ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುನಿಯಪ್ಪಗೆ ಬೆಂಬಲ ಕೊಟ್ಟ ವರ್ತೂರು ಪ್ರಕಾಶ್

|
Google Oneindia Kannada News

ಕೋಲಾರ, ಏ. 3 : ಕೋಲಾರ ಕ್ಷೇತ್ರದ ಪಕ್ಷೇತರ ಶಾಸಕ ವರ್ತೂರು ಪ್ರಕಾಶ್ ಲೋಕಸಭೆ ಚುಣಾವಣೆಯಲ್ಲಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ಅವರನ್ನು ಬೆಂಬಲಿಸುತ್ತೇನೆ ಎಂದು ಘೋಷಿಸಿದ್ದಾರೆ. ಈ ಮೂಲಕ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸೇರುವ ಸುಳಿವು ನೀಡಿದ್ದಾರೆ.

ಗುರುವಾರ ಕೋಲಾರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ವರ್ತೂರು ಪ್ರಕಾಶ್, ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ಬೆಂಬಲಿಸುವಂತೆ ಮನವಿ ಮಾಡಿದ್ದಾರೆ. ಆದ್ದರಿಂದ ಲೋಕಸಭೆ ಚುನಾವಣೆಯಲ್ಲಿ ಕೆ.ಎಸ್.ಮುನಿಯಪ್ಪ ಅವರನ್ನು ಬೆಂಲಿಸುತ್ತೇನೆ ಎಂದು ಹೇಳಿದರು. ವರ್ತೂರು ಹೇಳಿದ್ದೇನು? [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

ಮುನಿಯಪ್ಪ ಕೈ ಹಿಡಿದ ವರ್ತೂರು

ಮುನಿಯಪ್ಪ ಕೈ ಹಿಡಿದ ವರ್ತೂರು

ಕೋಲಾರ ಕ್ಷೇತ್ರದ ಪಕ್ಷೇತರ ಶಾಸಕ ವರ್ತೂರು ಪ್ರಕಾಶ್, ಲೋಕಸಭೆ ಚುನಾವಣೆಯಲ್ಲಿ ಕೋಲಾರದ ಕಾಂಗ್ರೆಸ್ ಅಭ್ಯರ್ಥಿ ಕೆ.ಹೆಚ್.ಮುನಿಯಪ್ಪ ಅವರನ್ನು ಬೆಂಬಲಿಸುವುದಾಗಿ ಹೇಳಿದ್ದಾರೆ.

ಕಾಂಗ್ರೆಸ್ ಸೇರುವ ಸುಳಿವು ಕೊಟ್ಟರು

ಕಾಂಗ್ರೆಸ್ ಸೇರುವ ಸುಳಿವು ಕೊಟ್ಟರು

ಮುಂದಿನ ದಿನಗಳಲ್ಲಿ ಉತ್ತಮ ಪದವಿಯ ನಿರೀಕ್ಷೆಯಲ್ಲಿದ್ದೇನೆ. ಒಂದು ವೇಳೆ ಕಾಂಗ್ರೆಸ್ ಯಾವುದೇ ಜವಾಬ್ದಾರಿ ನೀಡಿದರೂ ನಿಭಾಯಿಸಲು ಸಮರ್ಥನಿದ್ದೇನೆ ಎಂದು ಹೇಳುವ ಮೂಲಕ ವರ್ತೂರು ಪ್ರಕಾಶ್ ಚುನಾವಣೆ ನಂತರ ಕಾಂಗ್ರೆಸ್ ಸೇರುವ ಸುಳಿವು ನೀಡಿದರು.

ಸಿದ್ದರಾಮಯ್ಯ ಸಲಹೆಯಂತೆ ನಿರ್ಧಾರ

ಸಿದ್ದರಾಮಯ್ಯ ಸಲಹೆಯಂತೆ ನಿರ್ಧಾರ

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮುನಿಯಪ್ಪ ಅವರಿಗೆ ಬೆಂಬಲ ನೀಡುವಂತೆ ಸೂಚಿಸಿದ್ದಾರೆ. ಆದ್ದರಿಂದ ಕಾಂಗ್ರೆಸ್ ಗೆ ಬೆಂಬಲ ನೀಡುತ್ತಿದ್ದೇನೆ ಎಂದು ಹೇಳಿದ ವರ್ತೂರು ಪ್ರಕಾಶ್, ರಾಜ್ಯದಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಯಬೇಕು ಆದ್ದರಿಂದ ಅವರು ಹೇಳಿದಂತೆ ಬೆಂಬಲ ನೀಡುತ್ತಿದ್ದೇನೆ ಎಂದರು.

ಚುನಾವಣೆ ಬಳಿಕ ಮುಂದಿನ ನಡೆ

ಚುನಾವಣೆ ಬಳಿಕ ಮುಂದಿನ ನಡೆ

ಸದ್ಯ ಕಾಂಗ್ರೆಸ್ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ಅವರಿಗೆ ಬೆಂಬಲ ನೀಡುತ್ತಿದ್ದೇನೆ. ಚುನಾವಣೆ ಬಳಿಕ ಮುಂದಿನ ನಡೆಯ ಬಗ್ಗೆ ತೀರ್ಮಾನಿಸಲಾಗುತ್ತದೆ ಎಂದು ವರ್ತೂರು ಪ್ರಕಾಶ್ ಹೇಳಿದರು.

English summary
Elections 2014 : Kolar constituency independent MLA Varthur Prakash announced his support for Congress candidate K.H. Muniyappa in lok sabha election 2014. After election Varthur Prakash may join Congress.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X