ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರಿನಲ್ಲಿ ಹಜ್ ಯಾತ್ರೆಗೆ ಬೇಗ್ ಚಾಲನೆ

|
Google Oneindia Kannada News

ಮಂಗಳೂರು, ಆ.28 : ಕರ್ನಾಟಕದಿಂದ ಈ ವರ್ಷದ ಹಜ್ ಯಾತ್ರೆ ಬುಧವಾರ ಆರಂಭಗೊಂಡಿದೆ. ಮಂಗಳೂರು ವಿಮಾನ ನಿಲ್ದಾಣದಿಂದ ಹೊರಟ ಯಾತ್ರೆಗೆ ವಾರ್ತಾ ಮತ್ತು ಹಜ್ ಖಾತೆ ಸಚಿವ ರೋಷನ್ ಬೇಗ್ ಚಾಲನೆ ನೀಡಿದರು. ಸೆ.12ರಂದು ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಎರಡನೇ ಸುತ್ತಿನ ಯಾತ್ರೆಗೆ ಚಾಲನೆ ನೀಡಲಿದ್ದಾರೆ.

ಬುಧವಾರ ಬೆಳಗ್ಗೆ ರೋಷನ್‌ ಬೇಗ್ ಅವರು ಮಂಗಳೂರು ವಿಮಾನ ನಿಲ್ದಾಣದಲ್ಲಿ ಹಜ್ ಯಾತ್ರೆಗೆ ತೆರಳುವ ವಿಮಾನಕ್ಕೆ ಹಸಿರುನಿಶಾನೆ ತೋರಿಸಿದರು. ಈ ಸಂದರ್ಭದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್, ಶಾಸಕರಾದ ಮೊಹಿದೀನ್ ಬಾವಾ, ಜೆ.ಆರ್. ಲೋಬೋ ಮುಂತಾದವರು ಉಪಸ್ಥಿತರಿದ್ದರು.

ಯಾತ್ರೆಗೆ ಹಸಿರು ನಿಶಾನೆ ತೋರಿಸಿದ ಬಳಿಕ ಮಾತನಾಡಿ ರೋಷನ್ ಬೇಗ್, ಹಜ್ ಯಾತ್ರೆಗೆ ದೇಶದಲ್ಲೇ ಮೊದಲ ವಿಮಾನ ಮಂಗಳೂರಿನಿಂದ ಇಂದು ತೆರಳುತ್ತಿದೆ. ಬೆಂಗಳೂರಿನಲ್ಲಿ ಹಜ್‌ಯಾತ್ರೆಗೆ ಸೆಪ್ಟಂಬರ್ 12ರಂದು ಮುಖ್ಯಮಂತ್ರಿಗಳು ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು. [ಹಜ್ ಯಾತ್ರೆಗೆ 5ಸಾವಿರ ಯಾತ್ರಿಕರು]

ಮಂಗಳೂರಿನಿಂದ ಕುವೈತ್‌ಗೆ ಅಂತಾರಾಷ್ಟ್ರೀಯ ವಿಮಾನ ಹಾರಾಟವು ಅಕ್ಟೋಬರ್ 27ರಿಂದ ಆರಂಭವಾಗಲಿದೆ. ಈ ಸಂಬಂಧ ಈಗಾಗಲೇ ಕೇಂದ್ರ ವಿಮಾನಯಾನ ಸಚಿವರ ಜೊತೆ ಹಾಗೂ ಏರ್ ಇಂಡಿಯಾ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದು, ಸಕಾರಾತ್ಮಕ ಸ್ಪಂದನೆ ದೊರಕಿದೆ ಎಂದರು.

ಸಮಾರಂಭದಲ್ಲಿ ಮಾತನಾಡಿದ ಆರೋಗ್ಯ ಸಚಿವ ಯು.ಟಿ. ಖಾದರ್ ಅವರು, ಮಂಗಳೂರು ಹಜ್ ಶಿಬಿರದಲ್ಲಿ ಸಾರ್ವಜನಿಕ ಮತ್ತು ಯಾತ್ರಿಕರ ಆರೋಗ್ಯ ಕಾಪಾಡಲು ಈಗಾಗಲೇ ವೈದ್ಯರ ಸುಸಜ್ಜಿತ ತಂಡವನ್ನು ನಿಯೋಜಿಸಲಾಗಿದೆ. [ಹಜ್ ಯಾತ್ರಿಕರಿಗೆ ಪುನರ್ಮನನ ಶಿಬಿರ]

Mangalore

ಯಾತ್ರಿಕರಿಗೆ ಯಾವುದೇ ರೀತಿಯ ತೊಂದರೆಗಳಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಆ.27ರಿಂದ ಸೆಪ್ಟಂಬರ್ 1ರವರೆಗೆ ಪ್ರತಿದಿನ ಒಂದು ವಿಮಾನ ಹಜ್ ಯಾತ್ರಿಕರನ್ನು ಮಂಗಳೂರಿನಿಂದ ಕರೆದುಕೊಂಡು ಹೋಗಲಿದೆ. ಬುಧವಾರ 130 ಯಾತ್ರಿಕರು ಹಜ್‌ಗೆ ತೆರಳಿದ್ದಾರೆ. [ಚಿತ್ರ, ಮಾಹಿತಿ : ಕರ್ನಾಟಕ ವಾರ್ತೆ]

English summary
The first flight with Haj pilgrims took off from Mangalore International Airport on Wednesday with 130 passengers. Minister for Information, Haj R. Roshan Baig flagged off the Air India Express with Minister for Health and Family Welfare U.T. Khader.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X