ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಘವೇಶ್ವರ ಭಾರತಿ ಸ್ವಾಮೀಜಿಗೆ ಹವ್ಯಕರ ಬೆಂಬಲ

By Mahesh
|
Google Oneindia Kannada News

ಮಂಗಳೂರು, ಆ.28: ವೇಣೂರು ವಲಯ ಹವ್ಯಕ ಸಂಘಟನೆಯು ಶ್ರೀರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಮಹಾಸ್ವಾಮಿಗಳನ್ನು ಬ್ಲಾಕ್ ಮೇಲ್ ಮಾಡಿದ ಘಟನೆಯನ್ನು ಉಗ್ರವಾಗಿ ಖಂಡಿಸಿದೆ. ತಪ್ಪಿತಸ್ಥ ಶಾಸ್ತ್ರಿ ದಂಪತಿಗಳಿಗೆ ಸೂಕ್ತ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದೆ.

ವಲಯದ ಸಮಸ್ತ ಹವ್ಯಕ ಬಾಂಧವರ ಪರವಾಗಿ ವಲಯಾಧ್ಯಕ್ಷ ಪರಮೇಶ್ವರ ಭಟ್ ಖಂಡನಾ ಹೇಳಿಕೆಯನ್ನು ನೀಡಿದ್ದು, 'ಸಮಸ್ತ ಹಿಂದೂ ಬಾಂಧವರ ಭಾವನೆಗೆ ಧಕ್ಕೆ ತರುವಂತಹ ಕಾರ್ಯವನ್ನು ಪ್ರೇಮಲತಾ ದಿವಾಕರ ಶಾಸ್ತ್ರಿ ಹಾಗೂ ಕುಟುಂಬಿಕರು ಮಾಡಿದ್ದಾರೆ' ಎಂದು ಹೇಳಿದರು. ತಪ್ಪಿತಸ್ಥ ಆರೋಪಿಗಳು, ಅವರಿಗೆ ಕುಮ್ಮಕ್ಕು ನೀಡುವ ಕಾಣದ ಕೈಗಳ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದರು.

ಶ್ರೀರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಮಹಾಸ್ವಾಮಿಗಳನ್ನು ಬ್ಲಾಕ್ ಮೇಲ್ ಮಾಡಿದ ಘಟನೆಯನ್ನು ಸೂರ್ಯನಾರಾಯಣ ಆರಾಧನಾ ಸೇವಾ ಸಮಿತಿ ಬಲ್ಲಂಗೇರಿ ಅಂಗರಕರಿಯ ತೀವ್ರವಾಗಿ ಖಂಡಿಸಿದೆ.

ಈ ಪ್ರಕರಣ ಕೇವಲ ದುರುದ್ದೇಶಪೂರಕವಾಗಿ ಮಾಡಿದ್ದಾಗಿದ್ದು, ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು, ಮುಂದೆಂದೂ ಈ ರೀತಿಯ ಘಟನೆಗಳು ಸಂಭವಿಸಬಾರದೆಂದು ಸಮಿತಿಯ ಅಧ್ಯಕ್ಷ ಉದಯಕುಮಾರ್ ಬಾಲವನ, ಕಾರ್ಯದರ್ಶಿ ಎ.ಗಣರಾಜ್ ಭಟ್ ಆಗ್ರಹಿಸಿದ್ದಾರೆ.[ದಂಪತಿಗೆ ನ್ಯಾಯಾಂಗ ಬಂಧನ]

Havyaka Community extend support to Raghaveshwara Bharathi

ಉಪ್ಪಿನಂಗಡಿ ಮಂಡಲದ ಖಂಡನೆ: ಘಟನೆಯನ್ನು ಉಪ್ಪಿನಂಗಡಿ ಹವ್ಯಕ ಮಂಡಲ ತೀವ್ರವಾಗಿ ಖಂಡಿಸಿದೆ. ತಪ್ಪಿತಸ್ಥ ಶಾಸ್ತ್ರಿ ದಂಪತಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದೆ. ಅವಿಚ್ಛಿನ್ನ ಪರಂಪರೆಯನ್ನು ಹೊಂದಿರುವ ಶ್ರೀ ರಾಮಚಂದ್ರಾಪುರ ಮಠ ಹಾಗೂ ಶ್ರೀಗಳ ವಿರುದ್ಧದ ಈ ಆರೋಪಗಳು ಹುರುಳಿಲ್ಲದ್ದು, ಇಂತಹ ಸಮಾಜ ಘಾತುಕ ಶಕ್ತಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕೆಂದು ಉಪ್ಪಿನಂಗಡಿ ಹವ್ಯಕ ಮಂಡಲದ ಅಧಕ್ಷ ಬಾಲ್ಯ ಶಂಕರ ಭಟ್ ಆಗ್ರಹಿಸಿದ್ದಾರೆ.

ನಮ್ಮ ಮಠದ ಮೇಲೆ ಸಾಕಷ್ಟು ಆರೋಪಗಳು ಈ ಹಿಂದೆ ಕೂಡಾ ಕೇಳಿಬಂದಿವೆ. ಬೇರೆ ಬೇರ್ ವಿಷಯಕ್ಕೆ ಆರೋಪ ಮಾಡಲಾಗಿತ್ತು. ಇದು ಮೊದಲನೆಯ ಆರೋಪವೇನಲ್ಲ. ಈಗ ಮಾನ ಹೋಗುವಂಥ ಆರೋಪ ಮಾಡಲಾಗಿದೆ. ಇನ್ನು ಪ್ರಾಣ ಮಾತ್ರ ಉಳಿದು ಕೊಂಡಿದೆ. ಪ್ರಾಣ ಇರುವವರೆಗೂ ಭಕ್ತರಿಗಾಗಿ ಹೋರಾಡುತ್ತೇನೆ. ನಾನು ಬದುಕಿನಲ್ಲಿ ಯಾರಿಗೂ ಕೆಡುಕನ್ನು ಬಯಸಿಲ್ಲ ಎಂದು ರಾಘವೇಶ್ವರ ಶ್ರೀಗಳು ಪ್ರತಿಕ್ರಿಯಿಸಿದ್ದನ್ನು ಇಲ್ಲಿ ಸ್ಮರಿಸಬಹುದು.[ಪೂರ್ಣ ವಿವರ ಇಲ್ಲಿ ಓದಿ]

English summary
Havyaka Community in Venur, Uppinangady extended their support to Raghaveshwara Bharathi, Ramachandrapura Math and demanded punishment to Singer Premalatha couple who tried to defame the Swamiji. The seer is facing Sexual harassment case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X