ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡ ದಿನಪತ್ರಿಕೆಗಳಲ್ಲಿ ಕಂಡ 'ಅನಂತ' ಶಕ್ತಿ

|
Google Oneindia Kannada News

ಬೆಂಗಳೂರು, ಆ. 23 :ಅನಂತಮೂರ್ತಿ ಯುಗ ಅಂತ್ಯ ಎಂಬ ಸುದ್ದಿ ಹೊರಬೀಳುತ್ತಿದ್ದಂತೆ ಈ ಸುದ್ದಿಗೆ ಏನಪ್ಪ ಶೀರ್ಷಿಕೆ ಕೊಡುವುದು ಅಂತ ಪತ್ರಿಕೆಗಳಲ್ಲಿನ ಹಿರಿಕಿರಿ ಪತ್ರಕರ್ತರಲ್ಲಿ ಖಂಡಿತ ಚರ್ಚೆ ಆರಂಭವಾಗಿರುತ್ತದೆ. ಅನಂತಮೂರ್ತಿಯಂಥ ದಿಗ್ಗಜರು ಮಾತ್ರವಲ್ಲ ಯಾವುದೇ ಗಣ್ಯವ್ಯಕ್ತಿ ನಿಧನರಾದಾಗ ಇಂಥ ಚರ್ಚೆಗಳು ನಡೆಯುವುದು ಪೇಪರ್ ಆಫೀಸಿನಲ್ಲಿ ಸಹಜ.

ಕೆಲಬಾರಿ ಥಟ್ ಅಂತ ಬ್ರೀಲಿಯಂಟ್ ಆದ ಶೀರ್ಷಿಕೆ ತಲೆಗೆ ಹೊಳೆದಿರುತ್ತದೆ. ಅನೇಕಬಾರಿ ಎಷ್ಟೇ ತಲೆ ಖರ್ಚು ಮಾಡಿದರೂ ಸೂಕ್ತವಾದ ಶೀರ್ಷಿಕೆ ಹೊಳೆದಿರುವುದಿಲ್ಲ. "ಈ ಶೀರ್ಷಿಕೆ ಓಕೆನಾ" ಅಂತ ಒಬ್ಬ ಹೇಳಿದರೆ, "ನೋಡಿ ಬೇಕಾದ್ರೆ ಇದೇ ಶೀರ್ಷಿಕೆನ ಆ ಪೇಪರ್ ಕೊಟ್ಟಿರುತ್ತದೆ, ಬರೆದುಕೊಡ್ತೀನಿ" ಅಂತ ಮತ್ತೊಬ್ಬರು ಖಡಾಖಂಡಿತವಾಗಿ ಹೇಳಿರುತ್ತಾರೆ.

ಅನಂತಮೂರ್ತಿಯ ಅಂತ್ಯದ ಕುರಿತು ಯಾವ್ಯಾವ ಪತ್ರಿಕೆಗಳು ಏನೇನು ಶೀರ್ಷಿಕೆ ಕೊಟ್ಟಿವೆ ಎಂದು ನೋಡಿದಾಗ, ಎಲ್ಲವೂ ಭಿನ್ನವಿಭಿನ್ನವಾಗಿವೆ. ಕೆಲವೊಂದು ವಾವ್ ಅನಿಸಿದರೆ, ಕೆಲವೊಂದು ಇನ್ನೂ ಚೆನ್ನಾಗಿ ಕೊಡಬಹುದಿತ್ತು ಎಂದೆನಿಸುತ್ತವೆ. ಕನ್ನಡದಲ್ಲಿ ಪ್ರಕಟವಾಗುವ ಪ್ರಮುಖ ದಿನಪತ್ರಿಕೆಗಳು ಅನಂತಮೂರ್ತಿ ನಿಧನದ ಸುದ್ದಿಗೆ ಎಂಥ ಶೀರ್ಷಿಕೆ ಕೊಟ್ಟಿವೆ ಎಂಬುದನ್ನು ಮುಂದೆ ನೋಡಿರಿ...

ಈ ಶೀರ್ಷಿಕೆಗಳಲ್ಲಿ ಯಾವುದು ಚೆನ್ನಾಗಿದೆ ಎಂಬುದನ್ನು ನೀವೇ ತೀರ್ಮಾನಿಸಿ...

ವಿಜಯವಾಣಿ

ವಿಜಯವಾಣಿ

'ಅನಂತದೆಡೆಗೆ ಅನಂತಮೂರ್ತಿ' ಎಂದು ಗೌರವ ಸೂಚಿಸಿದ ವಿಜಯವಾಣಿ.

ಪ್ರಜಾವಾಣಿ

ಪ್ರಜಾವಾಣಿ

'ಪರಿಸರದಲ್ಲಿ ಲೀನವಾದ ಪ್ರಜ್ಞೆ' ಎಂಬ ಶೀರ್ಷಿಕೆ ಪ್ರಜಾವಾಣಿಯದ್ದು.

ಕನ್ನಡಪ್ರಭ

ಕನ್ನಡಪ್ರಭ

ಅನಂತಮೂರ್ತಿಯವರ 'ಮೌನಿ' ಸಣ್ಣ ಕಥೆಗಳ ಸಂಕಲನವನ್ನೇ ಶೀರ್ಷಿಕೆ ಮಾಡಿದ ಕನ್ನಡಪ್ರಭ.

ಉದಯವಾಣಿ

ಉದಯವಾಣಿ

ನಿಧನದ ಸುದ್ದಿಗೆ 'ಚಿರಮೌನಿ' ಎಂಬ ಶೀರ್ಷಿಕೆ ನೀಡಿದ ಉದಯವಾಣಿ.

ವಿಜಯ ಕರ್ನಾಟಕ

ವಿಜಯ ಕರ್ನಾಟಕ

ಅನಂತ ಮೂರ್ತಿ ನಿಧನದ ಸುದ್ದಿ ನೀಡಿದ ವಿಜಯ ಕರ್ನಾಟಕ.

ಸಂಯುಕ್ತ ಕರ್ನಾಟಕ

ಸಂಯುಕ್ತ ಕರ್ನಾಟಕ

ಸಾಹಿತಿಯ ಸಾಲನ್ನೇ ಹೆಡ್‌ಲೈನ್‌ ಆಗಿಸಿದ ಸಂಯುಕ್ತ ಕರ್ನಾಟಕ.

ಹೊಸದಿಗಂತ

ಹೊಸದಿಗಂತ

'ಭವ ದಾಟಿದ ಮೌನಿ' ಎಂದ ಹೊಸದಿಗಂತ.

ವಾರ್ತಾಭಾರತಿ

ವಾರ್ತಾಭಾರತಿ

ಅನಂತಮೂರ್ತಿ ಅವರು ವಿಧಿವಶರಾದ ಸುದ್ದಿಯನ್ನು ವಾರ್ತಾಭಾರತಿ ಹೀಗೆ ಪ್ರಕಟಿಸಿತ್ತು.

English summary
UR Ananthamurthy (1932 - 2014) : Various Kannada newspapers have given variety of headlines to the death news of Jnanpith awardee, Kannada writer Dr. Udupi Rajagopalacharya Ananthamurthy, who breathed last on 22nd August, 2014 in Bangalore due to Kidney failure.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X