ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೆಡಿಎಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವೆ : ಗೌಡರು

|
Google Oneindia Kannada News

ಬೆಂಗಳೂರು, ಮೇ 19 : "ಜನಪರ ಹೋರಾಟಗಳನ್ನು ಮುಂದುವರೆಸುತ್ತೇನೆ. ರಾಜಕೀಯದಿಂದ ನಿವೃತ್ತಿಯಾಗಿ ಹೋರಾಟಗಳಿಂದ ಹಿಂದೆ ಸರಿಯುವುದಿಲ್ಲ. ಜೆಡಿಎಸ್ ಪಕ್ಷವನ್ನು ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ತರುವುದು ನನ್ನ ಗುರಿ" ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಘೋಷಿಸಿದ್ದಾರೆ.

ಭಾನುವಾರ 81ನೇ ವಸಂತಕ್ಕೆ ಕಾಲಿಟ್ಟ ಸಂದರ್ಭದಲ್ಲಿ ತಮ್ಮ ನಿವಾಸದಲ್ಲಿ ಅಭಿಮಾನಿಗಳು, ಕುಟುಂಬ ಸದಸ್ಯರೊಂದಿಗೆ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ದೇವೇಗೌಡರು ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು. ಈ ಸಂದರ್ಭದಲ್ಲಿ ರಾಜಕೀಯ ನಿವೃತ್ತಿ ಪಡೆಯುವುದಿಲ್ಲ ಎಂದು ಗೌಡರು ಸ್ಪಷ್ಟಪಡಿಸಿದರು.

HD Deve Gowda

ಅಧಿಕಾರವಿರಲಿ ಅಥವ ಇಲ್ಲದಿರಲಿ ದೇವೇಗೌಡರು ಎಂದೂ ಜನಪರ ಹೋರಾಟಗಳಿಂದ ದೂರ ಉಳಿದಿಲ್ಲ. ಆದ್ದರಿಂದ ರಾಜಕೀಯ ನಿವೃತ್ತಿ ಪಡೆದು ಜನಪರ ಹೋರಾಟಗಳಿಂದ ದೂರವಾಗುವುದಿಲ್ಲ ಎಂದು ದೇವೇಗೌಡರು ಹೇಳಿದರು. [ಹಾಸನದಲ್ಲಿ ದೇವೇಗೌಡರಿಗೆ ಗೆಲುವು]

ಕೈಯಲ್ಲಿ ಅಧಿಕಾರವಿಲ್ಲದಾಗಲೂ ಕರ್ನಾಟಕದಲ್ಲಿ ಹಲವಾರು ಹೋರಾಟಗಳನ್ನು ಮಾಡಿದ್ದೇನೆ. ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ಹೋರಾಟ ನಿರಂತರವಾಗಿರುತ್ತದೆ ಎಂದರು. ಮುಂದಿನ ಲೋಕಸಭೆ ಚುನಾವಣೆಗೂ ಸ್ಪರ್ಧೆ ಮಾಡುತ್ತೀರಾ? ಎಂದರೆ, ನೋಡೋಣ ಎಂದು ಗೌಡರು ಪ್ರತಿಕ್ರಿಯೆ ನೀಡಿದರು.

ಮೋದಿಗೆ ಅಭಿನಂದನೆ : ನರೇಂದ್ರ ಮೋದಿ ಅವರು ಪ್ರಧಾನಮಂತ್ರಿಯಾಗುತ್ತಿದ್ದಾರೆ. ಹಿಂದಿನದನ್ನು ಕೆದಕಲು ಹೋಗುವುದಿಲ್ಲ. ಅವರನ್ನು ಅಭಿನಂದಿಸುತ್ತೇನೆ. ಒಳ್ಳೆಯ ಕೆಲಸ ಮಾಡಲಿ ಎಂದು ಹಾರೈಸುತ್ತೇನೆ ಎಂದು ಹೇಳಿದರು.

ರಾಜಕಾರಣ ಮಾರುಕಟ್ಟೆಯಾಗಿದೆ : ಇಂದಿನ ದಿನಗಳಲ್ಲಿ ರಾಜಕಾರಣ ಎನ್ನುವುದು ಮಾರುಕಟ್ಟೆಯ ಸರಕಾಗಿದೆ ಎಂದು ಹೇಳಿದ ದೇವೇಗೌಡರು, ಹಿಂದಿನ ಸರ್ಕಾರ ಜನಪರ ಕಾರ್ಯಗಳ ಬಗ್ಗೆ ಯಾವುದೇ ಚರ್ಚೆಗಳನ್ನು ಮಾಡಿಲ್ಲ. ಸದ್ಯ ಒಂದು ಪಕ್ಷಕ್ಕೆ ಬಹುಮತ ಪಡೆದಿರುವುದರಿಂದ ಜನಪರ ಚರ್ಚೆಗಳು ನಡೆಯಲಿವೆ ಎಂಬ ನಿರೀಕ್ಷೆ ಇದೆ ಎಂದರು.

ಟೋಲ್ ಗೆ ಮುತ್ತಿಗೆ : ರಾಷ್ಟ್ರೀಯ ಹೆದ್ದಾರಿ 7ರ ಟೋಲ್ ದರ ಹೆಚ್ಚಳ ವಿರೋಧಿಸಿ ಇಂದು ಜೆಡಿಎಸ್ ಯುವ ಮುಖಂಡ ನಿಖಿಲ್‍ಗೌಡ ರವರ ನೇತೃತ್ವದಲ್ಲಿ ಜೆಡಿಎಸ್ ಕಾರ್ಯಕರ್ತರು ಟೋಲ್ ಗೆ ಮುತ್ತಿಗೆ ಹಾಕಲಿದ್ದಾರೆ. ಈ ಸಂದರ್ಭದಲ್ಲಿ ಶಾಸಕರಾದ ಪಿಳ್ಳಮುನಿಸ್ವಾಮಪ್ಪ, ರಾಜಣ್ಣ ಹಾಗೂ ಯುವ ಮುಖಂಡರಾದ ಮಹೇಂದ್ರಕುಮಾರ್ ಮುಂತಾದವರು ಭಾಗವಹಿಸಲಿದ್ದಾರೆ.

English summary
Former prime minister HD Deve Gowda said, he would remain in active politics till his party came back to power in the Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X