ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯುಆರ್ ಎ ಸಾವಿಗೆ ಸಂಭ್ರಮಪಟ್ಟ ಕುಹಕಿಗಳ ಬಂಧನ

By Mahesh
|
Google Oneindia Kannada News

ಚಿಕ್ಕಮಗಳೂರು, ಆ.25: ಕನ್ನಡದ ಹಿರಿಯ ಸಾಹಿತಿ, ಜ್ಞಾನಪೀಠ ಪ್ರಶಸ್ತಿ ವಿಜೇತ ಡಾ. ಯು.ಆರ್ ಅನಂತಮೂರ್ತಿ ನಿಧನದ ಸುದ್ದಿ ಹೊರಬೀಳುತ್ತಿದ್ದಂತೆಯೇ ಕೆಲ ಸಮಾಜಘಾತುಕ ಶಕ್ತಿಗಳು ಪಟಾಕಿ ಹೊಡೆದು ಸಂಭ್ರಮಿಸಿದ ಘಟನೆ ಚಿಕ್ಕಮಗಳೂರು ಹಾಗೂ ಮಂಗಳೂರಿನಲ್ಲಿ ನಡೆದಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಚಿಕ್ಕಮಗಳೂರಿನ ಹಿಂದೂ ಸಂಘಟನೆ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಮಂಗಳೂರಿನಲ್ಲಿ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರೆದಿದೆ.

'ನರೇಂದ್ರ ಮೋದಿ ಪ್ರಧಾನಿಯಾಗಿರುವ ಭಾರತದಲ್ಲಿ ನಾನು ಇರುವುದಿಲ್ಲ' ಎಂದು ಅನಂತಮೂರ್ತಿ ಈ ಹಿಂದೆ ಹೇಳಿಕೆ ನೀಡಿದ್ದರು. ಅದಕ್ಕೆ ಕೆಲವು ಸಂಘಟನೆಗಳು ಅನಂತಮೂರ್ತಿಯವರಿಗೆ ಪಾಕಿಸ್ತಾನದ ವಿಮಾನ ಟಿಕೆಟನ್ನು ಕಳುಹಿಸಿದ್ದನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದಾಗಿದೆ. ಅನಂತಮೂರ್ತಿ ಅವರು ಮೃತರಾದ ಕೂಡಲೇ 'ದೇಶ ಬಿಡುತ್ತೇನೆ ಎಂದವರು ದೇಹ ಬಿಟ್ಟರು' ಎಂಬ ಸಂದೇಶಗಳನ್ನು ಹರಡಿಸಿದರು.

UR Ananthamurthy's death: case against Hindu Activists

ಮೂಡಿಗೆರೆಯಲ್ಲಿ ಬಂಧನ: ಸಾಹಿತಿ ಯು.ಆರ್.ಅನಂತಮೂರ್ತಿ ನಿಧನ ಹಿನ್ನೆಲೆಯಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದ್ದ ಐವರು ಯುವಕರನ್ನು ಮೂಡಿಗೆರೆ ಪೊಲೀಸರು ಬಂಧಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ಪಟ್ಟಣದಲ್ಲಿ ಬಜರಂಗದಳದ 15ಕ್ಕೂ ಹೆಚ್ಚು ಕಾರ್ಯಕರ್ತರು ಅನಂತಮೂರ್ತಿ ನಿಧನದ ಹಿನ್ನೆಲೆ ಸಂಭ್ರಮಾಚರಣೆ ನಡೆಸಿದ್ದರು.

ಇದರಿಂದ ಸ್ವಯಂಪ್ರೇರಿತವಾಗಿ ಸೆಕ್ಷನ್ 143, 147, 290, 149ರಡಿ ದೂರು ದಾಖಲಿಸಿಕೊಂಡಿದ್ದ ಮೂಡಿಗೆರೆ ಪೊಲೀಸರು ಗಿರೀಶ್, ಪ್ರವೀಣ್ ಪೂಜಾರಿ, ಭರತ್ ಬಿಜುವಳ್ಳಿ, ಹುಲಿಮನೆ ಚಂದ್ರು ಹಾಗೂ ಭರತ್ ಎಂಬುವರನ್ನ ಬಂಧಿಸಿದ್ದಾರೆ. ಇನ್ನುಳಿದ 10ಕ್ಕೂ ಹೆಚ್ಚು ಮಂದಿಗಾಗಿ ಶೋಧ ಮುಂದುವರಿಸಿದ್ದಾರೆ.

ಮಂಗಳೂರಿನ ಕದ್ರಿ ಸರ್ಕಲ್, ಮೂಡಿಗೆರೆಯ ಲಯನ್ಸ್ ಸರ್ಕಲ್ ಮತ್ತು ಚಿಕ್ಕಮಗಳೂರಿನಲ್ಲಿ ಕೆಲವು ಹಿಂದೂಪರ ಸಂಘಟನೆಯ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಾಚಾರಣೆ ನಡೆಸಿದ ಘಟನೆಗೆ ರಾಜ್ಯಾದ್ಯಂತ ಭಾರೀ ಟೀಕೆಯ ಮಹಾಪೂರವೇ ಹರಿದುಬಂದಿತ್ತು.

ಮಂಗಳೂರಿನ ಪೊಲೀಸ್ ಮುಖ್ಯಸ್ಥ ಹಿತೇಂದ್ರ ಅವರು ಮಂಗಳೂರು ಪೂರ್ವ ವಿಭಾಗದ ಇನ್ಸ್ ಪೆಕ್ಟರ್ ಟಿಡಿ ನಾಗರಾಜ್ ಅವರ ತಂಡ ಮಾಧ್ಯಮಗಳ ವರದಿ ಆಧಾರಿಸಿ ದೂರು ದಾಖಲಿಸಿಕೊಂಡಿದ್ದಾರೆ. ಆರೋಪಿಗಳನ್ನು ಗುರುತಿಸಲಾಗಿದೆ. ಶೀಘ್ರದಲ್ಲೆ ಬಂಧಿಸಲಾಗುವುದು ಎಂದಿದ್ದಾರೆ. ಆದರೆ, ಸ್ಥಳೀಯ ಬಜರಂಗದಳ ಮುಖಂಡ ಶರಣ್ ಪಂಪ್ ವೆಲ್ ಅವರು ಮಾತ್ರ ಈ ರೀತಿ ಘಟನೆ ನಡೆದಿಲ್ಲ ಎಂದಿದ್ದಾರೆ.

English summary
Karnataka Police have registered a case against alleged BJP and Hindu Jagarana Vedike activists who burst crackers to "celebrate" the death of famed writer UR Ananthamurthy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X