ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಬಂದ್ಮೇಲೆ ಕೋಮುಹಿಂಸೆ ಹೆಚ್ಚಾಗಿದೆಯಂತೆ

By Srinath
|
Google Oneindia Kannada News

ನವದೆಹಲಿ, ಜೂನ್ 9: ಈ ಶರದ್ ಪವಾರ್ ಎಂಬ ಮಹಾರಾಷ್ಟ್ರದ ಜನನಾಯಕ ಶರದ್ ಪವಾರ್ ಅವರು ನೂತನ ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಮೇಲೆ ಕೋಮು ಹಿಂಸೆ ಹೆಚ್ಚಾಗಿದೆ ಎಂದು ಹೇಳಿದ್ದಾರೆ.

ಮೊನ್ನೆಯ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಮಿತ್ರ ಪಕ್ಷ ಕಾಂಗ್ರೆಸ್ಸಿಗೆ ಕೈಕೊಟ್ಟು ನರೇಂದ್ರ ಮೋದಿ ಜತೆ ಕೈ ಜೋಡಿಸಲು ತೆರೆಮರೆಯ ನಾಟಕವನ್ನಾಡಿ ಅದು ಕೈಗೂಡದೆ, ತಮ್ಮ ನ್ಯಾಷನಲ್ ಕಾಂಗ್ರೆಸ್ ಪಾರ್ಟಿ (NCP) ವಿರುದ್ಧ ನಿರಾಶಾದಾಯಕ ಫಲಿತಾಂಶ ಬಂದ ಮೇಲೆ, ಹತಾಶರಾಗಿರುವ ಕೇಂದ್ರದ ಮಾಜಿ ಕೃಷಿ ಸಚಿವ ಶರದ್ ಪವಾರ್ ಅವರು ನರೇಂದ್ರ ಮೋದಿ ಅವರನ್ನು ಪ್ರಧಾನಿಯನ್ನಾಗಿ ಆಯ್ಕೆ ಮಾಡಿದ್ದರ ಪರಿಣಾಮ ಮಹಾರಾಷ್ಟ್ರದಲ್ಲಿ ಕೋಮು ಗಲಭೆ ಹೆಚ್ಚಾಗಿದೆ ಎಂದು ಹೇಳಿದ್ದಾರೆ.

modi-election-as-pm-led-to-increase-in-communal-incidents-sharad-pawar
ಮುಂಬೈನಲ್ಲಿ ನಡೆದ NCP ಪಕ್ಷದ 15ನೇ ಸಂಸ್ಥಾಪನಾ ದಿನಾಚರಣೆಯಂದು ಮಾತನಾಡಿದ ಶರದ್ ಪವಾರ್ ಅವರು ದೆಹಲಿಯಲ್ಲಿ ಅಧಿಕಾರ ಬದಲಾವಣೆಯಾದ ನಂತರ ಕೋಮು ಶಕ್ತಿಗಳು ಚಿಗಿತುಕೊಂಡಿವೆ. ಇದರಿಂದ ಅಲ್ಪಸಂಖ್ಯಾತರು ಮತ್ತು ದಲಿತರ ವಿರುದ್ಧ ಕೋಮು ಜಗಳಗಳು ಹೆಚ್ಚಾಗುತ್ತಿವೆ ಎಂದು ಬಹಿರಂಗವಾಗಿ ಹೇಳಿದರು.

ಪೂನಾದಲ್ಲಿ ಟೆಕ್ಕಿ ಮೊಹ್ಸಿನ್ ಸಾದಿಕ್ ಷೇಕ್ ಹತ್ಯೆಯನ್ನು ಉದಾಹರಿಸಿದ ಪವಾರ್ 'ಸುಪ್ತಾವಸ್ಥೆಯಲ್ಲಿದ್ದ ಕೋಮು ಶಕ್ತಿಗಳು ಈಗ ಸೆಟೆದು ನಿಂತಿವೆ. ತಮ್ಮ ನೀತಿಗಳನ್ನು ಒಪ್ಪದವರ ವಿರುದ್ಧ ಮುಗಿಬೀಳಲು ಪಣತೊಟ್ಟಂತಿದೆ' ಎಂದು ಹೇಳಿದರು.

'ಮುಂದಿನ ದಿನಗಳಲ್ಲಿ ಅಲ್ಪಸಂಖ್ಯಾತರು ಮತ್ತು ದಲಿತರ ವಿರುದ್ಧ ಕೋಮು ಶಕ್ತಿಗಳು ಹಿಂಸೆ ನಡೆಸುವುದನ್ನು ತಡೆಗಟ್ಟಲು ಅವರ ಬಗ್ಗೆ ಮುತುವರ್ಜಿ ವಹಿಸಿ, ಹೆಚ್ಚು ಶ್ರಮವಹಿಸಬೇಕಿದೆ ಎಂದು ಪಕ್ಷದ ಕಾರ್ಯಕರ್ತರಿಗೆ ಅವರು ಕರೆ ನೀಡಿದರು.

English summary
Narendra Modi election as Prime Minister led to increasing communal incidents Sharad Pawar. At NCP's 15th Foundation Day function in Mumbai, its President Sharad Pawar openly claimed that the change of government in Delhi appears to have emboldened the communal forces who have started asserting themselves leading to growing incidents of communal conflict against minorities and dalits across Maharashtra.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X