ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿದ್ಯುತ್ ಸಂಪರ್ಕಕ್ಕೆ ವಾಸ್ತವ್ಯ ಪ್ರಮಾಣ ಪತ್ರ ಕಡ್ಡಾಯ

|
Google Oneindia Kannada News

ಮಂಗಳೂರು, ಸೆ. 15 :ಯಾರದೋ ಒತ್ತಡಕ್ಕೆ ಬಿದ್ದು ಅಥವಾ ತರಾತುರಿಯಲ್ಲಿ ಯಾರಿಗೂ ವಿದ್ಯುತ್‌ ಸಂಪರ್ಕ ಕಲ್ಪಿಸಬಾರದು. ನಗರಾಭಿವೃದ್ಧಿ ಇಲಾಖೆಯಿಂದ ಭೂ ಮಂಜೂರಾತಿ ಪಡೆಯದ ಹಾಗೂ ವಾಸ್ತವ್ಯ ಪ್ರಮಾಣ ಪತ್ರ ಹೊಂದಿರದ ಯಾವುದೇ ಅನಧಿಕೃತ ಕಟ್ಟಡಗಳಿಗೆ ಇನ್ನು ಮುಂದೆ ವಿದ್ಯುತ್‌ ಸಂಪರ್ಕ ಕಲ್ಪಿಸದಿರಲು ಸರ್ಕಾರ ತೀರ್ಮಾನ ಕೈಗೊಂಡಿದೆ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಮಂಗಳೂರಿನಲ್ಲಿ ಭಾನುವಾರ ಮಾತನಾಡಿದ ಡಿ.ಕೆ.ಶಿವಕುಮಾರ್ ಅವರು, ಯಾರದೋ ಒತ್ತಡಕ್ಕೆ ಬಿದ್ದು ಅಥವಾ ತರಾತುರಿಯಲ್ಲಿ ಯಾರಿಗೂ ವಿದ್ಯುತ್‌ ಸಂಪರ್ಕ ಕಲ್ಪಿಸಬಾರದು. ಈ ಬಗ್ಗೆ ಎಲ್ಲ ಎಸ್ಕಾಂಗಳಿಗೂ ಸೂಚನೆ ನೀಡಲಾಗಿದೆ. ಈ ಸೂಚನೆ ಪಾಲನೆಯಾಗದಿದ್ದರೆ ಅದಕ್ಕೆ ಸಂಬಂಧಪಟ್ಟ ಎಂಜಿನಿಯರ್‌ಗಳು ಜವಾಬ್ದಾರರಾಗುತ್ತಾರೆ ಎಂದು ಸಚಿವರು ತಿಳಿಸಿದರು.

DK Shivakumar

ನಿರಂತರ ಜ್ಯೋತಿ : ರಾಜ್ಯದಲ್ಲಿ ಮೂರನೇ ಹಂತದಲ್ಲಿ ನಿರಂತರ ಜ್ಯೋತಿ ಯೋಜನೆಯನ್ನು ಈ ವರ್ಷ ಕೈಗೆತ್ತಿಕೊಳ್ಳಲು ಸರ್ಕಾರ ನಿರ್ಧರಿಸಿದೆ. ಈ ಹಿಂದಿನ ಬಾಕಿ ಉಳಿದಿರುವ ಎಲ್ಲ ಸಂಪರ್ಕಗಳನ್ನು ಈ ಯೋಜನೆಯಲ್ಲಿ ಸೇರ್ಪಡೆಗೊಳಿಸಲಾಗುವುದು. ದಿನಕ್ಕೆ 24 ಗಂಟೆ ಕಾಲವೂ ವಿದ್ಯುತ್‌ ಪೂರೈಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು.

ಮಳೆರಾಯ ಈ ಬಾರಿ ನಮ್ಮನ್ನು ಕಾಪಾಡಿದ್ದು ಈ ವರ್ಷ ವಿದ್ಯುತ್ ಸಮಸ್ಯೆ ಉಂಟಾಗುವುದಿಲ್ಲ. 2016ರ ವೇಳೆಗೆ 3,000 ಮೆಗಾವ್ಯಾಟ್ ಹೆಚ್ಚುವರಿ ವಿದ್ಯುತ್‌ ಉತ್ಪಾದನೆಯ ಗುರಿ ಹೊಂದಲಾಗಿದೆ. ಈ ಪೈಕಿ 1,000 ಮೆಗಾವ್ಯಾಟ್ ವಿದ್ಯುತ್ತನ್ನು ಸೌರ ಶಕ್ತಿಯಿಂದ ಪಡೆಯಲಾಗುವುದು ಎಂದರು.

ಸ್ಥಳೀಯ ಜನರ ಸಹಕಾರ ಬೇಕು : ಕೇಂದ್ರ ಸರ್ಕಾರ ನಿಡ್ಡೋಡಿ ಉಷ್ಣ ವಿದ್ಯುತ್‌ ಯೋಜನೆ ಬಗ್ಗೆ ಆಸಕ್ತಿ ವಹಿಸಿದೆ. ಆದರೆ, ಸ್ಥಳೀಯ ಜನರು ಸಹಕಾರ ಕೊಟ್ಟರೆ ಮಾತ್ರ ನಾವು ಮುಂದುವರಿಯುತ್ತೇವೆ. ಅವರ ಸಹಕಾರ ಇಲ್ಲದಿದ್ದರೆ ಯೋಜನೆ ಜಾರಿಗೊಳಿಸುವುದಿಲ್ಲ. ಕಲ್ಲಿದ್ದಲು ವೆಚ್ಚದಲ್ಲಿ ಬಹಳಷ್ಟು ಉಳಿತಾಯ ಆಗುವುದರಿಂದ ಮತ್ತು ಅಗ್ಗದ ದರದಲ್ಲಿ ವಿದ್ಯುತ್‌ ಒದಗಿಸಲು ಸಾಧ್ಯವಿರುವುದರಿಂದ ನಿಡ್ಡೋಡಿ ಪ್ರದೇಶವನ್ನು ಆಯ್ಕೆ ಮಾಡಲಾಗಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು. [ಚಿತ್ರ : ಐಸಾಕ್ ರಿಚರ್ಡ್, ಮಂಗಳೂರು]

English summary
Minister for Energy D.K.Shivakumar announced that, electricity connections would not be provided to buildings constructed without obtaining a building license or occupancy certificate issued by the urban development authority.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X