ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕನ್ನಡೇತರ ರೈಲ್ವೆ ನೌಕರರಿಗೆ ಕನ್ನಡ ಕಲಿಕಾ ಶಿಬಿರ

By Ashwath
|
Google Oneindia Kannada News

kannada
ಮಂಗಳೂರು, ಆ.7: ಕರ್ನಾಟಕದಲ್ಲಿ ಕೆಲಸ ಮಾಡುತ್ತಿರುವ ಕನ್ನಡೇತರ ರೈಲ್ವೆ ಇಲಾಖೆಯ ನೌಕರರಿಗೆ ಮಂಗಳೂರಿನ ಸೆಂಟ್ರಲ್‌ ರೈಲ್ವೆ ನಿಲ್ದಾಣದಲ್ಲಿ ಕನ್ನಡ ಕಲಿಕೆ ತರಬೇತಿ ಶಿಬಿರ ಆರಂಭಗೊಂಡಿದೆ.

ದಕ್ಷಿಣ ರೈಲ್ವೆಯ ಪಾಲಕ್ಕಾಡ್‌ ವಿಭಾಗವು ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಒಂದು ತಿಂಗಳ ಕಾಲ ಈ ತರಬೇತಿ ಶಿಬಿರವನ್ನು ಆಯೋಜಿಸಿದೆ.

ವಿವಿಧ ರಾಜ್ಯಗಳಿಗೆ ಸೇರಿದ ಸುಮಾರು 100ಕ್ಕೂ ಅಧಿಕ ಸಿಬ್ಬಂದಿಗಳು ಒಂದು ತಿಂಗಳ ತರಬೇತಿ ಶಿಬಿರದಲ್ಲಿ ಭಾಗವಹಿಸಿದ್ದಾರೆ. ಆರಂಭದಲ್ಲಿ ಕನ್ನಡ ಮಾತನಾಡುವ ತರಗತಿಯನ್ನು ಹೇಳಿಕೊಡಲಾಗುತ್ತಿದ್ದು ನಂತರ ಬರವಣಿಗೆ ತರಬೇತಿ ನಡೆಯಲಿದೆ.

ತರಬೇತಿ ಯಾಕೆ? ರಾಜ್ಯದ ರೈಲು ನಿಲ್ದಾಣಗಳಲ್ಲಿ ಅನ್ಯಭಾಷೆಯ ರೈಲ್ವೆ ನೌಕರರಿಂದ ಸಂವಹನದಲ್ಲಿ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿ ಇಲಾಖೆ ಗಮನ ಸೆಳೆಯುತ್ತಿದ್ದವು. ಆದರೆ ಈ ಪ್ರತಿಭಟನೆಗಳಿಗೆ ರೈಲ್ವೆ ಇಲಾಖೆಯಿಂದ ಸೂಕ್ತ ಪ್ರತಿಸ್ಪಂದನೆ ಸಿಕ್ಕಿರಲಿಲ್ಲ. ಇದೀಗ ಕನ್ನಡದವರೇ ಆದ ಡಿವಿ ಸದಾನಂದಗೌಡ ಅವರು ರೈಲ್ವೆ ಸಚಿವರಾಗಿ ನೇಮಕವಾದ ಮೇಲೆ ಈ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ಈ ತರಬೇತಿ ಶಿಬಿರ ಆಯೋಜಿಸಲಾಗಿದೆ.

English summary
Reports inform that, Palakkad Division of Southern Railway has started a 30 days class for the frontline Railway staff in Mangalore Central station on August 1
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X