ್ಮಾನ್ ಖಾನ್ ಹಾಗೂ ಅವರ ಸಂಸ್ಥೆ ವಿರುದ್ಧ ದೂರು ನೀಡಿದ್ದರು.

Salman Khan Booked By Police For Hurting Muslim Community

ಆರೀಫ್ ಹಾಗೂ ಅಸಿಮ್ ನೀಡಿರುವ ದೂರಿನ ಅನ್ವಯ ಮುಂಬೈನಲ್ಲಿ ಇತ್ತೀಚೆಗೆ ಸಲ್ಮಾನ್ ಖಾನ್ ಅವರ ಬೀಯಿಂಗ್ ಹ್ಯೂಮನ್ ಸಂಸ್ಥೆ ಫ್ಯಾಷನ್ ಶೋ ನಡೆಸಿತ್ತು. ಇದರಲ್ಲಿ ಒಬ್ಬ ರೂಪದರ್ಶಿ ಹಾಕಿಕೊಂಡಿದ್ದ ಟಿ ಶರ್ಟ್ ಮೇಲೆ ಅರೇಬಿಕ್ ನಲ್ಲಿ ಕೆಲವಾಕ್ಯಗಳನ್ನು ಬರೆಯಲಾಗಿತ್ತು. ಇದು ಮುಸ್ಲಿಂ ಸಮುದಾಯದ ಭಾವನೆಗಳಿಗೆ ಧಕ್ಕೆ ತರುತ್ತಿದೆ ಎಂದಿದ್ದಾರೆ.

ದೂರು ಸ್ವೀಕರಿಸಿ ಪ್ರಕರಣ ದಾಖಲಿಸಿಕೊಂಡಿರುವುದನ್ನು ಖಚಿತಪಡಿಸಿದ ತನಿಖಾಧಿಕಾರಿ ದಿಲೀಪ್ ಚವಾಣ್ ಅವರು ತನಿಖೆ ನಡೆಸಲಾಗುತ್ತಿದೆ. ದೂರುದಾರರು ನೀಡಿರುವ ಫ್ಯಾಷನ್ ಶೋ ಕಾರ್ಯಕ್ರಮದ ವಿಡಿಯೋ ಕ್ಲಿಪ್ಪಿಂಗ್ ಪರಿಶೀಲಿಸಲಾಗುತ್ತಿದೆ ಎಂದಿದ್ದಾರೆ. [ನರೇಂದ್ರ ಮೋದಿ ಬೆಂಬಲಿಸಲು ಸಲ್ಲೂ ಷರತ್ತು]

ಟೈಮ್ ಸರಿಯಿಲ್ಲವೆಂದರೆ ಹೀಗೆ ಆಗುವುದು. ಒಳ್ಳೆ ಕಾರ್ಯಕ್ಕಾಗಿ ಸಲ್ಮಾನ್ ಖಾನ್ ಅವರು ಏನೋ ಮಾಡಲು ಹೋದರೆ, ಅದು ಈ ರೀತಿ ಅನರ್ಥವಾಗುತ್ತಿದೆ ಎಂದು ಬಾಲಿವುಡ್ ಮಂದಿ ಸಲ್ಮಾನ್ ಖಾನ್ ಬಗ್ಗೆ ಸಿಂಥಪಿ ತೋರಿಸಿದ್ದಾರೆ. ಬೀಯಿಂಗ್ ಹ್ಯೂಮನ್ ಸಂಸ್ಥೆ ಮೂಲಕ ಅನಾಥ, ನಿರ್ಗತಿಕ ಮಕ್ಕಳ ಶಿಕ್ಷಣ, ಕ್ಯಾನ್ಸರ್ ಮುಂತಾದ ಮಾರಕ ರೋಗ ಪೀಡಿತರ ಚಿಕಿತ್ಸೆ ನೀಡಲಾಗುತ್ತಿದೆ.

English summary
Bollywood superstar Salman Khan got booked by the police in Maharashtra for allegedly hurting the religious sentiments of a community.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X