ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಂಕ್ತಿಭೇದ ಸಂಪ್ರದಾಯವಾದರೆ ನಿಮ್ಮ ಮನೆಯಲ್ಲಿರಲಿ

By ರಾಕೇಶ್ ಶೆಟ್ಟಿ, ಉಡುಪಿ
|
Google Oneindia Kannada News

ಉಡುಪಿಯ ಮಠ ಸದಾಕಾಲ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿರುತ್ತದೆ. ಅದರಲ್ಲೂ ಬಹುಪಾಲು ಅದು ಸುದ್ದಿಯಾಗುವುದು ವಿವಾದಗಳಿಂದಲೇ, ಹಲವು ಬಾರಿ ಅದು ಪೇಜಾವರ ಶ್ರೀಗಳ ಯಾವುದೋ ಹೇಳಿಕೆಯ ಮೂಲಕವೇ ಸುದ್ದಿಯಾದರೇ ಉಳಿದಂತೆ ಅದು ಮತ್ತೆ ಮತ್ತೆ ಸುದ್ದಿಯಾಗುವುದು ಪ್ರತ್ಯೇಕ ಪಂಕ್ತಿ ಭೋಜನ'ದ ಕಾರಣಕ್ಕೆ.

ಕೃಷ್ಣ ಮಠದ ಭೋಜನ ಶಾಲೆಯಲ್ಲಿ ಕಳೆದ ವಾರ ಬಂಟ್ಸ್ ಸಮುದಾಯದ ಮಹಿಳೆಯೊಬ್ಬರು ತನ್ನ ಸ್ನೇಹಿತೆಯರ ಜೊತೆ ಊಟಕ್ಕೆ ಕುಳಿತಿದ್ದರು. ಮಹಿಳೆ ಊಟ ಮಾಡುತ್ತಿರುವ ಸಂದರ್ಭದಲ್ಲಿ ಮಠದ ಅಧಿಕಾರಿಗಳು ಬ್ರಾಹ್ಮಣರೇತರರಿಗೆ ಇಲ್ಲಿ ಊಟಕ್ಕೆ ಅವಕಾಶವಿಲ್ಲ ಎಂದು ಮಹಿಳೆಯನ್ನು ಊಟದ ಮಧ್ಯದಲ್ಲೇ ಎಬ್ಬಿಸಿದ್ದಾರೆ ಎನ್ನುವುದು ವಿವಾದ.

ನೋವಿನ ನುಡಿಗಳು: 'ನಾನು ಉಡುಪಿ ಮೂಲದವಳು, ವೈದ್ಯಕೀಯ ಕ್ಷೇತ್ರದವಳು. ನಾನು ಚೌಕಿಯಲ್ಲಿ (ಬ್ರಾಹ್ಮಣರಿಗಾಗಿರುವ ಊಟದ ಹಾಲ್) ಊಟಕ್ಕೆ ಕುಳಿತಿಲ್ಲ.ಭೋಜನ ಶಾಲೆಯಲ್ಲಿ ಊಟಕ್ಕೆ ಕೂತೆ. ಅಲ್ಲಿ ಇತರ ಜಾತಿಯವರಿಗೆ ಊಟದ ವ್ಯವಸ್ಥೆ ಇಲ್ಲ ಎನ್ನುವುದಾದರೆ ಫಲಕ ಹಾಕಬೇಕಿತ್ತು. ತುಂಬಿದ ಊಟದ ಹಾಲಿನಲ್ಲಿ ಎಲ್ಲರ ಮುಂದೆ ನನ್ನನ್ನು ಊಟ ಮಾಡುತ್ತಿರಬೇಕಾದರೆ ಎಬ್ಬಿಸಿ ಹೊರಕ್ಕೆಕಳುಹಿಸಿದರು. ಸ್ನೇಹಿತೆಯರ ಮುಂದೆ ನನಗೆ ತುಂಬಾ ಅವಮಾನವಾಗಿದೆ.ನನಗಾದ ಪರಿಸ್ಥಿತಿ ಬೇರೆಯಾರಿಗೂ ಬರುವುದು ಬೇಡ '

ಇದು,ಉಡುಪಿಯ ಶ್ರೀಕೃಷ್ಣ ದೇವಸ್ಥಾನದ ಭೋಜನಶಾಲೆಯಿಂದ 'ಅನಾಗರೀಕ'ರ ಕೈಯ್ಯಿಂದ ಹೊರಹಾಕಲ್ಪಟ್ಟ ಹೆಣ್ಣು ಮಗಳೊಬ್ಬಳ ನೋವಿನ ನುಡಿಗಳು.ಈಗೀನ ಕಾಲದಲ್ಲೂ ಊಟಕ್ಕೆ ಕೂತವರನ್ನು ಅವರ ಚರ್ಮದ/ಜಾತಿಯ ಬಣ್ಣದಿಂದ ಗುರುತಿಸಿ ಎಬ್ಬಿಸುವ ಅನಾಗರೀಕರು ನಮ್ಮ ನಡುವೆ ಬದುಕುತಿದ್ದಾರೆ ಅನ್ನುವುದೇ ನಾಗರೀಕ ಸಮಾಜವೊಂದುತಲೆ ತಗ್ಗಿಸುವ ವಿಚಾರ. ಊಟದ ಸಮಯದಲ್ಲಿ ಮಾತ್ರ ಬೇರೆ ಜಾತಿಯವರು ಬೇಡ ಅನ್ನುವುದಾದರೇ,ಬೇರೆ ಜಾತಿಯವರು ಕೊಡುವ ದೇಣಿಗೆ, ಕಾಣಿಕೆಗಳೇಕೆ ಬೇಕು ಇವರಿಗೆ? ಪರಮಾತ್ಮ ಶ್ರೀ ಕೃಷ್ಣ ಇವರ ಖಾಸಗಿ ಸ್ವತ್ತಾದರೇ, ಹಾಗೆ ಹೇಳಿ ಬಿಡುವುದೊಳಿತು. ಆಗ ಯಾರು ಅಲ್ಲಿಗೆ ಹೋಗಿ ಹೀಗೆ ಅವಮಾನ ಮಾಡಿಸಿಕೊಂಡು ಬರಲಿಚ್ಛಿಸುವುದಿಲ್ಲ. [ಸಂಪೂರ್ಣ ಲೇಖನ ನಿಲುಮೆಯಲ್ಲಿ ಪ್ರಕಟಗೊಂಡಿದೆ ಓದಿ]

ಪ್ರತ್ಯೇಕ ಪಂಕ್ತಿ ಭೋಜನ ಉಡುಪಿಯಲ್ಲಿ ಮಾತ್ರವಿಲ್ಲ

ಪ್ರತ್ಯೇಕ ಪಂಕ್ತಿ ಭೋಜನ ಉಡುಪಿಯಲ್ಲಿ ಮಾತ್ರವಿಲ್ಲ

ಪ್ರತ್ಯೇಕ ಪಂಕ್ತಿ ಭೋಜನವೆನ್ನುವುದು ಕರ್ನಾಟಕದಲ್ಲಿ ಕೇವಲ ಉಡುಪಿ ಮಠದಲ್ಲಿ ಮಾತ್ರವಿಲ್ಲ.ರಾಜ್ಯದ ಇತರೆ ಪ್ರಖ್ಯಾತ ತೀರ್ಥಕ್ಷೇತ್ರಗಳಲ್ಲೂ ಇದು ನಡೆಯುತ್ತಲೇ ಇದೆ.ಆದರೆ, ನಮ್ಮಸೆಕ್ಯುಲರಿಸ್ಟರ ಮತ್ತು ಕಮ್ಯುನಿಸ್ಟರ ಕಣ್ಣು ಮಾತ್ರ ಯಾವಾಗಲು ಉಡುಪಿಯ ಮೇಲೆಯೇ ಬೀಳುತ್ತದೆ. ಅದೇನು ಪೇಜಾವರಶ್ರೀಗಳ ಮೇಲಿನ ವಿಶೇಷ ಮಮಕಾರದಿಂದ ಅವರ ಕಣ್ಣು ಉಡುಪಿಯ ಮೇಲಿರುತ್ತದೆಯೋ ಅಥವಾ ಇನ್ನೇನೋ ಗೊತ್ತಿಲ್ಲ.

ಪ್ರಗತಿ ಪರರು ಎಂದು ಕರೆಸಿಕೊಳ್ಳುವವರ ಗುರಿ ಪ್ರತ್ಯೇಕ ಪಂಕ್ತಿ ಭೋಜನವನ್ನು ಕೊನೆಗಾಣಿಸುವುದರ ಮೇಲೆ ಮಾತ್ರವೇ ಆಗಿದ್ದರೆ, ಇಡೀ ರಾಜ್ಯದ ಅಷ್ಟೂ ದೇವಸ್ಥಾನಗಳ ಬಗ್ಗೆ ಮಾತನಾಡ ಬೇಕಾಗುತ್ತದೆಯೇ ಹೊರತು ಕೇವಲ ಉಡುಪಿ ಮಠದ ಮೇಲೆ ಮಾತ್ರವಲ್ಲ.

ಹಾಗೆಯೇ. ಪೇಜಾವರರನ್ನು, ಬ್ರಾಹ್ಮಣರನ್ನು ಮತ್ತು ಸೆಕ್ಯುಲರ್ ಡಿಕ್ಷನರಿಯ ಅರ್ಥವಿಲ್ಲದ ವಿಕೃತ ಪದವಾದ 'ಬ್ರಾಹ್ಮಣ್ಯ'ವನ್ನು ಬಯ್ಯುತ್ತ ಕೂರುವುದರಿಂದ ಪತ್ರಿಕೆಗಳಲ್ಲಿ ಸುದ್ದಿಯಾಗಿ ಸದ್ದು ಮಾಡಬಹುದೇ ಹೊರತು ಪರಿಹಾರವೂ ದೊರಕುವುದಿಲ್ಲ.

ಬ್ರಾಹ್ಮಣ ವರ್ಗವನ್ನೇ ಆರೋಪಿ ಮಾಡುವುದು ಸರಿಯೇ?

ಬ್ರಾಹ್ಮಣ ವರ್ಗವನ್ನೇ ಆರೋಪಿ ಮಾಡುವುದು ಸರಿಯೇ?

ಹಾಗೆಯೇ, ಇಂತಹ ಘಟನೆಗಳಿಗೆ ಬ್ರಾಹ್ಮಣ ವರ್ಗವನ್ನೇ ಸಂಪೂರ್ಣವಾಗಿ ಆರೋಪಿಯ ಸ್ಥಾನದಲ್ಲಿ ನಿಲ್ಲಿಸಿಬೊಬ್ಬೆ ಹಾಕುವುದು ಸಹ ಅಷ್ಟೇ ಹೀನ ಕೃತ್ಯ. ಪ್ರತ್ಯೇಕ ಪಂಕ್ತಿ ಭೋಜನವನ್ನು ಧಿಕ್ಕರಿಸಿ ಎಲ್ಲರ ಜೊತೆ ಊಟಮಾಡುವ, ಇಂತಹ ಘಟನೆಗಳಿಂದ ತೀರ ನೊಂದುಕೊಳ್ಳುವ ಸಹೃದಯಿಗಳು ಸಹ ನಮ್ಮಜೊತೆಗಿದ್ದಾರೆ.

ನಿಮಗೇ ಬೇರೆ ಧರ್ಮದ ಅನಿಷ್ಟಗಳು ಕಣ್ಣಿಗೆ ಕಾಣಿಸುವುದಿಲ್ವಾ ಎನ್ನುತ್ತ ಚರ್ಚೆಯ ಹಾದಿ ತಪ್ಪಿಸುತ್ತಾರೆ. ನಾನು ಸೆಕ್ಯುಲರ್ ಅಲ್ಲ. ಸಾಂಪ್ರದಾಯಿಕವಾಗಿ ನಾನೊಬ್ಬ ಹಿಂದೂವಾಗಿ, ನನ್ನ ಸಮಾಜದ ಸಂಪ್ರದಾಯಗಳಿಂದ ಸಮಸ್ಯೆಗಳಾದಾಗ ದನಿಯೆತ್ತುವುದು ನನ್ನ ಕರ್ತ್ಯವ್ಯವೆಂದು ಭಾವಿಸುತ್ತೇನೆ.

ಪೇಜಾವರಶ್ರೀಗಳಿಗೆ ಪಂಕ್ತಿ ಭೋಜನ ಸಮಸ್ಯೆಯೇ ಅಲ್ಲ

ಪೇಜಾವರಶ್ರೀಗಳಿಗೆ ಪಂಕ್ತಿ ಭೋಜನ ಸಮಸ್ಯೆಯೇ ಅಲ್ಲ

ಈ ವಿವಾದದಲ್ಲಿ ಬೇಡವೆಂದರೂ ಕೇಳಿಬರುವುದು ಪೇಜಾವರ ಶ್ರೀಗಳ ಹೆಸರು. ಯಾಕೆಂದರೆ ಉಡುಪಿಯ ಅಷ್ಟ ಮಠಗಳ ಪೈಕಿ ಉತ್ತರದಾಯಿ ಅಂತ ನಮಗೆಕಾಣಿಸುವುದು ಹಿರಿಯ ಶ್ರೀಗಳಾದ ಪೇಜಾವರರೇ. ಒಂದೆಡೆ ಶ್ರೀಗಳು ದಲಿತರ ಕೇರಿಯಲ್ಲಿ ಪಾದಯಾತ್ರೆ ಮಾಡುತ್ತಾರೆ. ಆಮೇಲೆ ಅದೇನೋ ದೀಕ್ಷೆ ಕೊಡುತ್ತೇನೆ ಅಂತೆಲ್ಲ ವಿವಾದವೆಬ್ಬಿಸುತ್ತಾರೆ. ಒಟ್ಟಾರೆಯಾಗಿ ಶ್ರೀಗಳು ಹಿಂದೂಧರ್ಮದ ಸುಧಾರಣೆಗೆ ಹೊರಟು ನಿಲ್ಲುತ್ತಾರೆ. ಒಳ್ಳೆಯ ಕೆಲಸ ಯಾರು ಮಾಡಿದರೇನು, ಅದನ್ನು ಸ್ವಾಗತಿಸೋಣ. ಆದರೆ, ವೈರುಧ್ಯ ನೋಡಿ,ಅಸ್ಪೃಷ್ಯತೆಯನ್ನು ಒಂದು ಸಮಸ್ಯೆಯೆನ್ನುವಂತೆ ನೋಡುವ, ಹಿಂದೂಧರ್ಮವನ್ನು ಸುಧಾರಣೆ ಮಾಡುತ್ತೇನೆ ಎಂದು ಹೊರಡುವ ಇದೇ ಶ್ರೀಗಳಿಗೆ ಪ್ರತ್ಯೇಕ ಪಂಕ್ತಿ ಭೋಜನ ವೆನ್ನುವುದು ಸಮಸ್ಯೆಯಾಗಿ ಕಾಣುವುದಿಲ್ಲ!

ಸಾಂಪ್ರಾದಾಯಿಕ ಆಚರಣೆ ಎನ್ನುವುದು ಶ್ರೀಗಳ ವಾದ

ಸಾಂಪ್ರಾದಾಯಿಕ ಆಚರಣೆ ಎನ್ನುವುದು ಶ್ರೀಗಳ ವಾದ

ಅಸಮಾನತೆಯನ್ನು ತೊಡೆದು ಹಾಕುವುದೇ ಸಮಾಜ ಸುಧಾರಣೆಯ ಭಾಗವೆಂದು ಶ್ರೀಗಳು ಒಪ್ಪಿಕೊಂಡ ಮೇಲೆ ಪಂಕ್ತಿಬೇಧವನ್ನು ಯಾವ ವಿಧದಲ್ಲಿ ಸಮರ್ಥಿಸಿಕೊಳ್ಳಬಲ್ಲರು? ಅವರ ಪ್ರಕಾರ ಪಂಕ್ತಿ ಬೇಧವು ಸಂಪ್ರದಾಯವೆನಿಸಿಕೊಳ್ಳುತ್ತದೆ. ಇದು ನಿಜವಾಗಿಯೂ ಪರಸ್ಪರ ವಿರುದ್ಧವಾದ ನಿಲುವಲ್ಲವೇ ಪೇಜಾವರ ಶ್ರೀಗಳೇ? ಈ ಸಾಂಪ್ರಾದಾಯಿಕ ಆಚರಣೆಗಳು ಬದಲಾಗುವುದಿಲ್ಲ ಅನ್ನುವುದಾದರೆ ಯಾವ ಸುಧಾರಣೆಯ ಬಗ್ಗೆ ಶ್ರೀಗಳು ಮಾತನಾಡುತ್ತಾರೆ?

ಪ್ರತ್ಯೇಕ ಪಂಕ್ತಿ ಭೋಜನವನ್ನು ಬೇಕಾದರೆ ಮಠಗಳಲ್ಲಿ ಇಟ್ಟುಕೊಳ್ಳಲಿ. ಶ್ರೀಕೃಷ್ಣ ದೇವಸ್ಥಾನದ ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲರಿಗೂ ಒಂದೇ ಪಂಕ್ತಿಯಿರಲಿ. ಕನಿಷ್ಟ ಇಷ್ಟನ್ನೂ ಮಾಡಲಾಗದಿದ್ದರೆ, ಅಡ್ಡಗೋಡೆಯ ಮೇಲೆ ದೀಪವಿಡುವುದನ್ನು ಶ್ರೀಗಳು ನಿಲ್ಲಿಸುವುದೊಳಿತು.

'ಪ್ರತ್ಯೇಕ ಪಂಕ್ತಿಯನ್ನು ಸಂಪ್ರದಾಯದ ಹೆಸರಿನಲ್ಲಿ ಬೆಂಬಲಿಸುವವರಿಗೆ, ಸಂಪ್ರದಾಯ ಅನ್ನುವುದು ನಿಮ್ಮ ನಿಮ್ಮ ಮನೆಯಲ್ಲಿರಲಿ ಅದನ್ನು ಸಾರ್ವಜನಿಕ ಸ್ಥಳಗಳಲ್ಲಿ ಬಳಸಬೇಡಿ' ಅಂತ ಹೇಳಬಯಸುತ್ತೇನೆ. ಊಟಕ್ಕೆ ಕುಳಿತವರನ್ನು ಅವರ ಚರ್ಮದ ಬಣ್ಣದಿಂದ ಗುರುತಿಸಿ ಅರ್ಧಕ್ಕೆಎಬ್ಬಿಸಿ ಅವಮಾನ ಮಾಡುವಂತ 'ಅನಾಗರೀಕತೆ'ಯು ಯಾವ ಸೀಮೆಯ 'ಸಂಪ್ರದಾಯ'?

ಮಠಗಳು ಸಾರ್ವಜನಿಕವಲ್ಲ ಆದರೆ, ಸೀಮಿತವಾಗಿದೆ

ಮಠಗಳು ಸಾರ್ವಜನಿಕವಲ್ಲ ಆದರೆ, ಸೀಮಿತವಾಗಿದೆ

ಇಂತಹ ಪರಿಸ್ಥತಿಯನ್ನು ನಿಭಾಯಿಸಲು ಶ್ರೀಗಳು ಈ ಮುಂದಿನ ಕಾರ್ಯದಲ್ಲಿ ತೊಡಗಬೇಕಾಗುತ್ತದೆ.
1. ಮಠಗಳು ಸಾರ್ವಜನಿಕವಲ್ಲ, ಅದು ಕೆಲವು ಸಮುದಾಯಗಳಿಗೆ ಮಾತ್ರ ಸೀಮಿತವಾದುದು ಎಂದು ಘೋಷಿಸಿ, ಮನಸ್ಸಿಗೆ ಬಂದಂತಹ ಆಚರಣೆಗಳನ್ನು ಆಂತರಿಕವಾಗಿ ಮಾಡುವುದು.
2.ಹಿಂದೂಧರ್ಮದ ಸುಧಾರಣೆ ಆಗಬೇಕು ಎಂದು ಓಡಾಡುವುದು ಮುಖ್ಯವಾದರೆ, ಪಂಕ್ತಿ ಬೇಧವನ್ನುನಿಲ್ಲಿಸಬೇಕು, ಆಗ ಅವರ ಸುಧಾರಣೆಯ ಭಾಗವಾಗಿ ಪಂಕ್ತಿಬೇಧದ ನಿಷೇಧವೇ ಆದರ್ಶಪ್ರಾಯವಾಗಿಗೋಚರಿಸುತ್ತದೆ.
3.ನಮ್ಮ ಸಂಪ್ರದಾಯವೇ ಮುಖ್ಯ. ಸಮಾಜ ಸುಧಾರಣೆ ಮುಖ್ಯವಲ್ಲ ಎಂದು ತೀರ್ಮಾನಿಸಿ ಸುಧಾರಣಾ ಕಾರ್ಯಕ್ರಮಗಳಿಗೆ ತಿಲಾಂಜಲಿಯನ್ನು ಬಿಡಬೇಕು.
ಈ ಮೂರರಲ್ಲಿ ಒಂದನ್ನು ಆಯ್ಕೆ ಮಾಡದ ಹೊರತು ವಿವಾದಗಳಿಂದ ಮತ್ತು ವೈರುಧ್ಯತೆಗಳಿಂದ ಅವರು ಹೊರಬರಲು ಸಾಧ್ಯವಿಲ್ಲ. ಇದು ಹೀಗೆ ಮುಂದುವರಿದರೆ ತಮ್ಮ ಸಂಪ್ರದಾಯವನ್ನು ಸಮರ್ಥಿಸಲಾಗದ ಮತ್ತು ಸಮಾಜವನ್ನೂ ಸುಧಾರಣೆ ಮಾಡಲಾಗದ ಅಸಹಾಯಕ ಸ್ಥಿತಿಯನ್ನು ಎದುರಿಸಬೇಕಾಗುತ್ತದೆ.

ಸಭ್ಯತೆಯ ಪಾಠವನ್ನು ಹೇಳಿ ಕೊಡಬಾರದೇ?

ಸಭ್ಯತೆಯ ಪಾಠವನ್ನು ಹೇಳಿ ಕೊಡಬಾರದೇ?

ಸಂಪ್ರದಾಯದ ಹೆಸರಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಅವರ ಮಠದ ಸಿಬ್ಬಂದ್ದಿಯೊಬ್ಬ ಅನಾಗರೀಕವಾಗಿ ವರ್ತಿಸಿದಾಗ ಅದಕ್ಕೆ ಖೇದವನ್ನು ವ್ಯಕ್ತಪಡಿಸುತ್ತಾರೆಯೇ ಹೊರತು, ಸಾರ್ವಜನಿಕ ಸ್ಥಳಗಳಿಂದ ತಮ್ಮ 'ಸಂಪ್ರದಾಯ'ಕ್ಕೆ ಮುಕ್ತಿ ಕೊಡಿಸಿ ಅದನ್ನು ತಮ್ಮ ಒಳಮನೆಗೆ ತೆಗೆದುಕೊಂಡು ಹೋಗುವ ಮಾತನಾಡುವುದಿಲ್ಲ ನೋಡಿ! ಹಾಗೆಯೇ ಆ ಅನಾಗರೀಕ ಸಿಬ್ಬಂದಿಗೆ ಕನಿಷ್ಟ ಮಟ್ಟದ ಬಿಸಿಯನ್ನಾದರು ಮುಟ್ಟಿಸಿ ಸಭ್ಯತೆಯ ಪಾಠವನ್ನು ಹೇಳಿ ಕೊಡಬಾರದೇ?

ಸಂಪ್ರದಾಯಗಳು ತಪ್ಪಲ್ಲ. ಆದರೆ, ಅದೂ ಕೂಡ ಕಾಲಕ್ಕೆ ತಕ್ಕಂತೆ ಸ್ಥಳ ಮತ್ತು ರೀತಿಗಳನ್ನು ಬದಲಾವಣೆ ಮಾಡಿಕೊಳ್ಳಬೇಕು. ಕನಿಷ್ಠ ಜೊತೆಗೆ ಕೂತು ಊಟ ಮಾಡಲಾಗದಿದ್ದರೆ ಸಮಾನತೆ /ಸಾಮರಸ್ಯ ಅಂತೆಲ್ಲ ಮಾತನಾಡುತ್ತ 'ನಾವೆಲ್ಲ ಹಿಂದೂ-ನಾವೆಲ್ಲ ಒಂದು' ಅನ್ನಲೂರದು ಮತ್ತು ಹಾಗೇ ಹೇಳುತ್ತಲೇ ಸಂಪ್ರದಾಯದ ಹೆಸರಲ್ಲಿ 'ಹಿಂದೂ'ಗಳನ್ನು 'ಹಿಂದ'ಕ್ಕೆ ತಳ್ಳಲೂಬಾರದಲ್ಲವೇ?

English summary
A devotee alleged caste-based discrimination (Pankti Bheda) for having food at Udupi Sri Krishna Mutt on Tuesday. According to Vanitha Shetty, a devotee, she was asked to stop having lunch along with her Brahmin friends.Vishwesha Tirtha Swamiji of Pejawar Math said no pankti bheda followed in Sri Krishna Math/Temple here is the analysis on the controversy by Citizen journalist Rakesh Shetty.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X