ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು ಪಾಲಿಕೆ ವಿರುದ್ಧ ವಿನೂತನ ಪ್ರತಿಭಟನೆ

|
Google Oneindia Kannada News

ಮಂಗಳೂರು, ಜು. 22 : ಕಂಕನಾಡಿ ಮಾರುಕಟ್ಟೆಯನ್ನು ಸ್ವಚ್ಛಗೊಳಿಸುವಂತೆ ಎಷ್ಟು ಸಲ ಮಹಾನಗರ ಪಾಲಿಕೆಗೆ ಮನವಿ ಮಾಡಿದರೂ ಸ್ಪಂದಿಸದ ಹಿನ್ನಲೆಯಲ್ಲಿ ವ್ಯಾಪಾರಿಗಳು ಶ್ರಮದಾನ ಮಾಡಿ ಮಾರುಕಟ್ಟೆಯನ್ನು ಸ್ವಚ್ಚಗೊಳಿಸಿದ್ದಾರೆ. ಸ್ಥಳಕ್ಕೆ ಆಗಮಿಸದ ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಂಕನಾಡಿ ಮಾರುಕಟ್ಟೆಯನ್ನು ಸ್ವಚ್ಚಗೊಳಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದು ಕಳೆದ ಹತ್ತು ತಿಂಗಳಿನಿಂದ ಮಾರುಕಟ್ಟೆಯ ವ್ಯಾಪಾರಿಗಳು ಆರೋಗ್ಯ ಸಚಿವ ಯು. ಟಿ. ಖಾದರ್, ಸ್ಥಳೀಯ ಶಾಸಕರಾದ ಜೆ.ಆರ್.ಲೋಬೋ, ಉಸ್ತುವಾರಿ ಮಂತ್ರಿಗಳಾದ ರಮಾನಾಥ ರೈ ಅವರಿಗೆ ಮನವಿ ಮಾಡಿದ್ದರು.

Kankanady Market

ಸ್ಥಳೀಯ ಪಾಲಿಕೆ ಸದಸ್ಯರು ಮತ್ತು ಮಂಗಳೂರು ಮಹಾನಗರ ಪಾಲಿಕೆಗೂ ಮನವಿ ಮಾಡಲಾಗಿತ್ತು. ಆದರೆ, ಭರವಸೆಗಳನ್ನು ನೀಡಿದ ಎಲ್ಲರೂ ಮಾರುಕಟ್ಟೆಯ ಕಡೆಗೆ ಬರಲಿಲ್ಲ. ಸ್ಥಳೀಯ ಶಾಸಕರಾದ ಜೆ.ಆರ್. ಲೋಬೋರವರು ಸುಮಾರು ಒಂದು ವರ್ಷದ ಹಿಂದೆ ಮಾರುಕಟ್ಟೆಗೆ ಭೇಟಿ ನೀಡಿ ಶೌಚಾಲಯ ದುರಸ್ತಿ ಮಾಡಿಸುತ್ತೇನೆ ಎಂದು ನೀಡಿದ್ದ ಭರವಸೆಯೂ ಈಡೇರಲಿಲ್ಲ. [ತರಕಾರಿ ವ್ಯಾಪಾರಿಗಳಿಗೆ ನಷ್ಟ ಉಂಟುಮಾಡಿದ ಮಳೆ]

ಮಹಾನಗರ ಪಾಲಿಕೆ ಸೇರಿದಂತೆ ಇತರರ ನಿರ್ಲಕ್ಷ್ಯದಿಂದ ಬೇಸತ್ತ ವ್ಯಾಪಾರಿಗಳು ಮಂಗಳವಾರ ಸ್ವಯಂ ಪ್ರೇರಿತವಾಗಿ ಮಾರುಕಟ್ಟೆ ಪ್ರವೇಶ ದ್ವಾರದ ಬಳಿ ಸಂಗ್ರಹಕೊಂಡಿದ್ದ ಕೊಳಚೆ ಮಣ್ಣನ್ನು ತೆರೆವುಗೊಳಿಸಿ, ಮಾರುಕಟ್ಟೆಯನ್ನು ಸ್ವಚ್ಚಗೊಳಿಸಿದ್ದಾರೆ. ಇದರಿಂದ ಜನರು ಮಾರುಕಟ್ಟೆಗೆ ಹೋಗಿ ಬರಲು ಸಹಕಾರಿಯಾಗಿದೆ.

Kankanady

ವ್ಯಾಪಾರಿಗಳು ಸೇರಿ ಮಾಡಿದ ಶ್ರಮದಾನ ಕಾರ್ಯದಲ್ಲಿ ಮಾರುಕಟ್ಟೆ ವ್ಯಾಪಾರಿಗಳ ಸಂಘದ ಅಧ್ಯಕ್ಷರಾದ ಅಲಿಹಸನ್, ಕಾರ್ಯದರ್ಶಿ ರೋಶನ್ ಪತ್ರಾವೊ, ಉಪಾಧ್ಯಕ್ಷ ವಸಂತ್, ಸದಸ್ಯರಾದ ಧೀರಜ್, ಸತ್ತಾರ್, ನವೀನ್, ಝಹೀರ್ ಮುಂತಾದವರು ಪಾಲ್ಗೊಂಡಿದ್ದರು.

English summary
Kankanady Market vendors protest against Mangalore Mahanagara Palike by cleaning the market. Mahanagara Palike fail to clean market till 10 months.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X