ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಮೋದಿ ಮೇಲೆ ಒತ್ತಡ ಹೇರಬೇಡಿ, ಟೈಂ ಕೊಡಿ'

By Mahesh
|
Google Oneindia Kannada News

ಮುಂಬೈ, ಸೆ.15: ಪ್ರಧಾನಿಯಾಗಿ ನರೇಂದ್ರ ಮೋದಿ ಅವರು 100 ದಿನ ಪೂರ್ಣಗೊಳಿಸಿದ್ದಕ್ಕೆ ಶುಭ ಹಾರೈಕೆಗಳ ಜೊತೆಗೆ ಟೀಕೆಗಳು ಭರಪೂರವಾಗಿ ಹರಿದು ಬಂದಿವೆ. ಈ ನಡುವೆ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ಟೀಕಾಕಾರರ ವಿರುದ್ಧ ಹರಿಹಾಯ್ದು ಮೋದಿ ಅವರನ್ನು ಸಮರ್ಥಿಸಿ ಹೇಳಿಕೆ ನೀಡಿದ್ದಾರೆ.

'ಅಧಿಕಾರ ವಹಿಸಿಕೊಂಡ 100 ದಿನದಲ್ಲೇ ಎಲ್ಲಾ ಬೆಳವಣಿಗೆ ಕಾಣಲು ಹಾತೊರೆಯಬೇಡಿ. ಜವಾಬ್ದಾರಿ ವಹಿಸಿಕೊಳ್ಳಲು ಜನರು ಹಿಂದೇಟು ಹಾಕುವ ಸಮಯದಲ್ಲಿ ಮೋದಿ ಅವರು ದೇಶವನ್ನು ಮುನ್ನಡೆಸುತ್ತಿರುವ ರೀತಿ ಕಂಡು ಹೆಮ್ಮೆ ಪಡಬೇಕಿದೆ' ಎಂದು ಸಲ್ಮಾನ್ ಖಾನ್ ಹೇಳಿದ್ದಾರೆ.

'ಒಂದು ಮನೆ ನಡೆಸುವುದು ಎಷ್ಟು ಕಷ್ಟ ಎಂಬುದು ಮನೆಯ ಯಜಮಾನನಿಗೆ ಗೊತ್ತು? ಮೋದಿ ಅವರು ದೇಶವನ್ನು ಮುನ್ನಡೆಸುವ ಹೊಣೆ ಹೊತ್ತಿದ್ದಾರೆ. ಅವರು ಸಾಗುವ ಹಾದಿಯಲ್ಲಿ ಅಡ್ಡಗಾಲು ಹಾಕದೆ ಅವರ ಬೆಂಬಲಕ್ಕೆ ನಿಲ್ಲಬೇಕಿದೆ. ಇದರಿಂದ ದೇಶಕ್ಕೆ ಒಳಿತು'ಎಂದು ಸಲ್ಮಾನ್ ಖಾನ್ ಹೇಳಿದ್ದಾರೆ.

Salman Khan defends PM Modi, says he deserves more time

ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಶುಭ ವೇಳೆಯಲ್ಲಿ ಸಲ್ಮಾನ್ ಖಾನ್ ಅವರು ತಮ್ಮ ಕುಟುಂಬದೊಡನೆ ಸಮಾರಂಭದಲ್ಲಿ ಉಪಸ್ಥಿತರಿದ್ದರು. ನರೇಂದ್ರ ಮೋದಿ ಅವರ ಅಭಿವೃದ್ಧಿ ಕಾರ್ಯಗಳ ಬಗ್ಗೆ ಸಲ್ಮಾನ್ ಖಾನ್ ಮೆಚ್ಚುಗೆ ವ್ಯಕ್ತಪಡಿಸಲು ಸಲ್ಮಾನ್ ಖಾನ್ ಅವರ ತಂದೆ ಸಲೀಂ ಖಾನ್ ಅವರೇ ಕಾರಣ ಎನ್ನಬಹುದು.[ಮೋದಿ ಉರ್ದು ವೆಬ್ಸೈಟಿಗೆ ಚಾಲನೆ]

ಖ್ಯಾತ ಸಾಹಿತಿ ಸಲೀಂ ಖಾನ್ ಅವರು ಮೋದಿ ಅವರ ಅಧಿಕೃತ ವೆಬ್ ಸೈಟ್ ನ ಉರ್ದು ಆವೃತ್ತಿಯನ್ನು ಲೋಕಾರ್ಪಣೆ ಮಾಡಿದ್ದಲ್ಲದೆ, ಮೋದಿಯವರ ಉರ್ದು ಅಂತರ್ಜಾಲಕ್ಕೆ ಕೆಲವೊಂದು ಸಲಹೆಯನ್ನು ನೀಡಿದ್ದರು. ಮಗ ಸಲ್ಮಾನ್ ಖಾನ್ ಅವರಿಗೆ ಮೋದಿ ಅವರ ಬಗ್ಗೆ ಅಪ್ದೇಟ್ ನೀಡುತ್ತಿದ್ದಾರೆ ಎನ್ನಲಾಗಿದೆ.

ಕಳೆದ ಜನವರಿಯಲ್ಲಿ ನಡೆದ ಅಂತಾರಾಷ್ಟ್ರೀಯ ಗಾಳಿಪಟ ಹಬ್ಬದಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಹಾಗೂ ಸಲ್ಮಾನ್ ಖಾನ್ ಅವರು ಪರಸ್ಪರ ಭೇಟಿಯಾಗಿದ್ದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಲ್ಮಾನ್, 2002ರಲ್ಲಿ ನಡೆದ ಗೋಧ್ರಾ ಹತ್ಯಾಕಾಂಡ ಗಲಭೆಗೆ ಮೋದಿ ಅವರು ಕ್ಷಮೆ ಕೋರುವ ಅಗತ್ಯವಿಲ್ಲ ಎಂದಿದ್ದರು. [ಮೋದಿ-ಸಲ್ಮಾನ್ ಮೊದಲ ಭೇಟಿ]

'ಎಲ್ಲಿ ತನಕ ಅವರು ಅಭಿವೃದ್ಧಿ ಪರ ಕಾರ್ಯದಲ್ಲಿ ನಿರತರಾಗಿರುತ್ತಾರೋ ಅಲ್ಲಿ ತನಕ ನಾನು ಬೆಂಬಲಕ್ಕೆ ನಿಲ್ಲುತ್ತೇನೆ' ಎಂದು ಚುನಾವಣೆಗೂ ಮುನ್ನ ಹೇಳಿದ್ದೆ. ಈಗಲೂ ಈ ಹೇಳಿಕೆಗೆ ಬದ್ಧನಾಗಿದ್ದೇನೆ. ಮೋದಿ ಅವರಿಗೆ ನಿರ್ಣಯಗಳನ್ನು ಕೈಗೊಳ್ಳಲು ಸ್ವಾತಂತ್ರ್ಯ ನೀಡಬೇಕಿದೆ. ಅವರ ಮೇಲೆ ಒತ್ತಡ ಹೇರಬಾರದು, ದೇಶದ ಜನತೆ ಆಯ್ಕೆ ಮಾಡಿದ ಪ್ರಧಾನಿಯನ್ನು ಗೌರವಿಸುವುದು ನಮ್ಮ ಕರ್ತವ್ಯ ಎಂದಿದ್ದಾರೆ.

English summary
Bollywood actor Salman Khan on Monday defended Prime Minister Narendra Modi in connection to the criticism that he has been facing within a little more than 100 days of coming to power.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X