ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೈಂಗಿಕ ಕಿರುಕುಳ : ಎಎಪಿ ಮುಖಂಡ ಗಾಂಧಿ ಮೇಲೆ ಕೇಸ್

By Mahesh
|
Google Oneindia Kannada News

ಮುಂಬೈ, ಸೆ.21: ಆಮ್ ಆದ್ಮಿ ಪಕ್ಷದ ಕಾರ್ಯಕರ್ತೆಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಎಎಪಿಯ ಪ್ರಮುಖ ನಾಯಕ ಮಯಾಂಕ್ ಗಾಂಧಿ ಹಾಗೂ ಇತರ ಐವರ ವಿರುದ್ಧ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ತರುಣ್ ಸಿಂಗ್ ಎಂಬುವರು ಲೈಂಗಿಕ ಕಿರುಕುಳ ನೀಡಿದ್ದರು. ಈ ವಿಷಯವನ್ನು ಮಯಾಂಕ್ ಗಾಂಧಿ ಮುಚ್ಚಿ ಹಾಕಲು ಯತ್ನಿಸಿದರು ಎಂದು ಯುವತಿ ದೂರಿದ್ದಾಳೆ.

ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದ ಘಟನೆಯಲ್ಲಿ ಮಯಾಂಕ್ ಗಾಂಧಿ ಹಾಗೂ ಐವರ ಪಾತ್ರ ಪ್ರಮುಖವಾಗಿದೆ ಎಂದು ಆರೋಪಿಸಿ 21 ವರ್ಷದ ಕಾರ್ಯಕರ್ತೆಯೊಬ್ಬಳು ನೀಡಿರುವ ಕ್ರಿಮಿನಲ್ ದೂರಿನ ಹಿನ್ನೆಲೆಯಲ್ಲಿ ಈ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಮುಂಬೈ ಪೊಲೀಸರು ತಿಳಿಸಿದ್ದಾರೆ.

ಎಎಪಿ ಕಾರ್ಯಕರ್ತ ತರುಣ್ ಸಿಂಗ್ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 354, 506, 509 ಪ್ರಕಾರ ಅತ್ಯಾಚಾರ ಆರೋಪಿ ಎಂದು ಪ್ರಕರಣದಲ್ಲಿ ಹೆಸರಿಸಲಾಗಿದೆ. ಮಯಾಂಕ್ ಗಾಂಧಿ ಹಾಗೂ ಇತರ ನಾಲ್ವರ ವಿರುದ್ಧ ಅತ್ಯಾಚಾರ ಕೃತ್ಯಕ್ಕೆ ನೆರವಾಗಿರುವ ಆರೋಪಗಳಿವೆ ಎಂದು
ಓಶಿವಾರ ಠಾಣೆಯ ಹೆಚ್ಚುವರಿ ಪೆÇಲೀಸ್ ಆಯುಕ್ತ ಮಿಲಿಂದ್ ಭರಂಟಿ ಹೇಳಿದ್ದಾರೆ.

Mayank Gandhi booked in molestation case

ಯುವತಿ ಹೇಳಿಕೆ: ನಾನು ಪಕ್ಷದ ಕೆಲ ಕಾರ್ಯಕರ್ತರು ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಪಕ್ಷದ ಮುಖಂಡ ಮಯಾಂಕ್ ಗಾಂಧಿ ಅವರ ಬಳಿ ದೂರು ಸಲ್ಲಿಸಿದೆ. ಆದರೆ, ಅವರು ಅದಕ್ಕೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಮತ್ತು ದುಷ್ಕರ್ಮಿಗಳಿಗೆ ಎಚ್ಚರಿಕೆಯನ್ನೂ ಕೊಡಲಿಲ್ಲ ಎಂದು ಯುವತಿ ತನ್ನ ದೂರಿನಲ್ಲಿ ತಿಳಿಸಿರುವುದಾಗಿ ಅಧಿಕಾರಿ ಹೇಳಿದ್ದಾರೆ. ಆದರೆ, ಈ ಆರೋಪವನ್ನು ತಳ್ಳಿಹಾಕಿರುವ ಮಯಾಂಕ್ ಗಾಂಧಿ, ಇದು ರಾಜಕೀಯ ದುರುದ್ದೇಶದಿಂದ ಕೂಡಿದ ಆರೋಪ ಎಂದಿದ್ದಾರೆ.

ಮಯಾಂಕ್ ಗಾಂಧಿ ಪ್ರತಿಕ್ರಿಯೆ: ತರುಣ್ ಸಿಂಗ್ ಮೇಲೆ ಆರೋಪ ಕೇಳಿ ಬಂದ ತಕ್ಷಣ ಆತನನ್ನು ಅಮಾನತುಗೊಳಿಸಿ ತನಿಖೆ ನಡೆಸಲಾಯಿತು. ಠಾಣೆಗೆ ತೆರಳಿ ಎಫ್ ಐಆರ್ ದಾಖಲಿಸು ಎಂದು ಯುವತಿಗೆ ಸೂಚಿಸಿದ್ದೆ. ಅದರೆ, ಆ ಯುವತಿ ದೂರು ನೀಡಿದ್ದೇನೆ ಸಾಕು ಎಂದು ಹೇಳಿದ್ದಳು.ಈಗ ನೋಡಿದರೆ ನನ್ನ ಮೇಲೆ ಪ್ರಕರಣ ಮುಚ್ಚಿ ಹಾಕುವ ಯತ್ನ ಎಂದು ಆರೋಪಿಸುತ್ತಿದ್ದಾಳೆ ಎಂದು ಮಯಾಂಕ್ ಗಾಂಧಿ ಪ್ರತಿಕ್ರಿಯಿಸಿದ್ದಾರೆ.

ಓಶಿವಾರದಲ್ಲಿ ಲೋಕಸಭೆ ಚುನಾವಣೆ ವೇಳೆ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದ್ದು ಎಂದು ದೂರಿನಲ್ಲಿ ದಾಖಲಿಸಲಾಗಿದೆ. ಆದರೆ, ಪ್ರಕರಣದ ಬಗ್ಗೆ ಶುಕ್ರವಾರ ದೂರು ನೀಡಲಾಗಿದ್ದು, ಎಫ್ ಐಆರ್ ದಾಖಲಿಸಲಾಗಿದೆ. ದೂರು ನೀಡಲು ಅಂದೇ ಸೂಚಿಸಿದರೂ ಇಷ್ಟು ದಿನ ವಿಳಂಬ ಮಾಡಿದ್ದಾದರೂ ಏಕೆ? ಮಯಾಂಕ್ ಗಾಂಧಿ ಪ್ರಶ್ನಿಸಿದ್ದಾರೆ.(ಪಿಟಿಐ)

English summary
Aam Aadmi Party leader Mayank Gandhi, along with five others, have been booked on charges of abetting sexual harassment after a 21-year-old female party volunteer filed a criminal complaint against them in Mumbai, police said today. The offence had occurred in April this year in suburban Oshiwara, before the Lok Sabha elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X