ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಾಂತಿಯುತವಾಗಿ ಜನರಿಂದ ಹಕ್ಕು ಚಲಾವಣೆ

|
Google Oneindia Kannada News

ಬೆಂಗಳೂರು, ಏ. 17 : ಲೋಕಸಭೆ ಚುನಾವಣೆಯ ಮತದಾನ ಕರ್ನಾಟಕದಲ್ಲಿ ಬಿರುಸಿನಿಂದ ನಡೆಯುತ್ತಿದ್ದರೂ ಶಾಂತಿಯುತವಾಗಿದೆ. ಅಲ್ಲಲ್ಲಿ ಕಾರ್ಯಕರ್ತರ ನಡುವೆ ಘರ್ಷಣೆಯಂತಹ ಪ್ರಕರಣ ವರದಿಯಾಗಿದ್ದು, ಬಿಟ್ಟರೆ ನಕ್ಸಲ್ ಪೀಡಿತ ಪ್ರದೇಶಗಳಲ್ಲಿಯೂ ಮತದಾರರು ಉತ್ಸಾಹದಿಂದ ಬಂದು ತಮ್ಮ ಹಕ್ಕು ಚಲಾಯಿಸಿದ್ದಾರೆ.

ಬೆಳಗ್ಗೆ ಏಳು ಗಂಟೆಗೆ ಮತದಾನ ಆರಂಭವಾಗಿದ್ದು, ಸಂಜೆ 6 ಗಂಟೆಯ ತನಕ ಮತದಾನ ಮಾಡಲು ಅವಕಾಶವಿದೆ. ಸಮಯ ಮುಗಿದ ಮೇಲೆ ಮತಗಟ್ಟೆ ಮುಂದೆ ಜನರು ಮತದಾನ ಮಾಡಲು ಕಾಯುತ್ತಿದ್ದರೆ, ಅವರಿಗೆ ಹೆಚ್ಚುವರಿ ಸಮಯಾವಕಾಶ ನೀಡಲು ಚುನಾವಣಾ ಆಯೋಗ ನಿರ್ಧರಿಸಿದೆ. [ಮತದಾನದ ಚಿತ್ರಗಳನ್ನು ನೋಡಿ]

voting

* ನೆಲಮಂಗಲದ ಮಂಡಿಗೆರೆಯಲ್ಲಿ ಮತದಾರನೊಬ್ಬ ಕುಡಿದ ಮತ್ತಿನಲ್ಲಿ ಮತಯಂತ್ರ ಧ್ವಂಸಗೊಳಿಸಿದ ಪರಿಣಾಮ ಮತದಾನ ಸ್ಥಗಿತಗೊಂಡಿತ್ತು.
* ರಾಮನಗರದ ಬಿಡದಿ ಬಳಿಯ ಕಂಚುಗಾರನಹಳ್ಳಿಯಲ್ಲಿ ಜೆಡಿಎಸ್​​ ಕಾರ್ಯಕರ್ತೆ ಜಾನಕಿ ಮೇಲೆ ಕಾಂಗ್ರೆಸ್ ಕಾರ್ಯಕರ್ತರಿಂದ ಹಲ್ಲೆ ನಡೆಸಿದ ಘಟನೆ ನಡೆದಿದೆ.
* ಕೆಜಿಎಫ್ ನಲ್ಲಿ ಬಿಜೆಪಿ ಕಾರ್ಯಕರ್ತ ಪಾಂಡ್ಯನ್ ಮೇಲೆ ಜೆಡಿಎಸ್ ಕಾರ್ಯಕರ್ತರು ಮಾರಣಾಂತಿಕ ಹಲ್ಲೆ ನಡೆಸಿದ್ದು, ಪಾಂಡ್ಯನ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
* ಕೋಲಾರದ ಮಾಸ್ತಿಯಲ್ಲಿ ಹಣ ಹಂಚುತ್ತಿದ್ದ ಜೆಡಿಎಸ್ ಕಾರ್ಯಕರ್ತರನ್ನು ಪೊಲೀಸರು ತಡೆದರು.
* ಹಣ ಹಂಚುವ ವಿಚಾರದಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್​ ಕಾರ್ಯಕರ್ತರ ನಡುವೆ ಗಲಾಟೆ ನಡೆದ ಪ್ರಕರಣ ದೊಡ್ಡಬಳ್ಳಾಪುರದ ಆಡುವಳ್ಳಿ ಗ್ರಾಮಪಂಚಾಯತಿ ವ್ಯಾಪ್ತಿಯ ಗೊಳ್ಳವಳ್ಳಿ ಮತಗಟ್ಟೆ ನಡೆದಿದೆ.
* ಬೆಳಗಾವಿಯ ಗೋಕಾಕ್ ತಾಲೂಕಿನ ಮೆಳವತ್ತಿಯಲ್ಲಿ ಬಿಜೆಪಿ ಕಾರ್ಯಕರ್ತನ ಮೇಲೆ ಕಾಂಗ್ರೆಸ್ಸಿನವರು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.
* ಚಾಮರಾಜನಗರದಲ್ಲಿ ಜೆಡಿಎಸ್ ಅಭ್ಯರ್ಥಿ ಕೋಟೆ ಶಿವಣ್ಣ ನಾಪತ್ತೆಯಾಗಿದ್ದಾರೆ. [ಕೋಟೆ ಶಿವಣ್ಣ ಎಲ್ಲಿ?]

English summary
Elections 2014 : Single phase polling for 28 Lok Sabha seats in Karnataka began this. Till around noon, officials said, polling had been peaceful so far.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X