ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ಯಾಂಪಾ ಕೋಲಾ ನಿವಾಸಿಗಳಿಗೆ ಮತ್ತೆ ಆಘಾತ

By Mahesh
|
Google Oneindia Kannada News

ಮುಂಬೈ, ಮೇ.27: ಇಲ್ಲಿನ ಕ್ಯಾಂಪಾ ಕೋಲಾ ಅಪಾರ್ಟ್ಮೆಂಟ್ ನಿವಾಸಿಗಳಿಗೆ ಸಿಕ್ಕಿದ್ದ ತಾತ್ಕಾಲಿಕ ನೆಮ್ಮದಿಯನ್ನು ಸ್ಥಳೀಯ ಮಹಾನಗರ ಪಾಲಿಕೆ ಹಾಳುಗೆಡವಿದೆ. ಕಟ್ಟಡ ತೆರವಿಗೆ ಹೊಸ ಗಡುವು ನೀಡಿ ಬಿಎಂಸಿ ನೋಟಿಸ್ ಜಾರಿ ಮಾಡಿದೆ. ಹೀಗಾಗಿ ಇಲ್ಲಿನ 102ಕ್ಕೂ ಅಧಿಕ ಕುಟುಂಬಗಳಿಗೆ ಭೀತಿ ಕಾಡತೊಡಗಿದೆ.

ಮೇ 31, 2014 ರ ತನಕ ಕಟ್ಟಡ ನೆಲಸಮ ಕಾರ್ಯಕ್ಕೆ ಬ್ರೇಕ್ ಬೀಳಲಿದೆ ಎಂದು ಕುಟುಂಬಸ್ಥರು ನೆಮ್ಮದಿ ಪಡುವ ಬೆನ್ನಲ್ಲೇ ಮನೆ ತೊರೆಯುವಂತೆ ಸುಪ್ರೀಂಕೋರ್ಟ್ ಆದೇಶಿಸಿತ್ತು. ಈಗ ಜೂ.1 2014 ರಂದು ಮನೆ ಖಾಲಿ ಮಾಡುವಂತೆ ಬಿಎಂಸಿ ಸೂಚಿಸಿದೆ.

ದಕ್ಷಿಣ ಮುಂಬೈನ ವೊರ್ಲಿ ಪ್ರದೇಶದಲ್ಲಿ ಅಕ್ರಮವಾಗಿ ನಿರ್ಮಾಣಗೊಂಡಿದ್ದ 15 ಅಂತಸ್ತಿನ ಅಪಾರ್ಟ್ ಮೆಂಟ್ ನಿವಾಸಿಗಳಿಗೆ ಮೇ 31ರೊಳಗೆ ಖಾಲಿ ಮಾಡಬೇಕು ಎಂದು ಸುಪ್ರೀಂಕೋರ್ಟ್ ಸೂಚಿಸಿತ್ತು. ಅಪಾರ್ಟ್ ಮೆಂಟ್ ತೆರವು ವಿರೋಧಿಸಿ ಅಪಾರ್ಟ್‌ಮೆಂಟ್ ನಿವಾಸಿಗಳು ಪ್ರತಿಭಟನೆ ನಡೆಸಿದ್ದರು.

BMC asks residents of Campa Cola compound to vacate homes

ಪ್ರಕರಣ ಸಂಬಂಧ ಮಧ್ಯಪ್ರವೇಶಿಸಿರುವ ಸುಪ್ರೀಂ ಕೋರ್ಟ್, ಫ್ಲಾಟ್ ತೆರವಿಗೆ 7 ತಿಂಗಳ ಕಾಲಾವಕಾಶ ನೀಡಲಾಗಿತ್ತು. 7 ಅಂತಸ್ತಿನ ಕಟ್ಟಡ ನಿರ್ಮಾಣಕ್ಕೆ ಪರವಾನಿಗೆ ಪಡೆದಿದ್ದ ಕ್ಯಾಂಪ ಕೋಲಾ, ಅಕ್ರಮವಾಗಿ 15 ಅಂತಸ್ತಿನ ಕಟ್ಟಡ ನಿರ್ಮಾಣ ಮಾಡಿತ್ತು. ಹೀಗಾಗಿ 102 ಫ್ಲಾಟ್ ಗಳ ತೆರವಿಗೆ ಬಿಎಂಸಿ ಆದೇಶಿಸಿತ್ತು. ಆದರೆ ಕಟ್ಟಡ ತೆರವಿಗೆ ಅಪಾರ್ಟ್‌ಮೆಂಟ್ ನಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.

ಸುಪ್ರೀಂ ಕೋರ್ಟ್ ಆದೇಶದ ಪ್ರತಿ ಹಿಡಿದುಕೊಂದು ಗಡುವು ಮುಗಿಯುತ್ತಿದ್ದಂತೆಯೇ ಅಕ್ರಮ ಮಹಡಿಗಳನ್ನು ಧ್ವಂಸಗೊಳಿಸಲು ಮುಂಬೈ ಮಹಾನಗರಪಾಲಿಕೆ ಸಿಬ್ಬಂದಿ ಆಗಮಿಸಿದ್ದರು. ಇದಕ್ಕೂ ಮುನ್ನ ಕಟ್ಟಡಗಳ ವಿದ್ಯುತ್, ನೀರು ಮತ್ತು ಅನಿಲ ಸಂಪರ್ಕಗಳನ್ನು ಸ್ಥಗಿತಗೊಳಿಸಲಾಗಿತ್ತು.

ಆಪಾರ್ಟ್ಮೆಂಟ್ ನಿವಾಸಿಗಳ ಬೆಂಬಲಕ್ಕೆ ಬಿಜೆಪಿ ಹಾಗೂ ಆರೆಸ್ಸೆಸ್ ನಿಂತಿದ್ದರಿಂದ ವಿಷಯ ರಾಜಕೀಯ ಬಣ್ಣ ಪಡೆದಿತ್ತು. ಆದರೆ, ಜಸ್ಟೀಸ್ ಜಿಎಸ್ ಸಿಂಘ್ವಿ, ಜಸ್ಟೀಸ್ ಸಿ ನಾಗಪ್ಪನ್ ಅವರಿದ್ದ ಪೀಠ ನೀಡಿರುವ ಆದೇಶದಂತೆ ಮೇ 31ರೊಳಗೆ ಕ್ಯಾಂಪಾ ಕೋಲಾ ನಿವಾಸಿಗಳು ತಮ್ಮ ಈಗಿನ ನಿವಾಸಗಳನ್ನು ತೊರೆಯಬೇಕಾಗಿತ್ತು. ಈಗ ಜೂನ್ 1ರಂದು ಮನೆ ತೆರವು ಮಾಡದಿದ್ದರೆ ಕಾನೂನು ಮೂಲಕ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.(ಪಿಟಿಐ)

English summary
After Supreme Court's six month breather to the residents of unauthorised flats in Campa Cola compound in South Mumbai, BMC sent a notice asking them to vacate the premises by June 1, 2014.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X