Englishবাংলাગુજરાતીहिन्दीമലയാളംதமிழ்తెలుగు
Filmibeat Kannada

ಇಂಜಿನಿಯರಿಂಗ್ ಕಾಲೇಜಿಗೆ ಬಂದವರು ಯಾರು?

Updated: Thursday, August 21, 2014, 15:27 [IST]
 

ಮಣಿಪಾಲ, ಆ, 21 : ನಗರದ ಮಾಧವ ಪೈ ಕಾಲೇಜು ಆವರಣಕ್ಕೆ ವಿಶೇಷ ಅತಿಥಿಯೊಬ್ಬ ಇತ್ತೀಚೆಗೆ ಭೇಟಿ ನೀಡಿದ್ದ. ಅರಣ್ಯ ನಾಶದ ಪ್ರತೀಕ ಎಂಬಂತೆ ಕಾಡಿನಲ್ಲಿರಬೇಕಾದ ಹೆಬ್ಬಾವು ಕಾಲೇಜಿಗೆ ಆಗಮಿಸಿತ್ತು.

ನಂತರ ಉರಗ ತಜ್ಞ ಗುರುರಾಜ್‌ ಸಾಣಿಲ್‌ ಅವರನ್ನು ಕರೆಸಿ ಬೃಹತ್‌ ಗಾತ್ರದ ಹೆಬ್ಬಾವನ್ನು ಹಿಡಿದು ಆಗುಂಬೆ ಅರಣ್ಯ ಪ್ರದೇಶಕ್ಕೆ ಸುರಕ್ಷಿತವಾಗಿ ಬಿಡಲಾಯಿತು.

ಕಾಲೇಜಿನ ಹಿಂಭಾಗದಲ್ಲಿ ಮಲಗಿದ್ದ ಹೆಬ್ಬಾವು ಕಂಡ ವಿದ್ಯಾರ್ಥಿಗಳು ಬೆಚ್ಚಿಬಿದ್ದರು. ಸ್ಥಳಕ್ಕೆ ಆಗಮಿಸಿದ ಗುರುರಾಜ್‌ ಹಾವು ಹಿಡಿದು 'ಹೆಬ್ಬಾವುಗಳು ಮಾನವರನ್ನು ತಿನ್ನುವುದಿಲ್ಲ, 14 ಅಡಿ ಉದ್ದದ ಈ ಹಾವು ಸುಮಾರು 20 ವರ್ಷ ಪ್ರಾಯದ್ದಿರಬೇಕು' ಎಂದು ಮಾಹಿತಿ ನೀಡಿದರು.

ವಿದ್ಯಾರ್ಥಿಗಳ ಭಯ ದೂರಮಾಡಿದ ಗುರುರಾಜ್‌ ಅವರಿಗೆ ಹಾವಿನ ವಿವಿಧ ಭಾಗಗಳ ಪರಿಚಯ ಮಾಡಿಕೊಟ್ಟರು. ಸ್ವತಃ ವಿದ್ಯಾರ್ಥಿಗಳೇ ಹಾವಿನ ತಲೆ, ಬಾಲ ಹಿಡಿದು ಸಂಭ್ರಮಿಸಿದರು. ನಂತರ ಅರಣ್ಯ ಪ್ರದೇಶಕ್ಕೆ ಸುರಕ್ಷಿತವಾಗಿ ಬಿಡಲಾಯಿತು.

ಹೆಬ್ಬಾವು ಹಿಡಿದ ವಿದ್ಯಾರ್ಥಿಗಳು

ಮಣಿಪಾಲ ಮಾಧವ ಪೈ ಕಾಲೇಜು ಆವರಣಕ್ಕೆ ಬಂದಿದ್ದ 14 ಅಡಿ ಉದ್ದದ ಹೆಬ್ಬಾವನ್ನು ಸುರಕ್ಷಿತವಾಗಿ ಹಿಡಿದು ಅರಣ್ಯಕ್ಕೆ ಬಿಡಲಾಯಿತು.

ಬೃಹತ್ ಗಾತ್ರದ ಹೆಬ್ಬಾವು

ಕಾಡು ಬಿಟ್ಟು ನಾಡಿಗೆ ಬಂದ 14 ಅಡಿ ಉದ್ದದ ಹೆಬ್ಬಾವು ಹಿಡಿದ ಉರಗ ತಜ್ಞ ಗುರುರಾಜ್‌ ಸಾಣಿಲ್‌.

ಹಾವು ಹಿಡಿದು ವಿದ್ಯಾರ್ಥಿಗಳ ಸಂಭ್ರಮ

ಮಣಿಪಾಲ ಮಾಧವ ಪೈ ಕಾಲೇಜು ಆವರಣಕ್ಕೆ ಬಂದಿದ್ದ ಹೆಬ್ಬಾವನ್ನು ಹಿಡಿದು ಸಂಭ್ರಮಿಸಿದ ವಿದ್ಯಾರ್ಥಿಗಳು.

ಹೆಬ್ಬಾವು ಮಾನವನ್ನು ತಿನ್ನಲ್ಲ

ಮಣಿಪಾಲ ಮಾಧವ ಪೈ ಕಾಲೇಜು ಆವರಣಕ್ಕೆ ಬಂದಿದ್ದ 14 ಅಡಿ ಉದ್ದದ ಹೆಬ್ಬಾವು ಹಿಡಿದ ಉರಗ ತಜ್ಞ ಗುರುರಾಜ್‌ ಸಾಣಿಲ್‌ ಹೆಬ್ಬಾವು ಮಾನವನನ್ನು ತಿನ್ನಲ್ಲ ಎಂದು ವಿದ್ಯಾರ್ಥಿಗಳಿಗೆ ತಿಳಿವಳಿಕೆ ನೀಡಿದರು.

14 ಅಡಿ ಉದ್ದ, 20 ವರ್ಷ

20 ವರ್ಷ ಪ್ರಾಯದ ಹೆಬ್ಬಾವನ್ನು ಸುರಕ್ಷಿತವಾಗಿ ಹಿಡಿದು ಆಗುಂಬೆ ಅರಣ್ಯ ಪ್ರದೇಶಕ್ಕೆ ಬಿಡಲಾಯಿತು.

Story first published:  Thursday, August 21, 2014, 15:03 [IST]
English summary
A huge python came into Madhava Pai Memorial College campus here on Tuesday causing a panic among students.Later snake expert Gururaj Sanil was called who caught the snake safely and left it into the jungle in Agumbe. With the emerging huge buildings in Manipal the thick Kundel forest is recently destroyed.
ಅಭಿಪ್ರಾಯ ಬರೆಯಿರಿ

Please read our comments policy before posting

Subscribe Newsletter
Videos You May Like