ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒನ್ ಇಂಡಿಯಾದಲ್ಲಿ ವೀರಶೈವ ವಿದ್ಯಾರ್ಥಿ ವೇತನ ಫಲಿತಾಂಶ

By Mahesh
|
Google Oneindia Kannada News

ಬೆಂಗಳೂರು, ಆ.19: ರಾಜ್ಯದ ವೀರಶೈವ ಲಿಂಗಾಯತ ಸಮಾಜದ ಬಡ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ನಾಡಿನ ಪ್ರಮುಖ ರಾಜಕಾರಣಿಗಳ ಹೆಸರಿನಲ್ಲಿ ವೀರಶೈವ ಲಿಂಗಾಯತ ಯುವ ವೇದಿಕೆ ಬಸವಜ್ಯೋತಿ ವಿದ್ಯಾರ್ಥಿ ವೇತನ ನೀಡಲು ಮುಂದಾಗಿದೆ. ಈ ಸ್ಕಾಲರ್ ಶಿಪ್ ಪಡೆಯಲಿರುವ ವಿದ್ಯಾರ್ಥಿಗಳ ಆಯ್ಕೆ ಮುಗಿದಿದ್ದು, ಫಲಿತಾಂಶ ಒನ್ ಇಂಡಿಯಾ ಕನ್ನಡ ಹಾಗೂ ವೇದಿಕೆಯ ವೆಬ್ ತಾಣದಲ್ಲಿ ಮಾತ್ರ ಪ್ರಕಟವಾಗಲಿದೆ.

ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಮೊದಲ ಹಂತದ ಫಲಿತಾಂಶ ಆಗಸ್ಟ್ 22ಕ್ಕೆ ಪ್ರಕಟವಾಗಲಿದೆ. ವೀರಶೈವ ಸಮುದಾಯದ ಬಡ ವಿದ್ಯಾರ್ಥಿಗಳಿಗೆ ತಿಂಗಳಿಗೆ 1 ಸಾವಿರ ರು ನಂತೆ ವೇತನ ನೀಡಲಿದೆ. ಎರಡನೇ ಹಂತದ ಫಲಿತಾಂಶವನ್ನು ಸೆಪ್ಟೆಂಬರ್ 2ರಂದು ಒನ್ ಇಂಡಿಯಾ ಕನ್ನಡ(kannada.oneindia.com) ಹಾಗೂ ವೀರಶೈವ ಯುವ ವೇದಿಕೆ(www.vlyvedike.org) ಗಳಲ್ಲಿ ಮೊದಲಿಗೆ ಫಲಿತಾಂಶ ಹೊರಬೀಳಲಿದೆ. ಆರ್ಜಿದಾರರು ತಪ್ಪದೇ ಮೇಲ್ಕಂಡ ದಿನಗಳಲ್ಲಿ ವೆಬ್ ತಾಣಕ್ಕೆ ಭೇಟಿ ನೀಡಬೇಕಾಗಿ ವೇದಿಕೆಯ ರಾಜ್ಯ ಅಧ್ಯಕ್ಷ ಶರಣ ಪ್ರಶಾಂತ್ ಕಲ್ಲೂರ್ ಅವರು ಕೋರಿದ್ದಾರೆ.

Veerashaiva Lingayat Yuva Vedike Scholarship result on Oneindia Kannada website

ನಾಡಿನ ಪ್ರಮುಖ ವೀರಶೈವ ಮುಖಂಡರು, ರಾಜಕಾರಣಿಗಳು ಆದ ಬಿ.ಎಸ್ ಯಡಿಯೂರಪ್ಪ, ವಿಜಯ ಸಂಕೇಶ್ವರ್, ಅಶೋಕ್ ಖೇಣಿ, ಪ್ರಭಾಕರ್ ಕೋರೆ, ಜಗದೀಶ್ ಶೆಟ್ಟರ್, ಜಿ.ಎಂ. ಸಿದ್ದೇಶ್, ಯು ಎಸ್ ಶೇಖರ್ ಇವರ ಸಾಧನೆಯನ್ನು ಸ್ಮರಿಸಿ ಇವರುಗಳ ಹೆಸರಿನಲ್ಲಿ "ಬಸವಜ್ಯೋತಿ" ವಿದ್ಯಾರ್ಥಿವೇತನ ನೀಡಲಾಗುತ್ತಿದೆ. ಪ್ರತಿ ರಾಜಕಾರಣಿಗಳ ಹೆಸರಿನಲ್ಲಿ 10 ಮಕ್ಕಳು ಈ ವಿದ್ಯಾರ್ಥಿ ವೇತನ ಪಡೆಯಲಿದ್ದಾರೆ.

ವೀರಶೈವ ಲಿಂಗಾಯತ ಯುವ ವೇದಿಕೆ ಸತತ ಒಂದೂವರೆ ವರ್ಷಗಳಿಂದ ವಿನೂತನ, ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮನೆ ಮನ ತಲುಪುವುದರ ಜೊತೆಯಲ್ಲಿ ಅರಿವು - ಸಂಘಟನೆ - ಕ್ರಾಂತಿ ಮೂಡಿಸುವಲ್ಲಿ ಮುನ್ನಡೆಯುತ್ತಿದೆ. ಈಗ ಬಡ ವಿದ್ಯಾರ್ಥಿಗಳಿಗೆ ನೆರವಾಗಲು ವಿದ್ಯಾರ್ಥಿ ವೇತನ ಯೋಜನೆ ಹಮ್ಮಿಕೊಂಡಿದೆ.

ಹೆಚ್ಚಿನ ಮಾಹಿತಿ ಸಂಪರ್ಕಿಸಿ:
ಶರಣ ಪ್ರಶಾಂತ್ ಕಲ್ಲೂರ್
ರಾಜ್ಯ ಅಧ್ಯಕ್ಷರು
ವೀರಶೈವ ಲಿಂಗಾಯತ ಯುವ ವೇದಿಕೆ (ರಿ.)
9242444444 / 080 64555554
ವೇದಿಕೆಯ ಫೇಸ್ ಬುಕ್ ಪುಟಕ್ಕೆ ಕ್ಲಿಕ್ಕಿಸಿ

English summary
Veerashaiva Lingayat Yuva Vedike will soon announce the list of selected students exclusively on Oneindia Kannada portal and vlyvedike.org. Yuva Vedike is helping below povert line student in the Veerashaiva community by giving scholarship in the name of politicians like BS Yeddyurappa,Ashok Kheny, GM Siddesh said State President Prashanth Kallur
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X