ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಸರ್ಕಾರದ ಬಗ್ಗೆ ಜನರ ನಿರೀಕ್ಷೆಗಳೇನು?

By Ashwath
|
Google Oneindia Kannada News

ಬೆಂಗಳೂರು, ಮೇ.16: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸುತ್ತಿದ್ದಂತೆ ಮೋದಿ ಅಭಿಮಾನಿಗಳು ಭರ್ಜರಿಯಾಗಿ ವಿಜಯದ ಸಂಭ್ರಮವನ್ನು ಆಚರಿಸುತ್ತಿದ್ದಾರೆ.

ಈ ಮಧ್ಯೆ ಒನ್‌ ಇಂಡಿಯಾ ಕನ್ನಡ ಚುನಾವಣಾ ಫಲಿತಾಂಶದ ಬಗ್ಗೆ ಜನರಲ್ಲಿ ಮಾತನಾಡಿಸಿದೆ. ಮೋದಿ ಅಭಿಮಾನಿಗಳು ಮೋದಿ ಸರ್ಕಾರ ಸುಭದ್ರವಾದ ಆಡಳಿತವನ್ನು ನೀಡಲಿದ್ದು, ಇನ್ನು ಐದು ವರ್ಷದಲ್ಲಿ ದೇಶದ ಚರಿತ್ರೆಯನ್ನು ಬದಲಾಯಿಸಲಿದ್ದಾರೆ ಎಂದು ಹೇಳಿದ್ದಾರೆ. ಸುಳ್ಳು ಹೇಳುವುದರಲ್ಲಿ ಮೋದಿ ಫಸ್ಟ್‌‌ , ದೇಶದಲ್ಲಿ ಕೋಮುಗಲಭೆ ಸೃಷ್ಟಿಸಿ, ಜಾತಿ ಜಾತಿ ಮಧ್ಯೆ ಸಂಘರ್ಷಕ್ಕೆ ಕಾರಣರಾಗಲಿದ್ದಾರೆ ಎಂದು ಮೋದಿ ವಿರೋಧಿಗಳು ಹೇಳಿದ್ದಾರೆ.

ಹೀಗಾಗಿ ಜನಸಾಮಾನ್ಯರು ಮುಂದಿನ ಮೋದಿ ಸರ್ಕಾರದ ಬಗ್ಗ ಏನು ಹೇಳುತ್ತಾರೆ? ಅವರ ಸರ್ಕಾರದ ಬಗ್ಗೆ ಇರಿಸಿರುವ ನಿರೀಕ್ಷೆಗಳೇನು? ಅವರ ಅಭಿಪ್ರಾಯಗಳನ್ನು ಮುಂದಿನ ಪುಟದಲ್ಲಿ ನೀಡಲಾಗಿದೆ.

 ನಾವು ಹೇಗಿದ್ದೆವೋ ಹಾಗೇ ಇದ್ದೇವೆ

ನಾವು ಹೇಗಿದ್ದೆವೋ ಹಾಗೇ ಇದ್ದೇವೆ

ಫಲಿತಾಂಶದ ಬಗ್ಗೆ ಗೊತ್ತಿಲ್ಲ. ವೋಟ್‌ ಹಾಕಿದ್ದೇನೆ ಅಷ್ಟೇ. ಯಾವ ಸರ್ಕಾರ ಬಂದರೂ ನಮಗೆ ಏನೂ ಮಾಡಿಲ್ಲ. ನಾವು ಹೇಗಿದ್ದೇವೋ ಹಾಗೆ ಇದ್ದೇವೆ.

-ಬಾಲರಾಜ್‌, ಎಳನೀರು ವ್ಯಾಪಾರಸ್ಥರು

ಕಾಂಗ್ರೆಸ್‌ನ ದುರಾಡಳಿತ ಅಂತ್ಯ

ಕಾಂಗ್ರೆಸ್‌ನ ದುರಾಡಳಿತ ಅಂತ್ಯ

"ಕಾಂಗ್ರೆಸ್‌ನ 60 ವರ್ಷದ ದುರಾಡಳಿತ ಅಂತ್ಯವಾಗಿದೆ. ಕಾಂಗ್ರೆಸ್‌ನಂತೆ ಭ್ರಷ್ಟಾಚಾರ ನಡೆಸದೇ ದೇಶದ ಜನರ ಹಿತವನ್ನು ಕಾಯುವ ಸರ್ಕಾರ ನರೇಂದ್ರ ಮೋದಿ ನೀಡಬೇಕಿದೆ"
- ಗಣೇಶ್‌ ಹೂ ಮಾರಾಟಗಾರರು. ಮಲ್ಲೇಶ್ವರಂ

 ಮಧ್ಯಮ ವರ್ಗದವರನ್ನು ಮೇಲೆತ್ತಿ

ಮಧ್ಯಮ ವರ್ಗದವರನ್ನು ಮೇಲೆತ್ತಿ

ಇಲ್ಲಿಯವರೆಗಿನ ಸರ್ಕಾರಗಳು ಬಡವರಿಗೆ ಅನೇಕ ಸೇವೆಗಳನ್ನು ತಂದಿದೆ. ಮುಂದಿನ ಹೊಸ ಸರ್ಕಾರ ಮಧ್ಯಮ ವರ್ಗದವರ ಸಮಸ್ಯೆಗಳಿಗೆ ಸ್ಪಂದಿಸಿ ಅವರಿಗೂ ಉದ್ಯೋಗ ಅವಕಾಶಗಳನ್ನು ಕಲ್ಪಿಸಿಕೊಡಬೇಕಾಗಿದೆ.

ಸುರೇಂದ್ರ ಕೆ.ವಿ.,ಸಹಾಯಕ ಪ್ರಧ್ಯಾಪಕರು ಎಚ್‌.ಕೆ.ಬಿ.ಕೆ ಕಾಲೇಜ್‌ ಆಫ್‌ ಎಂಜಿನಿಯರಿಂಗ್‌ ನಾಗವಾರ

ಕೋಮುಗಲಭೆ ಹೆಚ್ಚಾಗಲಿದೆ

ಕೋಮುಗಲಭೆ ಹೆಚ್ಚಾಗಲಿದೆ

''ಗುಜರಾತ್‌ನಲ್ಲಿ ಹೇಗೆ ಕೋಮುಗಲಭೆ ಸೃಷ್ಟಿಸಿ ಅಲ್ಪಸಂಖ್ಯಾತರಿಗೆ ಅನ್ಯಾಯ ಮಾಡಿದ್ದರೋ, ಅದೇ ರೀತಿಯಾಗಿ ಮುಂದೆ ಅಲ್ಲಲ್ಲಿ ಕೋಮುಗಲಾಟೆ ಸೃಷ್ಟಿಸಿ ಇಡೀ ದೇಶದಲ್ಲಿ ಅಲ್ಪಸಂಖ್ಯಾತರಿಗೆ ಅನ್ಯಾಯ ಮಾಡಲಿದ್ದಾರೆ.''
ಜಾನ್ಸನ್‌, ಸಂತ, ಅಂತೋಣಿ ಕಾಲೇಜ್‌ ಬೆಂಗಳೂರು

ಕಾಂಗ್ರೆಸ್‌ನಿಂದ ಲೂಟಿ

ಕಾಂಗ್ರೆಸ್‌ನಿಂದ ಲೂಟಿ

"ಕಾಂಗ್ರೆಸ್‌ ನಮ್ಮ ದೇಶವನ್ನು ಲೂಟಿ ಮಾಡಿದೆ. ಮೋದಿ ಲೂಟಿ ಮಾಡದೇ ಗುಜರಾತ್‌ನ್ನು ಹೇಗೆ ಅಭಿವೃದ್ಧಿ ಮಾಡಿದ್ದಾರೋ ಅದೇ ರೀತಿಯಾಗಿ ಭಾರತವನ್ನು ಅಭಿವೃದ್ಧಿ ಮಾಡುತ್ತಾರೆ"

ಕೇಶವ್‌ ರೆಡ್ಡಿ, ರಿಯಲ್‌ ಎಸ್ಟೇಟ್‌ ಉದ್ಯಮಿ.

ಬೆಲೆ ಇಳಿಕೆಯಾಗಬೇಕು

ಬೆಲೆ ಇಳಿಕೆಯಾಗಬೇಕು

"ಕಾಂಗ್ರೆಸ್‌ನ ಕೊಡುಗೆ ಕೇವಲ ಬೆಲೆ ಏರಿಕೆ. ಪೆಟ್ರೋಲ್‌ ಗ್ಯಾಸ್‌ ಏರಿಸಿ ಹಣ ಕೊಳ್ಳೆ ಹೊಡೆದಿದ್ದಾರೆ. ಮೋದಿ ಸರ್ಕಾರ ಬೆಲೆ ಇಳಿಕೆ ಮಾಡಬೇಕು."
ದಿಲೀಪ್‌, ಔಷಧಿ ಅಂಗಡಿ ಮಾಲೀಕ

ಜನರಿಗೆ ಮೋಸ ಮಾಡಬೇಡಿ

ಜನರಿಗೆ ಮೋಸ ಮಾಡಬೇಡಿ

"ಯಾವ ಸರ್ಕಾರ ಬಂದರೂ ಅಷ್ಟೇ. ನಾಲ್ಕು ಜನರಿಗೆ ಉಪಕಾರ ಮಾಡಲಿ. ಸುಮ್ನೆ ಏನೇನೋ ಸುಳ್ಳು ಹೇಳಿ ಜನರಿಗೆ ಮೋಸ ಮಾಡದೇ ಉತ್ತಮ ಆಡಳಿತ ನೀಡಲಿ"
ಮಂಜುನಾಥ್‌, ಬಾಳೆಹಣ್ಣು ಮಾರಾಟಗಾರರು

ಕಪ್ಪು ಹಣ ತನ್ನಿ

ಕಪ್ಪು ಹಣ ತನ್ನಿ


"ಕಪ್ಪು ಹಣವನ್ನು ಭಾರತಕ್ಕೆ ತಂದು ಆ ಹಣದಿಂದ ದೇಶವನ್ನು ಅಭಿವೃದ್ಧಿ ಮಾಡಲಿ"
ಅಶ್ವಥ್‌ ನಾರಾಯಣ, ಮಲ್ಲೇಶ್ವರಂ

English summary
Bangalore is celebrating the outstanding victory of BJP lead NDA in 16th Lok Sabha Election 2014 getting absolute majority. Common people of Bangalore are ecstatic about the landslide victory. Oneindia-Kannada spoke to few people what they expect from to be formed Narendra Modi govt.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X