ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಕಲಿ ಎನ್ ಕೌಂಟರ್: ಅಮಿತ್ ಶಾಗೆ ಎಚ್ಚರಿಕೆ

By Mahesh
|
Google Oneindia Kannada News

ಮುಂಬೈ, ಆ.14: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಪ್ತ ಅಮಿತ್ ಶಾ ಅವರಿಗೆ ಸಿಬಿಐ ನ್ಯಾಯಾಲಯ ಎಚ್ಚರಿಕೆ ಸಂದೇಶ ಕಳಿಸಿದೆ. ಎರಡು ನಕಲಿ ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಗೆ ಸಮನ್ಸ್ ಜಾರಿಯಾಗಿದ್ದು, ಸರಿಯಾದ ಕಾರಣ ನೀಡಿದರೆ ವಿಚಾರಣೆಗೆ ತಪ್ಪಿಸಿಕೊಂಡರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಕೋರ್ಟ್ ಹೇಳಿದೆ.

ತುಳಸಿ, ಪ್ರಜಾಪತಿ ನಕಲಿ ಎನ್‌ಕೌಂಟರ್ ಪ್ರರಣಕ್ಕೆ ಸಂಬಂಧ ವಿಚಾರಣೆ ನಡೆಸುತ್ತಿರುವ ಮುಂಬೈ ಕೋರ್ಟ್ ಅಮಿತ ಶಾಗೆ ಸಮನ್ಸ್ ನೀಡಿದೆ. ಗುಜರಾತ್‌ನಲ್ಲಿ ನಡೆದ ಎರಡು ನಕಲಿ ಎನ್‌ಕೌಂಟರ್ ಪ್ರಕರಣ ಸಂಬಂಧ ವಿಚಾರಣೆಗಾಗಿ ಕೋರ್ಟ್‌ಗೆ ಕಡ್ಡಾಯವಾಗಿ ಹಾಜರಾಗುವಂತೆ ಮುಂಬೈ ಕೋರ್ಟ್ ಸಮನ್ಸ್ ಜಾರಿ ಮಾಡಿದೆ.

Fake encounter cases: Court warns Amit Shah, says will act against accused absent without valid reason

ಸೊಹ್ರಾಬುದ್ದೀನ್ ಶೇಖ್ ಅವರ ಸೋದರ ರುಬಾಬುದ್ದೀನ್ ಅವರು ಅಮಿತ್ ಶಾ ಅವರು ಕೋರ್ಟ್ ವಿಚಾರಣೆಗೆ ಗೈರು ಹಾಜರಾಗಿದ್ದರ ವಿರುದ್ಧ ಅರ್ಜಿ ಹಾಕಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಮುಂಬೈನ ಸಿಬಿಐ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ. ಅಮಿತ್ ಶಾ ಹಾಗೂ ಇನ್ನಿತರ ಆರೋಪಿಗಳ ವಿರುದ್ಧದ ಪ್ರಕರಣದಲ್ಲಿ ಇದೇ ವರ್ಷ ಗುಜರಾತಿನಿಂದ ಮುಂಬೈಗೆ ವರ್ಗಾಯಿಸಲಾಗಿತ್ತು. ಅಮಿತ್ ಶಾ ಸೇರಿದಂತೆ 18 ಜನರ ವಿರುದ್ಧ ಸಿಬಿಐ ತಂಡ ಚಾರ್ಜ್ ಶೀಟ್ ಸಲ್ಲಿಸಿದೆ.

2005ರಲ್ಲಿ ಅಮಿತ್ ಶಾ ಅವರು ಗುಜರಾತಿನ ಗೃಹ ಸಚಿವರಾಗಿದ್ದ ಕಾಲದಲ್ಲಿ ನಕಲಿ ಎನ್ ಕೌಂಟರ್ ನಲ್ಲಿ ಪೊಲೀಸರು ಉಗ್ರಗ್ರಾಮಿ ಎಂದು ಹೇಳಿ ಸೊಹ್ರಾಬುದ್ದೀನ್ ಅವರನ್ನು ಹತ್ಯೆ ಮಾಡಿದ್ದರು. ಈ ಪ್ರಕರಣದ ಸಾಕ್ಷಿಯಾಗಿದ್ದ ತುಳಸಿ ಪ್ರಜಾಪತಿ ಅವರು ಮರುವರ್ಷ ಹತ್ಯೆ ಮಾಡಲಾಗಿತ್ತು.

ಈ ಎರಡೂ ಪ್ರಕರಣಗಳಲ್ಲಿ ಕೊಲೆ ಮತ್ತು ಪಿತೂರಿ ನಡೆಸಿದ ಆರೋಪವನ್ನು ಅಲ್ಲಗೆಳೆದು ಅಮಿತ್ ಪರ ವಾದಿಸಿದ್ದ ಉದಯ್ ಯು ಲಲಿತ್ ಅವರನ್ನು ಸುಪ್ರೀಂಕೋರ್ಟಿನ ನ್ಯಾಯಮೂರ್ತಿಯಾಗಿ ನೇಮಕ ಮಾಡಲು ಅಮಿತ್ ಯತ್ನಿಸಿದ ಆರೋಪವೂ ಕೇಳಿ ಬಂದಿದೆ [ವಿವರ ಇಲ್ಲಿ ಓದಿ]

English summary
A Central Bureau of Investigation court has hit out at the accused remaining absent from the hearings into the Sohrabuddin fake encounter case. The court has said that if the accused are absent from the hearing and valid reason is not given, then appropriate action will be taken against them.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X