ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಎನ್ಎಫ್ ಶೂಟೌಟ್ ಪ್ರಕರಣ ಸಿಐಡಿ ತನಿಖೆಗೆ

By Mahesh
|
Google Oneindia Kannada News

ಬೆಂಗಳೂರು, ಏ.20: ಶೃಂಗೇರಿ ಚೆಕ್ ಪೋಸ್ಟ್ ಬಳಿ ನಕ್ಸಲ್ ನಿಗ್ರಹ ಪಡೆ(ಎಎನ್ಎಫ್) ಸಿಬ್ಬಂದಿ ಶೂಟೌಟ್ ಗೆ ಬಲಿಯಾದ ಕಬೀರ್ ಸಾವಿನ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲಾಗಿದೆ ಎಂದು ಗೃಹ ಸಚಿವ ಕೆ.ಜೆ ಜಾರ್ಜ್ ಘೋಷಿಸಿದ್ದಾರೆ.

ಶನಿವಾರ ಮುಂಜಾನೆ 4.30ರ ಸುಮಾರಿನಲ್ಲಿ ಶೃಂಗೇರಿಯ ತನಿಕೋಡು ಚೆಕ್ ಪೋಸ್ಟ್ ಮಾರ್ಗವಾಗಿ ತೆರಳುತ್ತಿದ್ದ ಕಬೀರ್ ಹಾಗೂ ಅತನ ಸಹಚರ ಮೇಲೆ ಪೊಲೀಸರು ಏಕಾಏಕಿ ಗುಂಡು ಹಾರಿಸಿ ಕೊಂದಿರುವ ಆರೋಪ ಎದುರಾಗಿದೆ. ನಕ್ಸಲ್ ಪೀಡಿತ ಪ್ರದೇಶದಲ್ಲಿ ಅವೇಳೆಯಲ್ಲಿ ಸಂಚರಿಸಿದ್ದೇ ಅಮಾಯಕ ಕಬೀರ್ ಪಾಲಿಗೆ ಮೃತ್ಯುವಾಗಿ ಪರಿಣಮಿಸಿತ್ತು.

ಈ ದುರ್ಘಟನೆ ಬಗ್ಗೆ ಕಬೀರ್ ಕುಟುಂಬದವರು ಹಾಗೂ ಬಂಧು ಮಿತ್ರರು ತೀವ್ರ ಆಕ್ರೋಶ ವ್ಯಕ್ತಪಡಿಸಿ ನ್ಯಾಯಕ್ಕಾಗಿ ಮಂಗಳೂರಿನ ಶಾಸಕ ಮೊಯಿದ್ದೀನ್ ಬಾವಾ ಅವರ ಮೊರೆ ಹೊಕ್ಕಿದ್ದಾರೆ. ಅಮಾಯಕರ ಹತ್ಯೆಯನ್ನು ಸರ್ಕಾರ ಸಹಿಸುವುದಿಲ್ಲ ಈ ಬಗ್ಗೆ ಗೃಹಸಚಿವರೊಡನೆ ಮಾತನಾಡುತ್ತೇನೆ ಎಂದು ಭರವಸೆ ನೀಡಿದ ಬಾವಾ ಅವರು ಕೆಜೆ ಜಾರ್ಜ್ ಅವರೊಟ್ಟಿಗೆ ಮಾತುಕತೆ ನಡೆಸಿದ್ದಾರೆ.

CID to probe ANF shoot out which killed Cattle trader Kabir

ನಂತರ ತನಿಕೋಡು ಶೂಟೌಟ್ ಪ್ರಕರಣವನ್ನು ಸಿಐಡಿ ತನಿಖೆಗೆ ಒಳಪಡಿಸುವಂತೆ ಗೃಹ ಸಚಿವ ಕೆಜೆ ಜಾರ್ಜ್ ಅವರು ಆದೇಶ ನೀಡಿದ್ದಾರೆ. ಮೃತ ಯುವಕ ಕಬೀರ್ ಕುಟುಂಬದವರಿಗೆ ರಾಜ್ಯ ಸರ್ಕಾರದಿಂದ 5 ಲಕ್ಷ ಪರಿಹಾರ ಧನ ಘೋಷಿಸಲಾಗಿದೆ.

ಸುಳ್ಳು ಕೇಸು ದಾಖಲು?: ಶೃಂಗೇರಿ ಹಾಗೂ ತೀರ್ಥಹಳ್ಳಿಯಲ್ಲಿ ಜಾನುವಾರುಗಳ ಖರೀದಿ ಮುಗಿಸಿಕೊಂಡು ಸುಮಾರು 21 ಜಾನುವಾರುಗಳನ್ನು ಶೃಂಗೇರಿ -ಕಾರ್ಕಳ ಮಾರ್ಗವಾಗಿ ಮಂಗಳೂರಿನ ಕಡೆಗೆ ಕರೆದೊಯ್ಯಲಾಗಿತ್ತು. ಜಾನುವಾರು ಖರೀದಿ, ಸಾಗಾಟಕ್ಕೆ ಪರವಾನಗಿ ಕೂಡಾ ಪಡೆಯಲಾಗಿದೆ. ಆದರೆ, ತನಿಕೋಡು ಚೆಕ್ ಪೋಸ್ಟ್ ಬಳಿ ತಪಾಸಣೆ ವೇಳೆ ಕಬೀರ್ ನನ್ನು ಕೊಂದು ಹಾಕಿದರು ಎಂದು ಗುಂಡೇಟಿನಿಂದ ಪಾರಾಗಿ ಮಂಗಳೂರು ಸೇರಿದ ರಫೀಕ್ ಹೇಳಿದ್ದಾರೆ.

22 ವರ್ಷ ವಯಸ್ಸಿನ ಉಮರ್ ಫರೂಖ್ ಎಎನ್ ಎಫ್ ವಶದಲ್ಲಿದ್ದರೆ, ಕಬೀರ್ ಕಸಿನ್ ರಫೀಕ್, ಡ್ರೈವರ್ ಪ್ರಮೋದ್ ಸುರಕ್ಷಿತವಾಗಿ ಮಂಗಳೂರು ತಲುಪಿದ್ದಾರೆ. ಸರಫರಾಜ್ ನಾಪತ್ತೆಯಾಗಿದ್ದಾರೆ.

ಶೃಂಗೇರಿ ಪೊಲೀಸರು ಐಪಿಸಿ ಸೆಕ್ಷನ್ 143, 147, 148 ಹಾಗೂ 379 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಮೂಲಕ ಕಬೀರ್ ಹಾಗೂ ಆತನ ಸಹಚರರು ಜಾನುವಾರುಗಳನ್ನು ಕದ್ದು ಮಾರಾಟಕ್ಕೆ ತೆರಳುತ್ತಿದ್ದರು. ಎಎನ್ ಎಫ್ ಜತೆ ಕಿತ್ತಾಡಿದ್ದಲ್ಲದೆ ಮಾರಾಕಾಸ್ತ್ರಗಳನ್ನು ಹೊಂದಿದ್ದರು ಎಂದು ಎಫ್ ಐಆರ್ ಹಾಕಲಾಗಿದೆ ಎಂದು ತಿಳಿದು ಬಂದಿದೆ. ಜಾನುವಾರ ಸಾಗಾಟಕ್ಕೆ ಲೈಸನ್ಸ್ ಹೊಂದಿರಲಿಲ್ಲ ಹಾಗೂ ಅವರ ನಡೆ ನುಡಿ ಅನುಮಾನಾಸ್ಪದವಾಗಿತ್ತು ಎಂದು ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ಚೇತನ್ ಹೇಳಿದ್ದಾರೆ.

ಮೃತ ಕಬೀರ್ ಶವವನ್ನು ಮಂಗಳೂರಿಗೆ ಸಾಗಿಸದೆ ಶೃಂಗೇರಿಯ ಶವಾಗಾರದಲ್ಲಿ ಇರಿಸಲಾಗಿತ್ತು. ಶೃಂಗೇರಿ ಕಡೆಗೆ ಬಂದ ಕಬೀರ್ ಕುಟುಂಬಸ್ಥರನ್ನು ಹಿಂದೂಪರ ಸಂಘಟನೆಗಳು ಅಡ್ಡಗಟ್ಟಿದ ಪರಿಣಾಮ ಎರಡು ಗುಂಪಿನ ನಡುವೆ ಮಾತಿಗೆ ಮಾತು ಬೆಳೆದು ಜಗಳ ಶುರುವಾಗಿದೆ. ಈ ಸಂದರ್ಭದಲ್ಲಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿದ ವೇಳೆಗೆ ಆಗಮಿಸಿದ ಪೊಲೀಸರು ಲಘು ಲಾಠಿಚಾರ್ಜ್ ಮಾಡಿ ಗುಂಪನ್ನು ಚದುರಿಸಿದ್ದಾರೆ. ಶೃಂಗೇರಿಯಲ್ಲಿ ಉಂಟಾದ ಈ ಚಕಮಕಿಯ ನಂತರ ಮಂಗಳೂರಿನ ಚೊಕ್ಕಬೆಟ್ಟು, ಕೃಷ್ಣಾಪುರಗಳಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿತ್ತು. ಆದರೆ, ಪರಿಸ್ಥಿತಿ ಈಗ ನಿಯಂತ್ರಣದಲ್ಲಿದೆ ಎಂದು ತಿಳಿದು ಬಂದಿದೆ..

English summary
Following a request from Congress MLA Mohiuddin Bava Home minister KJ George ordered CID enquiry into ANF shoot out at Sringeri. An innocent youth from Mangalore Kabir was shot dead by Anti-Naxal Force (ANF) personnel at Tanikodu check-post on the Sringeri–Karkala Road on Saturday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X