ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಎನ್​ಎಸ್​ ಕೋಲ್ಕತ್ತಾ ಲೋಕಾರ್ಪಣೆ ಮಾಡಿದ ಮೋದಿ

|
Google Oneindia Kannada News

ಮುಂಬೈ, ಆ.16 : ಭಾರತದ ನೌಕಾಶಕ್ತಿ ಸಾಮರ್ಥ್ಯ ಮತ್ತಷ್ಟು ಹೆಚ್ಚಾಗಿದೆ. ದೇಶೀ ನಿರ್ಮಿತ ಅತಿ ದೊಡ್ಡ ಯುದ್ಧ ನೌಕೆ ಐಎನ್ಎಸ್​ ಕೋಲ್ಕತ್ತಾವನ್ನು ಶನಿವಾರ ಪ್ರಧಾನಮಂತ್ರಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಿದ್ದಾರೆ. 6800 ಟನ್ ತೂಕದ ಐಎನ್ಎಸ್ ಕೊಲ್ಕತ್ತಾ ನೌಕೆಯನ್ನು ಲೋಕಾರ್ಪಣೆ ಮಾಡಿದ ಬಳಿಕ ಮಾತನಾಡಿದ ಮೋದಿ ಅವರು, ಇಂದು ಭಾರತದ ಪಾಲಿಗೆ ಐತಿಹಾಸಿಕ ದಿನ ಎಂದು ಹೇಳಿದರು.

ಶನಿವಾರ ಮುಂಬೈನ ನೌಕಾನೆಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಐಎನ್ಎಸ್ ಕೊಲ್ಕತ್ತಾ ನೌಕೆಯನ್ನು ಲೋಕಾರ್ಪಣೆ ಮಾಡಿದರು. ನಂರ ಮಾತನಾಡಿದ ಅವರು, ಐಎನ್ಎಸ್ ಕೊಲ್ಕತ್ತಾ ನೌಕೆ ಸ್ವದೇಶಿ ನಿರ್ಮಿತ ನೌಕೆಯಾಗಿದ್ದು, ಇದನ್ನು ಸ್ವತಃ ನಮ್ಮ ತಂತ್ರಜ್ಞರೇ ನಿರ್ಮಿಸಿರುವುದು ಹೆಮ್ಮೆಯ ಸಂಗತಿ ಎಂದು ಬಣ್ಣಿಸಿದರು. ನೌಕೆಯನ್ನು ನಿರ್ಮಿಸುವಲ್ಲಿ ಪ್ರಮುಖ ಪಾತ್ರವಹಿಸಿದ ಭಾರತದ ತಂತ್ರಜ್ಞರು ಹಾಗೂ ಕಾರ್ಮಿಕರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದರು.

Narendra Modi

ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಸಾಧನೆ ಏನು ಎಂಬುದಕ್ಕೆ ಐಎನ್ಎಸ್ ನೌಕೆ ಸಾಕ್ಷಿಯಾಗಿದೆ ಎಂದು ಹೇಳಿದ ಮೋದಿ, ಇಡೀ ಜಗತ್ತಿಗೆ ಭಾರತದ ಶಕ್ತಿ ತೋರಿಸುವ ಕಾಲ ಬಂದಿದೆ. ಆದರೆ, ಅದನ್ನು ಯುದ್ಧದ ಮೂಲಕ ಪ್ರದರ್ಶಿಸುವ ಅಗತ್ಯವಿಲ್ಲ ಎಂದು ಹೇಳಿದರು. [ಕೆಂಪುಕೋಟೆ ಮೇಲೆ ಮೋದಿ ಹೇಳಿದ್ದೇನು?]

English summary
Prime Minister Narendra Modi inducted the largest-ever warship built in India till now, the 6,800-tonne destroyer INS Kolkata, at Mumbai on Saturday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X