ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕುದ್ರೋಳಿ ದೇವಾಲಯಕ್ಕೆ ಮತ್ತಿಬ್ಬರು ವಿಧವಾ ಅರ್ಚಕರು

|
Google Oneindia Kannada News

ಮಂಗಳೂರು, ಸೆ. 29 : ಮಂಗಳೂರಿನ ಕುದ್ರೋಳಿ ಗೋಕರ್ಣನಾಥೇಶ್ವರ ದೇವಾಲಯದಲ್ಲಿ ಇಬ್ಬರು ವಿಧವೆಯರನ್ನು ಅರ್ಚಕರಾಗಿ ನೇಮಕ ಮಾಡಿಕೊಳ್ಳುವ ಮೂಲಕ ಇತಿಹಾಸ ನಿರ್ಮಿಸಲಾಗಿದೆ. ಸೋಮವಾರ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಅರ್ಚಕಿಯರು ಭಕ್ತಾದಿಗಳಿಗೆ ಪ್ರಸಾದ ವಿತರಣೆಯನ್ನು ಮಾಡಿದ್ದಾರೆ.

ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಲಕ್ಷ್ಮೀ ಮತ್ತು ಚಂದ್ರಾವತಿ ಅವರನ್ನು ಅರ್ಚಕರಾಗಿ ನೇಮಕ ಮಾಡಿಕೊಳ್ಳಲಾಗಿದೆ. ಸೋಮವಾರ ಭವ್ಯ ಮೆರವಣಿಗೆಯಲ್ಲಿ ಮಹಿಳಾ ಅರ್ಚಕರನ್ನು ಕುದ್ರೋಳಿ ದೇವಾಲಯಕ್ಕೆ ಕರೆತರಲಾಯಿತು. ಕೇಂದ್ರದ ಮಾಜಿ ಸಚಿವ ಹಾಗೂ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಾಲಯ ನವೀಕರಣದ ರೂವಾರಿ ಬಿ. ಜನಾರ್ದನ ಪೂಜಾರಿ ಅರ್ಚಕಿಯರನ್ನು ದೇವಾಲಯದ ಆವರಣದಲ್ಲಿ ಸ್ವಾಗತಿಸಿದರು. [ಕುದ್ರೋಳಿದೇವಾಲಯದ ಅರ್ಚಕರಾಗಿ ವಿಧವೆಯರು]

Kudroli temple

ಅರ್ಚಕಿಯರ ನೇಮಕದ ಬಗ್ಗೆ ಮಾತನಾಡಿದ ಜನಾರ್ದನ ಪೂಜಾರಿ ಅವರು, ನಾವು ಮಾತೃದೇವೋ ಭವಃ ಎಂದು ಹೇಳುತ್ತವೆ. ಅಂತೆಯೇ ನಾವು ವಿಧವೆಯರನ್ನು ಕೀಳಾಗಿ ನೋಡಬಾರದು ಅವರಿಗೆ ಗೌರವ ನೀಡಬೇಕು ಎಂದು ಹೇಳಿದರು. ದೇವಾಲಯ ಎಲ್ಲರನ್ನು ಮಾನವರಂತೆ ಕಾಣುತ್ತದೆ ಜಾತಿ, ಲಿಂಗ ಮುಂತಾದ ಯಾವುದೇ ತಾರತಮ್ಯ ಮಾಡುವುದಿಲ್ಲ. ಆದ್ದರಿಂದ ಅವರನ್ನು ಅರ್ಚಕಿಯರನ್ನಾಗಿ ನೇಮಕ ಮಾಡಲಾಗಿದೆ ಎಂದರು. [ಕುದ್ರೋಳಿ ದೇವಾಲಯದಲ್ಲಿ ದಸರಾ ಸಂಭ್ರಮ]

ಮಹಿಳಾ ಅರ್ಚಕಿಯರಿಗೆ ನಾವು ಎಲ್ಲಾ ರೀತಿಯ ಸ್ವಾತಂತ್ರ್ಯ ನೀಡಿದ್ದೇವೆ. ದೇವಾಲಯದಲ್ಲಿ ನಿಯಮದಂತೆ ಪೂಜೆ ಸಲ್ಲಿಸಲು ಅವರಿಗೆ ಅವಕಾಶ ಮಾಡಿಕೊಡಲಾಗಿದೆ ಎಂದು ಹೇಳಿದರು. ಬ್ರಹ್ಮಶ್ರೀ ನಾರಾಯಣ ಗುರುವಿನ ತತ್ವವನ್ನು ಕುದ್ರೋಳಿ ದೇವಾಲಯದಲ್ಲಿ ಅನುಸರಿಸಲಾಗುತ್ತದೆ. ಗುರುಗಳ ಸಂದೇಶದ ಅನ್ವಯ ಮಹಿಳಾ ಅರ್ಚಕಿಯರನ್ನು ನೇಮಕ ಮಾಡಿಕೊಂಡಿದ್ದೇವೆ ಎಂದು ಜನಾರ್ದನ ಪೂಜಾರಿ ಸ್ಪಷ್ಟನೆ ನೀಡಿದರು.

ಕಳೆದ ವರ್ಷ ಸಹ ಇಬ್ಬರು ವಿಧವೆಯರನ್ನು ಅರ್ಚಕಿಯರನ್ನಾಗಿ ಕುದ್ರೋಳಿ ದೇವಾಲಯದಲ್ಲಿ ನೇಮಕ ಮಾಡಲಾಗಿತ್ತು. ಕಳೆದ ಒಂದು ವರ್ಷದಿಂದ ಅವರು ದೇವಾಲಯದಲ್ಲಿ ಪೂಜೆ ಸಲ್ಲಿಸುತ್ತಿದ್ದಾರೆ. ಸದ್ಯ, ಪರಿಶಿಷ್ಟ ಜಾತಿ ಮತ್ತು ಪಂಗಡದ ಇಬ್ಬರನ್ನು ಅರ್ಚಕಿಯರನ್ನಾಗಿ ನೇಮಕ ಮಾಡಿಕೊಂಡಿರುವುದರಿಂದ ಇತಿಹಾಸ ನಿರ್ಮಿಸಿದಂತಾಗಿದೆ. [ಚಿತ್ರ : ಐಸಾಕ್ ರಿಚರ್ಡ್ ಮಂಗಳೂರು]

English summary
For the first time in the history Mangalore Kudroli Gokarnanathehwara Temple appointed two widows from SC/ST as priests to perform pujas and other rituals at the temple on September 29, Monday. The appointed women priests are Laxmi and Chandravati.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X