ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಚಿತವಾಗಿ ಕನ್ನಡ ಆಡಿಯೋ ಬುಕ್ ಇಳಿಸ್ಕೊಳ್ಳಿ

By Mahesh
|
Google Oneindia Kannada News

ಏ.23ರಂದು ವಿಶ್ವದೆಲ್ಲೆಡೆ ಪುಸ್ತಕ ದಿನಾಚರಣೆ ಆಚರಿಸಲಾಗುತ್ತದೆ. ಯುನೆಸ್ಕೋ ಮಾನ್ಯತೆ ಪಡೆದಿರುವ ಈ ಪುಸ್ತಕ ಪ್ರೇಮಿಗಳ ಹಬ್ಬ ಸುಮಾರು 100 ದೇಶಗಳಲ್ಲಿ ವಿವಿಧ ರೀತಿಯಲ್ಲಿ ಆಚರಣೆಗೆ ಒಳಪಡುತ್ತದೆ. ವಿಶ್ವ ಪುಸ್ತಕ ದಿನಾಚರಣೆ ಎಂದರೆ ಸಾಹಿತಿ, ಸಾಹಿತ್ಯ ಪ್ರೇಮಿ, ಪುಸ್ತಕ ಪ್ರಕಾಶಕರಿಗೆ ಹಬ್ಬ. ಸೃಜನಶೀಲ ನಿರ್ದೇಶಕ ಅಭಯ ಸಿಂಹ ಅವರು ಪುಸ್ತಕ ಪ್ರೇಮಿಗಳಿಗಾಗಿ ಒಂದು ಬ್ಲಾಗ್ ಬಗ್ಗೆ ಮೇಲ್ ಕಳಿಸಿದ್ದಾರೆ.

ಮಂಗಳೂರಿನ ಅತ್ರಿ ಬುಕ್ ಹೌಸ್ ಖ್ಯಾತಿಯ ಜಿ.ಎನ್.ಅಶೋಕವರ್ಧನ ಅವರು ತಮ್ಮ ಬ್ಲಾಗಿನಲ್ಲಿ ಆರಂಭಿಸಿರುವ ಆಡಿಯೋ ಪುಸ್ತಕ ಸರಣಿಯನ್ನು ಪುಸ್ತಕ ದಿನಾಚರಣೆ ಅಂಗವಾಗಿ ಓದುಗರಿಗೆ ನೀಡುತ್ತಿದ್ದೇವೆ.

ಡೇವಿಡ್ ಕಾಪರ್ಫೀಲ್ಡ್ ‌ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್ ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ ವಿ-ಧಾರಾವಾಹಿಯ ಎರಡು ಕಂತು ಬ್ಲಾಗಿನಲ್ಲಿ ಪ್ರಕಟವಾಗಿದೆ.

[ಮೂಲ ಪುಸ್ತಕದ ಮೊದಲ ಮುದ್ರಣ 1966, ಬೃಂದಾವನ್ ಪ್ರಿಂಟರ್ಸ್ ಪ್ರೈ.ಲಿ., ಚಾಮರಾಜಪೇಟೆ, ಬೆಂಗಳೂರು 18. ಪುಟಗಳು 16+550 ಬೆಲೆ ರೂ ಇಪ್ಪತ್ತೈದು ಮಾತ್ರ.]

David Copperfield Kannada audio by Ashokvardhan

ಎ.ಪಿ. ಸುಬ್ಬಯ್ಯ ಅವರ ಭಾವಾನುವಾದ ಕೃತಿಗೆ ಕೋಟ ಶಿವರಾಮ ಕಾರಂತರ ಮುನ್ನಡಿಯನ್ನು ಇಲ್ಲಿ ಕೊಡಲಾಗಿದೆ. ನಂತರ ಕೃತಿಯ ಅಧ್ಯಾಯ ಆರಂಭಗೊಳ್ಳುತ್ತದೆ. ಜತೆ ಒಂದನೆಯ ಅಧ್ಯಾಯವನ್ನು ನಿಮಗೆ ಸಂಪೂರ್ಣ ಇಲ್ಲಿ 'ಕೇಳು'ವ ಸೌಕರ್ಯವನ್ನೂ ಕಲ್ಪಿಸಲಾಗಿದೆ. ಇದನ್ನು ಮುಂದೆ ಪ್ರತಿ ಅಧ್ಯಾಯಕ್ಕೂ ಅಳವಡಿಸಿ ಕೊನೆಯಲ್ಲಿ 'ಕೇಳು-ಪುಸ್ತಕ'ವನ್ನೂ ಉಚಿತವಾಗಿ ಕೊಡುವ ಪ್ರಯೋಗ ನಡೆಸುತ್ತಿದ್ದಾರೆ. ಈ ಅಧ್ಯಾಯಗಳನ್ನು ಆಗಿಂದಾಗ್ಗೆ Download ಮಾಡಿಕೊಂಡು ನೀವು ಮತ್ತೆ ಸಮಯ ಸಿಕ್ಕಾಗ ಮೊಬೈಲ್ ಮೂಲಕವೋ, ಇ-ಪಾಡ್ ಮೂಲಕವೋ ಕೇಳಿಕೊಳ್ಳಬಹುದು. ಮುಂದೆ ಇ-ಪುಸ್ತಕ ಸಂಪೂರ್ಣಗೊಳ್ಳುವ ಸಮಯದಲ್ಲಿ ಎಲ್ಲಾ ಅಧ್ಯಾಯಗಳನ್ನೂ ಒಟ್ಟಿಗೇ ಒಂದೇ ಸ್ಥಳದಲ್ಲಿ ಕೊಡುವ ಆಶಯವೂ ನಮ್ಮದು.

ಭಾಷಾಂತರದ ಕೆಲಸ ಸುಲಭವೆಂದು ಯಾರೂ ತಿಳಿಯಬೇಕಾಗಿಲ್ಲ. ಒಂದು ಭಾಷೆಯ ಪದಸಂಪತ್ತಿಗೆ ಸಮನಾಗಿ ಇನ್ನೊಂದು ಭಾಷೆಯಲ್ಲಿ ಉಚಿತ ಪದಗಳು ಸಿಗುವುದು ಕಷ್ಟ. ಇಂಗ್ಲೆಂಡಿನ ಜೀವನಕ್ರಮವೇ ಪ್ರತ್ಯೇಕವಾದುದರಿಂದ ಅಲ್ಲಿನ ಶಿಷ್ಟಾಚಾರ, ವಸ್ತು, ಒಡವೆಗಳ ರೂಪ ಬೇರೆಯವೇ ಆದುದರಿಂದ ಅವಕ್ಕೆಲ್ಲ ಸಮಾನ ಪದಗಳನ್ನು ಕನ್ನಡದಲ್ಲಿ ಒದಗಿಸುವುದು ಕಷ್ಟ. ಈ ಅಡಚಣೆಯ ಜೊತೆಗೆ ಇಂಗ್ಲಿಷ್ ಭಾಷೆಯ ಅಂದಿನ ಅಥವಾ ಇಂದಿನ ವಾಕ್ಯ ರಚನಾ ಕ್ರಮಗಳು, ನುಡಿಗಟ್ಟುಗಳು, ಕನ್ನಡದ ಹಿಡಿತಕ್ಕೆ ಸಿಗುವುದೂ ಕಷ್ಟ. ಅವನ್ನು ಇದ್ದಕ್ಕಿದ್ದಂತೆ (ಮಕ್ಕಾಮಕ್ಕಿ) ಭಾಷಾಂತರಿಸಿದರೆ 'ಇದು ಕನ್ನಡವೇ?' ಎಂಬ ಟೀಕೆ ಬರುತ್ತದೆ.

ಹಾಗೆ ಮಾಡದೇ ಹೋದರೆ 'ಮೂಲದಲ್ಲಿ ಹೀಗಿರಲಿಲ್ಲವಲ್ಲ' ಎಂದು ಇಂಗ್ಲಿಷಿನಲ್ಲಿ ಅದನ್ನೋದಿದವರು ಹೇಳಬಹುದು. ಯಾವ ಭಾಷಾಂತರಕಾರನಿಗೂ ಈ ಸಮಸ್ಯೆ ತಪ್ಪಿದ್ದಲ್ಲ. ಇಂಥ ಅಡಚಣೆಗಳನ್ನು ಎದುರಿಸಿ, ಉತ್ಸಾಹದಿಂದ ನಮ್ಮ ಮಿತ್ರರು ಡಿಕನ್ಸಿನ ಒಂದು ಕಾದಂಬರಿಯ ರೂಪರೇಷೆಗಳು ಹೇಗಿರಬಹುದೆಂದು ತೋರಿಸುವುದಕ್ಕೆ ಪ್ರಯತ್ನಿಸಿದ್ದಾರೆ. ಇಂಥ ಅನೇಕ ಅನ್ಯದೇಶೀಯ ಕಾದಂಬರಿಗಳೂ ಮತ್ತು ಇತರ ಸಾಹಿತ್ಯಗಳೂ ಕನ್ನಡದಲ್ಲಿ ಬರಬೇಕಾಗಿದೆ. ಅನುವಾದದ ಜಟಿಲ ಸಮಸ್ಯೆಗಳನ್ನು ತಿಳಿದು, ಪರಿಶ್ರಮದಿಂದ ಅವನ್ನು ಬಿಡಿಸಿ, ಕನ್ನಡ ಜನದ ಮನಸ್ಸನ್ನು ತೃಪ್ತಿಪಡಿಸಲು ಅನೇಕ ಸಾಹಸಿಗಳು ಮುಂದೆ ಬರಬೇಕಾಗಿದ್ದ ಈ ಕಾಲದಲ್ಲಿ ಶ್ರೀ ಎ.ಪಿ. ಸುಬ್ಬಯ್ಯನವರ ಈ ಯಥಾನುಶಕ್ತಿ ಪ್ರಯತ್ನವನ್ನು ಆದರದಿಂದ ಸ್ವಾಗತಿಸಬೇಕಾಗಿದೆ. ಅವರು ದೀರ್ಘ ಕಾಲದಿಂದ ತಮ್ಮ ಬಿಡುವಿನ ಸಮಯವನ್ನು ಈ ಕೆಲಸಕ್ಕಾಗಿ ಕಳೆಯುತ್ತಿದ್ದಾರೆ. ಓದುಗರ ಸಹಕಾರ, ಸಹಾನುಭೂತಿಯಿಂದ ಅವರ ಪ್ರಯತ್ನಕ್ಕೆ ತಕ್ಕ ಪುರಸ್ಕಾರ ಸಿಗುವಂತಾಗಲೆಂದು ಹಾರೈಸುತ್ತೇನೆ.
ಇತಿ
ಶಿವರಾಮ ಕಾರಂತ
೧೭-೧೦-೧೯೬೬,
ಪುತ್ತೂರು, ದಕ.
ಅಶೋಕ್ ವರ್ಧನ್ ಅವರ ಅತ್ರಿ ಬುಕ್ ಬ್ಲಾಗ್ ನಲ್ಲಿ ಆಡಿಯೋ [ಡೌನ್ ಲೋಡ್ ಮಾಡಿಕೊಳ್ಳಿ]

English summary
World Book Day a celebration of authors, illustrators, books and (most importantly) it’s a celebration of reading. designated by UNESCO as a worldwide celebration of books and reading, and marked in over 100 countries all over the world. Athreebook house, Mangalore celebrating the day with offer to download Kannada translation audio book series of Charles Dickens's David Copperfield novel
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X