ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಪಾಕಿಸ್ತಾನ ಮೇಲೆ ದಾಳಿ ಮಾಡಿ ಧ್ವಂಸಗೊಳಿಸಿ'

By Mahesh
|
Google Oneindia Kannada News

ಮುಂಬೈ, ಆ.25: ಕಳ್ಳ ಯುದ್ಧ ಮಾಡುತ್ತಾ ಕಾಟ ಕೊಡುತ್ತಿರುವ ಪಾಕಿಸ್ತಾನದ ಮೇಲೆ ನೇರವಾಗಿ ದಾಳಿ ಮಾಡಿ ಸರಿಯಾದ ಪಾಠ ಕಲಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಕರೆ ನೀಡಿದ್ದಾರೆ.

ಶಿವಸೇನಾ ಪಕ್ಷದ ಮುಖವಾಣಿ 'ಸಾಮ್ನಾ' ದ ಸಂಪಾದಕೀಯದಲ್ಲಿ ಠಾಕ್ರೆ ಬರೆಯುತ್ತಾ, ಪಾಕಿಸ್ತಾನ ಇತ್ತೀಚೆಗೆ ಗಡಿಭಾಗದ 13 ಹಳ್ಳಿಗಳ ಮೇಲೆ ದಾಳಿ ಮಾಡಿದ್ದು, ಜಮ್ಮು ಮತ್ತು ಕಾಶ್ಮೀರದ 22 ಔಟ್ ಪೋಸ್ಟ್ ಗಳ ಮೇಲೆ ಗುಂಡಿನ ಚಕಮಕಿ ನಡೆಸಿದೆ. ಇಬ್ಬರು ಯೋಧರನ್ನು ಬಲಿ ತೆಗೆದುಕೊಂಡು ಇಬ್ಬರನ್ನು ಗಾಯಗೊಳಿಸಿದೆ. ಅನೇಕ ಗ್ರಾಮಸ್ಥರು ಭಯದಿಂದ ತತ್ತರಿಸಿದ್ದಾರೆ.

2003ಕ್ಕೆ ಹೋಲಿಸಿದರೆ ಇದು ದೊಡ್ಡ ಪ್ರಮಾಣದ ದಾಳಿ ಎನ್ನಬಹುದು. ಕಳೆದ ಒಂದು ತಿಂಗಳಿನಿಂದ ಪಾಕಿಸ್ತಾನದ ಉಪಟಳ ಹೆಚ್ಚಾಗಿದೆ, ನಾವು ತುಸ್ ಪಟಾಕಿಗಳು ಅವರು ತಿಳಿಯುವ ಮುನ್ನ ನಮ್ಮ ಶಕ್ತಿಯನ್ನು ತೋರಿಸಬೇಕಿದೆ ಎಂದು ಠಾಕ್ರೆ ಹೇಳಿದ್ದಾರೆ.

Attack Pakistan, Uddhav Thackeray tells Narendra Modi

ಪಾಕಿಸ್ತಾನದ ಬಾಲವನ್ನು ಕತ್ತರಿಸದಿದ್ದರೆ ನಮ್ಮ ಬಗ್ಗೆ ಜನರಿಗೆ ವಿಶ್ವಾಸವೇ ಇಲ್ಲದ್ದಂತಾಗುತ್ತದೆ. ನಮ್ಮದು ಹೆಮ್ಮೆಯ ಕಲಿಗಳ ಬೀಡು, ಪೌರುಷವಂತ ಸಿಂಹಗಳ ನಾಡು ಎಂಬುದನ್ನು ತೋರಿಸಬೇಕಿದೆ. ಹೇಡಿಗಳಿಗೆ ಇದೆ ಸರಿಯಾದ ಪಾಠ. ಸರ್ಕಾರದಲ್ಲಿ ಪುರುಷತ್ವ ಅಸ್ತಿತ್ವದಲ್ಲಿದೆ ಎಂಬುದು ತಿಳಿಯಲಿ. ಇದು ಕೇಂದ್ರ ಸರ್ಕಾರಕ್ಕೆ ನಮ್ಮ ಪಕ್ಷದ ವಿನಮ್ರ ಕೋರಿಕೆ ಎಂದು ಉದ್ಧವ್ ಠಾಕ್ರೆ ಹೇಳಿದ್ದಾರೆ.

ಇದರ ಜೊತೆಗೆ ಅಕ್ರಮ ನುಸುಳುವಿಕೆಯನ್ನು ತಡೆಗಟ್ಟಬೇಕಿದೆ. 1,000ಕ್ಕೂ ಅಧಿಕ ಉಗ್ರರು ರಕ್ತದೋಕುಳಿ ಹರಿಸಲು ಛಾಲ್ಕಾ ಗಡಿ ಭಾಗದಲ್ಲಿ ಸುರಂಗ ತೋಡಿದ್ದರ ಬಗ್ಗೆ ಮತ್ತೆ ವಿವರಿಸಿ ಹೇಳಬೇಕಾಗಿಲ್ಲ. ಭಾರತೀಯ ಸೇನೆ ಸಮರ್ಥವಾಗಿದ್ದು, ದೇಶ, ಗಡಿ ರಕ್ಷಣೆ ಮಾಡುತ್ತಿದೆ ಎಂದಿದ್ದಾರೆ.

ಪಾಕಿಸ್ತಾನದಲ್ಲಿ ನವಾಜ್ ಷರೀಫ್ ಸರ್ಕಾರ ಆತಂರಿಕ ಕಚ್ಚಾಟದಲ್ಲಿ ತೊಡಗಿದೆ. ಅಲ್ಲಿನ ಸಂಸತ್ತಿನ ಮೇಲೆ ವಿಪಕ್ಷಗಳು ದಾಳಿ ಮಾಡುತ್ತಿವೆ. ಷರೀಫ್ ಸರ್ಕಾರ ಉಳಿಯುವುದೋ ಇಲ್ಲವೋ ಗೊತ್ತಿಲ್ಲ. ಭಾರತ ಚಾಚಿದ ಸಹಾಯ ಹಸ್ತಕ್ಕೆ ಮಸಿ ಬಳಿಯುವ ಕಾರ್ಯ ಆಗುವ ಮುನ್ನ ಎಚ್ಚೆತ್ತುಕೊಳ್ಳಬೇಕಿದೆ. ಗಡಿಭಾಗದಲ್ಲಿ ಆಗುತ್ತಿರುವ ಆಗು ಹೋಗುಗಳ ಬಗ್ಗೆ ಗಮನ ಹರಿಸುವಷ್ಟು ಪುರುಸೊತ್ತು ಷರೀಫ್ ಗಿಲ್ಲ. ಅಲ್ಲಿನ ಸರ್ಕಾರವನ್ನು ಸೈನ್ಯ, ಉಗ್ರರು, ಅಧಿಕಾರಿಗಳು, ಐಎಎಸ್ ಐ ನಿಯಂತ್ರಿಸುತ್ತಿರುವುದು ಎಲ್ಲರಿಗೂ ಗೊತ್ತಿದೆ. ಹೀಗಾಗಿ ಭಾರತ ಸರ್ಕಾರ ತಕ್ಕ ಉತ್ತರ ನೀಡಬೇಕಿದೆ ಎಂದು ಠಾಕ್ರೆ ಹೇಳಿದ್ದಾರೆ.

English summary
Shiv Sena chief Uddhav Thackeray Monday urged Prime Minister Narendra Modi to attack Pakistan and teach a lesson for its continued intrusions in Indian borders.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X