ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು : ಕೈಕಂಬ ಸೇತುವೆ ಬಳಿ ಯುವತಿ ಶವ ಪತ್ತೆ

By ಐಸಾಕ್ ರಿಚರ್ಡ್, ಮಂಗಳೂರು
|
Google Oneindia Kannada News

ಮಂಗಳೂರು, ಜು. 9 : ಕೈಕಂಬ ಸೇತುವೆ ಬಳಿ ಯುವತಿ ಮೃತದೇಹ ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಬುಧವಾರ ಬೆಳಗ್ಗೆ ಸೇತುವೆ ಬಳಿ ಯುವತಿ ಮೃತದೇಹ ನೋಡಿದ ಸ್ಥಳೀಯರು ಬಜ್ಪೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮೃತದೇಹದ ಗುರುತು ಪತ್ತೆ ಹಚ್ಚಲಾಗಿದ್ದು ಗುರುಪುರದ ನಿವಾಸಿ ಮಾರಪ್ಪ ಪೂಜಾರಿ ಪುತ್ರಿ ಮಲ್ಲಿಕಾ (17) ಎಂದು ಗುರುತಿಸಲಾಗಿದೆ. ಪಾಲ್ಗುಣಿ ನದಿಯ ಕೈಕಂಬ ಸೇತುವೆ ಬಳಿ ಬುಧವಾರ ಮಲ್ಲಿಕಾ ಮೃತದೇಹ ಪತ್ತೆಯಾಗಿದೆ. ಗುರುಪುರದ ಬಟ್ಟೆ ಅಂಗಡಿಯೊಂದರಲ್ಲಿ ಮಲ್ಲಿಕಾ ಕೆಲಸ ಮಾಡುತ್ತಿದ್ದಳು ಎಂದು ಸ್ಥಳೀಯರು ಹೇಳಿದ್ದಾರೆ.

ಶವ ನೋಡಿದ ಸ್ಥಳೀಯರು ಬಜ್ಪೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ. ಮಂಗಳವಾರ ಸಂಜೆ ಮಲ್ಲಿಕಾ ಪಾಲ್ಗುಣಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ.

Suicide
English summary
Mangalore : Body of young girl found floating in Phalguni river in Gurpur near Kaikamba bridge. The deceased has been identified as Mallika (17), daughter of Marappa Poojary, a resident of Gurpur. She was working as a sales girl in a Cloth store in Gurpur. A case has been registered in the Bajpe police station.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X