ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇಂಡಿಯನ್ ಮುಜಾಹಿದೀನ್ ನಂಟು: ಇಬ್ಬರಿಗೆ ಜಾಮೀನು

By ಐಸಾಕ್‌ ರಿಚರ್ಡ್‌,ಮಂಗಳೂರು
|
Google Oneindia Kannada News

ಮಂಗಳೂರು, ಜು.28: ಇಂಡಿಯನ್ ಮುಜಾಹಿದೀನ್ ಸಂಘಟನೆಯೊಂದಿಗೆ ಹಣಕಾಸಿನ ನಂಟು ಹೊಂದಿದ ಆರೋಪದಲ್ಲಿ ಬಿಹಾರದ ಲಕ್ಕಿಸರಾಯ್ ಪೊಲೀಸರಿಂದ ಬಂಧಿತರಾಗಿದ್ದ ಮಂಗಳೂರಿನ ಆಯಿಷಾ ಬಾನು ಸಹಿತ ನಾಲ್ವರು ಆರೋಪಿಗಳಲ್ಲಿ ಇಬ್ಬರನ್ನು ಬಿಹಾರ ಹೈಕೋರ್ಟ್ ಬೇಷರತ್ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದೆ.

ಆಯೇಷಾ ಬಾನುರಿಂದ ಹಣ ಪಡೆದಿದ್ದ ಆರೋಪದಲ್ಲಿ ಬಂಧಿತರಾಗಿದ್ದ ಸೂರಲ್ಪಾಡಿಯ ಮುಷ್ತಾಕ್ ಅಹ್ಮದ್ ಮತ್ತು ಅಂಬ್ಲಮೊಗರಿನ ಮುಹಮ್ಮದ್ ಆಸೀಫ್ ರಿಗೆ ಕಳೆದ ಜು.18ರಂದು ಬಿಹಾರ ಹೈಕೋರ್ಟ್ ಬೇಷರತ್ ಜಾಮೀನಿನ ಮೇಲೆ ಬಿಡುಗಡೆಯ ಆದೇಶ ನೀಡಿದ್ದು, ಮುಹಮ್ಮದ್ ಆಸಿಫ್ ಸೋಮವಾರ ಊರಿಗೆ ತಲುಪಿದ್ದರೆ, ಮುಷ್ತಾಕ್ ಅಹ್ಮದ್ ಶುಕ್ರವಾರ ಸಂಜೆ ಮನೆ ಸೇರಿದ್ದಾರೆ.

ಆಯೇಷಾ ಬಾನು ನಡೆಸಿದ್ದ ಹವಾಲ ಹಣ ವ್ಯವಹಾರದಲ್ಲಿ ಯುವಕ ಮುಸ್ತಾಕ್ ಅಹ್ಮ‌ದ್ ಹಾಗೂ ಮೊಹಮ್ಮದ್ ಆಸೀಫ್ ಸಂಬಂಧ ಹೊಂದಿದ್ದರು ಎಂಬ ಆರೋಪದಲ್ಲಿ ಬಿಹಾರ ಲಕ್ಕಿಸರಾಯ್ ಪೊಲೀಸರು 2013ರ ನ.22ರಂದು ಮಂಗಳೂರಿಗೆ ಬಂದು ಇಬ್ಬರನ್ನು ಬಂಧಿಸಿ ಬಿಹಾರಕ್ಕೆ ಕರೆದೊಯ್ದಿದ್ದರು.

Hawala Bihar mangalore

2013ರ ನ.11ರಂದು ಆಯೇಷಾ ಬಾನು ಮತ್ತು ಆಕೆಯ ಪತಿ ಜುಬೇರ್‌ನನ್ನು ಬಿಹಾರ ಪೊಲೀಸರು ಬಂಧಿಸಿದ್ದರು. ಅವರಿಬ್ಬರನ್ನು ಬಿಹಾರಕ್ಕೆ ಕರೆದೊಯ್ದು ವಿಚಾರಣೆ ನಡೆಸಿದ ಸಂದರ್ಭ ಮೊಹಮ್ಮದ್ ಆಸೀಫ್ ಮತ್ತು ಮುಸ್ತಾಕ್ ಮೊಹಮ್ಮದ್ ಕೂಡಾ ಹಣಕಾಸು ವ್ಯವಹಾರದಲ್ಲಿ ಭಾಗಿಯಾಗಿದ್ದರು ಎಂದು ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಇವರಿಬ್ಬರನ್ನು ಬಂಧಿಸಿ ಬಿಹಾರಕ್ಕೆ ಕರೆದೊಯ್ಯಲಾಗಿತ್ತು.[ಇಂಡಿಯನ್ ಮುಜಾಹಿದೀನ್ ಭಯೋತ್ಪಾದನೆಗೆ ಹಿಂದೂ ಯುವಕರೇ ಟಾರ್ಗೆಟ್!]

ಬಿಹಾರ ಲಕ್ಕಿಸರಾಯ್ ಜೈಲ್‌ನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಮೊಹಮ್ಮದ್ ಆಸೀಫ್ ಮತ್ತು ಮುಸ್ತಾಕ್ ಮೊಹಮ್ಮದ್ ಜಾಮೀನಿಗಾಗಿ ಬಿಹಾರ ಕೈಕೋರ್ಟ್‌ಗೆ ಮನವಿ ಸಲ್ಲಿಸಿದ್ದರು.
8 ತಿಂಗಳುಗಳ ಕಾಲ ವಿಚಾರಣೆ ನಡೆಸಿದ ನ್ಯಾಯಾಲಯ ಜಾಮೀನು ಮಂಜೂರುಗೊಳಿಸಿ ತೀರ್ಪು ಪ್ರಕಟಿಸಿದೆ.

ಮೊಹಮ್ಮದ್ ಆಸೀಫ್ ಕಳೆದ ಸೋಮವಾರ ಮಂಗಳೂರಿಗೆ ಆಗಮಿಸಿದರೆ, ತಾಂತ್ರಿಕ ಕಾರಣಗಳಿಂದಾಗಿ ಮುಸ್ತಾಕ್ ಮೊಹಮ್ಮದ್ ಶುಕ್ರವಾರ ಸಂಜೆ ಆಗಮಿಸಿದ್ದಾರೆ.

English summary
A court in Bihar granted unconditional bail on July 18 to Muhammad Asif (23) from Amblamogaru and Mustaq Ahmed (45) from Suralpadi who were arrested by the Lakhisarai District Police on November 22, 2013 along with Ayisha-Zubeir couple on the charges of illegal money transfer from Bihar and Mangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X