ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾರಾಹಿ ಯೋಜನೆ ಮೇ 30ರಂದು ಲೋಕಾರ್ಪಣೆ

By ಐಸಾಕ್ ರಿಚರ್ಡ್, ಮಂಗಳೂರು
|
Google Oneindia Kannada News

ಉಡುಪಿ, ಮೇ 26 : ವಾರಾಹಿ ನೀರಾವರಿ ಯೋಜನೆಯ ಪ್ರಥಮ ಹಂತದ ಉದ್ಘಾಟನೆ ಮತ್ತು ಎರಡನೇ ಹಂತದ ಕಾಮಗಾರಿಗೆ ಮೇ 30ರಂದು ಚಾಲನೆ ನೀಡಲಾಗುತ್ತದೆ ಎಂದು ನಗರಾಭಿವೃದ್ಧಿ ಸಚಿವ ವಿನಯ್ ಕುಮಾರ್ ಸೊರಕೆ ಹೇಳಿದ್ದಾರೆ. ಕುಂದಾಪುರದ 33 ಮತ್ತು ಉಡುಪಿ ತಾಲ್ಲೂಕಿನ 37 ಗ್ರಾಮಗಳಿಗೆ ನೀರು ಒದಗಿಸುವ ಯೋಜನೆಯನ್ನು 75 ಕೋಟಿ ವೆಚ್ಚದಲ್ಲಿ ಪೂರ್ಣಗೊಳಿಸಲಾಗಿದೆ.

ಮಣಿಪಾಲದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಸಚಿವ ವಿನಯ್ ಕುಮಾರ ಸೊರಕೆ, ಕುಂದಾಪುರದ 33 ಮತ್ತು ಉಡುಪಿ ತಾಲ್ಲೂಕಿನ 37 ಗ್ರಾಮಗಳ ಒಟ್ಟು 15,702 ಹೆಕ್ಟೇರ್‌ ಜಮೀನಿಗೆ ನೀರು ಒದಗಿಸುವ ವಾರಾಹಿ ಯೋಜನೆಯನ್ನು 75 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. 42.73 ಕಿ.ಮೀ ಕಾಲುವೆ ಕಾಮಗಾರಿ ಪೂರ್ಣ­ಗೊಂಡಿದ್ದು ಮೇ 30ರಂದು ಇದನ್ನು ಉದ್ಘಾಟಿಸಲಾಗುತ್ತದೆ ಎಂದರು.

Vinay Kumar Sorake

ಜಲ ಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್‌ ಹಾಗೂ ಪರಿಸರ ಮತ್ತು ಅರಣ್ಯ ಸಚಿವ ಬಿ.ರಮಾನಾಥ ರೈ ಅವರು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದರು. ಮೇ 30ರಂದು ಎರಡನೇ ಹಂತದ ಯೋಜನೆಯ ಕಾಮಗಾರಿಯನ್ನು ಆರಂಭಿಸಲಾಗುವುದು ಎಂದು ಹೇಳಿದರು.

ಎರಡನೇ ಹಂತದ ಯೋಜನೆಯಡಿ ಸಾಲಿ­ಗ್ರಾಮ ಪಟ್ಟಣ ಪಂಚಾಯಿತಿ, ಬ್ರಹ್ಮಾವರ ಗ್ರಾಮಾಂತರ ಪ್ರದೇಶದಲ್ಲಿ ಕುಡಿ­ಯುವ ನೀರಿನ ಯೋಜನೆ ಮತ್ತು ಉಡುಪಿ ನಗರಸಭೆಗೆ ನೀರು ಪೂರೈಕೆ ಮಾಡಲು ಪ್ರಸ್ತಾವನೆ ಸಿದ್ದಪಡಿಸಲಾಗಿದೆ. ಉದ್ಯಾವರ, ಕೊರಂಗ್ರಪಾಡಿ, ಅಲೆವೂರು, ಕಡೆಕಾರು, ಅಂಬಲಪಾಡಿ ಗ್ರಾಮ­ಗಳನ್ನು ಉಡುಪಿ ನಗರಸಭೆಗೆ ಸೇರ್ಪಡೆ ಮಾಡಲು ಪ್ರಸ್ತಾವನೆಯಲ್ಲಿ ಶಿಫಾರಸು ಮಾಡಲಾಗಿದೆ ಎಂದು ಸಚಿವರು ಹೇಳಿದರು.

ಕರ್ನಾಟಕ ಸರ್ಕಾರ ಹೆಜಮಾಡಿ, ಕೊಡೇರಿ, ಮಲ್ಪೆ ಬಂದರುಗಳ ಅಭಿವೃದ್ಧಿಗೆ 43.55 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ಹೆಜಮಾಡಿ ಬಂದರು ನಿರ್ಮಾಣಕ್ಕೆ 123 ಕೋಟಿ ಕ್ರಿಯಾಯೋಜನೆ ಸಿದ್ದಪಡಿಸಿ ತಾತ್ವಿಕ ಒಪ್ಪಿಗೆ ಪಡೆಯಲಾಗಿದೆ. ಮೀನುಗಾರಿಕಾ ದೋಣಿಗಳ ಡೀಸೆಲ್‌ ಮೇಲಿನ ಮಾರಾಟಕರ ವಿನಾಯಿತಿಗಾಗಿ 47.32 ಕೋಟಿ, ಹೂಳೆತ್ತುವ ಕಾಮಗಾರಿಗೆ 4.80 ಕೋಟಿ ವಿನಿಯೋಗಿಸಲಾಗಿದೆ ಎಂದರು.

ವಿವಿ ಪಿಜಿ ಸೆಂಟರ್ : ಬೆಳಪು ಗ್ರಾಮದಲ್ಲಿ 5 ಕೋಟಿ ರೂಪಾಯಿ ವೆಚ್ಚದಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಪಿಜಿ ಸೆಂಟರ್‌ ಆರಂಭಿಸಲು ಸಿದ್ಧತೆ ನಡೆಯುತ್ತಿದೆ. ಉಡುಪಿಯ ತೆಂಕನಿಡಿಯೂರಿನಲ್ಲಿ ಮಂಗಳೂರು ವಿವಿಯ ಉಪಕೇಂದ್ರ ಮತ್ತು ಬೆಳಪು ಗ್ರಾಮಕ್ಕೆ ಪ್ರಾದೇಶಿಕ ವಿಜ್ಞಾನ ಸಂಶೋ­ಧನಾ ಕೇಂದ್ರ ಮಂಜೂರಾಗಿದೆ ಎಂದು ಸಚಿವರು ಹೇಳಿದರು.

English summary
Minister for Urban Development Vinay Kumar Sorake said, the second phase of the Varahi irrigation project in the Udupi district will begin shortly. First phase of the project, in the final stage, it will provide 1,100 cusecs of water to 15,702 hectares of land.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X