ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೇಪ್ ಕೇಸ್ : ಹಿರಿಯ ಪೊಲೀಸ್ ಅಧಿಕಾರಿ ಬಂಧನ

By Mahesh
|
Google Oneindia Kannada News

ಮುಂಬೈ, ಅ.27 : ರೂಪದರ್ಶಿಯ ಮೇಲೆ ಅತ್ಯಾಚಾರ ಹಾಗೂ ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಹಿರಿಯ ಪೊಲೀಸ್ ಅಧಿಕಾರಿ ಸುನಿಲ್ ಪರಾಸ್ಕರ್ ಅವರನ್ನು ಮಂಗಳವಾರ ಬಂಧಿಸಲಾಗಿದೆ.

ಹಿರಿಯ ಪೊಲೀಸ್ ಅಧಿಕಾರಿ ಬಂಧನಕ್ಕೆ ಮಹಾರಾಷ್ಟ್ರ ಸರ್ಕಾರ ಮೀನಾ ಮೇಷ ಎಣಿಸುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು. ಹೀಗಾಗಿ ತುರ್ತು ಸಭೆ ನಡೆಸಿದ ಮುಖ್ಯಮಂತ್ರಿ ಪೃಥ್ವಿರಾಜ್ ಚೌಹಾಣ್ ಅವರು ಗೃಹ ಸಚಿವಾಲಯದೊಡನೆ ಉನ್ನತ ಮಟ್ಟದ ಸಭೆ ನಡೆಸಿ ಈ ನಿರ್ಧಾರ ಕೈಗೊಂಡಿದ್ದಾರೆ.

ಪರಾಸ್ಕರ್ ಅವರನ್ನು ಅಮಾನತಿನಲ್ಲಿಡುವಂತೆ ಮುಖ್ಯಮಂತ್ರಿಗಳಿಗೆ ಕೋರಿಕೆ ಸಲ್ಲಿಸಲಾಗಿತ್ತು. ಇದಕ್ಕೆ ಗೃಹ ಸಚಿವಾಲಯದ ಒಪ್ಪಿಗೆ ಸಿಕ್ಕಿತು. ಈ ಬಗ್ಗೆ ಚರ್ಚೆ ನಡೆಸಿ ನಂತರ ತೀರ್ಮಾನ ಕೈಗೊಳ್ಳಲಾಗಿದೆ.

Maha: Rape Accused Sr Police Officer Sunil Paraskar arrested

ಏಕಿಷ್ಟು ಗೊಂದಲ?: ಬಂಧನ ಭೀತಿ ಎದುರಿಸುತ್ತಿರುವ ಪರಾಸ್ಕರ್ ಅವರು ಮುಂಬೈ ಕೋರ್ಟಿಗೆ ಹೋಗಿ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದರು. ಆದರೆ, ನಂತರ ರದ್ದಾಗಿತ್ತು. ಪರಾಸ್ಕರ್ ಮೇಲೆ ಪೊಲೀಸರು ಎಫ್ ಐಆರ್ ದಾಖಲಿಸಿಕೊಂಡ ಒಂದು ವಾರದ ನಂತರ ಜು.25ರಂದು ಅರ್ಜಿ ಹಾಕಿದ್ದರು. ಪರಾಸ್ಕರ್ ಮೇಲೆ ಐಪಿಸಿ ಸೆಕ್ಷನ್ 376(2), 376 ಸಿ ಹಾಗೂ 354 ಡಿ ಅನ್ವಯ ದೂರು ದಾಖಲಿಸಿಕೊಳ್ಳಲಾಗಿತ್ತು.

57 ವರ್ಷ ವಯಸ್ಸಿನ ಅಧಿಕಾರಿ ಪರಾಸ್ಕರ್ ಅವರು 25 ವರ್ಷದ ರೂಪದರ್ಶಿ ಮೇಲೆ ಡಿಸೆಂಬರ್ 2013ರಲ್ಲಿ ಎರಡು ಬಾರಿ ಅತ್ಯಾಚಾರ, ಲೈಂಗಿಕ ಕಿರುಕುಳ ನೀಡಿದ್ದರು ಎಂದು ಆರೋಪಿಸಲಾಗಿದೆ. 2012ರಲ್ಲಿ ಪರಾಸ್ಕರ್ ಅವರು ಹೆಚ್ಚುವರಿ ಆಯುಕ್ತರಾಗಿದ್ದಾಗ ಯಾವುದೋ ಕೇಸ್ ಸಂಬಂಧ ಮಾತನಾಡಲು ರೂಪದರ್ಶಿ ಬಂದಿದ್ದರು. ಇಬ್ಬರಿಗೂ ಪರಿಚಯವಾಗಿತ್ತು. ಈ ಪ್ರಕರಣದಲ್ಲಿ ಎಫ್ ಐಆರ್ ದಾಖಲಿಸಲು ಮುಂಬೈ ಪೊಲೀಸರು ಹಿಂದೆ ಮುಂದೆ ನೋಡಿದ ಕಾರಣ ಮುಂದಿಟ್ಟುಕೊಂಡು ನನ್ನ ಕಕ್ಷಿದಾರ ನಿರಪರಾಧಿ ಎಂದು ಪರಾಸ್ಕರ್ ಪರ ವಕೀಲರು ವಾದಿಸಿದ್ದರು.

English summary
Maharashtra: Sunil Paraskar, the senior police officer accused of raping and molesting a model was suspended on Tuesday.'
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X