ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿ.ಕೆ.ಎಸ್.ಐಯ್ಯಂಗಾರ್ ನಿಧನಕ್ಕೆ ಮೋದಿ ಸಂತಾಪ

|
Google Oneindia Kannada News

ಬೆಂಗಳೂರು, ಆ.20 :ಯೋಗಗುರು ಬಿ.ಕೆ.ಎಸ್.ಐಯ್ಯಂಗಾರ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಈ ಕುರಿತು ಅವರು ಟ್ವಿಟ್ ಮಾಡಿದ್ದಾರೆ.

ಹಿಂದಿನ ಸುದ್ದಿ : ಕೋಲಾರ ಮೂಲದ ಖ್ಯಾತ ಯೋಗಗುರು ಬಿ.ಕೆ.ಎಸ್.ಐಯ್ಯಂಗಾರ್ ಬುಧವಾರ ಬೆಳಗ್ಗೆ ವಿಧಿವಶರಾಗಿದ್ದಾರೆ. ಮೂತ್ರಕೋಶದ ವೈಫಲ್ಯದಿಂದ ಬಳಲುತ್ತಿದ್ದ ಅವರು, ಪುಣೆಯ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ಮುಂಜಾನೆ 3.15ರ ಸುಮಾರಿಗೆ ಮೃತಪಟ್ಟಿದ್ದಾರೆ.

ಬೆಳ್ಳೂರು ಕೃಷ್ಣಮಾಚಾರ್ ಸುಂದರರಾಜ ಐಯ್ಯಂಗಾರ್ ಬಿ.ಕೆ.ಎಸ್.ಐಯ್ಯಂಗಾರ್ ಎಂದು ಪ್ರಸಿದ್ಧಿ ಪಡೆದಿದ್ದರು. 96 ವರ್ಷ ವಯಸ್ಸಿನ ಅವರು ಮೂತ್ರಕೋಶ ವೈಫಲ್ಯದಿಂದ ಬಳಲುತ್ತಿದ್ದರು. ಮಂಗಳವಾರ ಅವರನ್ನು ಪುಣೆಯ ಪ್ರಯಾಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಮುಂಜಾನೆ ಅವರು ವಿಧಿವಶರಾಗಿದ್ದಾರೆ.

BKS Iyengar

ಡಿಸೆಂಬರ್ 14, 1918ರಲ್ಲಿ ಜನಿಸಿದ ಬಿ.ಕೆ.ಎಸ್.ಐಯ್ಯಂಗಾರ್ ಅವರು, ಭಾರತೀಯ ಯೋಗವನ್ನು ಪ್ರಪಂಚದಾದ್ಯಂತ ಪರಿಚಯಿಸಿದ್ದರು. ಯೋಗದ ಕುರಿತು ಹಲವಾರು ಪುಸ್ತಕಗಳನ್ನು ಪ್ರಕಟಿಸಿ ಜನರಿಗೆ ಹೆಚ್ಚಿನ ಅರಿವನ್ನು ಮೂಡಿಸಿದರು. 2014ನೇ ಸಾಲಿನ ಪದ್ಮವಿಭೂಷಣ ಪ್ರಶಸ್ತಿಯನ್ನು ಬಿ.ಕೆ.ಎಸ್.ಐಯ್ಯಂಗಾರ್ ಪಡೆದಿದ್ದರು. [ಬಿ.ಕೆ.ಎಸ್.ಐಯ್ಯಂಗಾರ್ ವೆಬ್ ಸೈಟ್]

1966ರಲ್ಲಿ ಐಯ್ಯಂಗಾರ್ ಅವರು ಬರೆದ ಪ್ರಥಮ ಪುಸ್ತಕ 'Light on Yoga' ಹದಿನೇಳು ಭಾಷೆಗಳಲ್ಲಿ ತರ್ಜುಮೆಗೊಂಡಿದ್ದು, ಸುಮಾರು 10 ಲಕ್ಷ ಪ್ರತಿಗಳು ಮಾರಾಟವಾಗಿದ್ದವು. ಸುಮಾರು ಎಪ್ಪತ್ತು ವರ್ಷಗಳ ಕಾಲ ವಿಶ್ವದ ಯೋಗಾಸಕ್ತರಿಗೆ 'ಪತಾಂಜಲಿ ಯೋಗಮಹಿಮೆಯನ್ನು ಹೇಳಿಕೊಟ್ಟ ಹೆಗ್ಗಳಿಕೆ ಐಯ್ಯಂಗಾರ್ ಅವರದ್ದು. [ಐಯ್ಯಂಗಾರ್ ಗೆ ಶಾಂತಿ ನೊಬೆಲ್ ಯೋಗ?]

English summary
Yoga guru Bellur Krishnamachar Sundararaja Iyengar popularly known as BKS Iyengar (96) passed away at 3.15 AM on August 20 at private hospital in Pune. BKS Iyengar was born on December 14, 1918 in Bellur in Kolar district, Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X