ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡದ 'ಆಚಾರ್ಯ' ಅನಂತಮೂರ್ತಿ ವ್ಯಕ್ತಿಚಿತ್ರ

By Mahesh
|
Google Oneindia Kannada News

ಕನ್ನಡ ನಾಡಿನ ಹಿರಿಯ ಸಾಹಿತಿ, ಜ್ಞಾನಪೀಠ ಪ್ರಶಸ್ತಿ ವಿಜೇತ ಡಾ.ಯು.ಆರ್ ಅನಂತಮೂರ್ತಿ ಶುಕ್ರವಾರ (ಆ.22) ಬೆಂಗಳೂರಿನಲ್ಲಿ ತಮ್ಮ 82ನೇ ವಯಸ್ಸಿನಲ್ಲಿ ವಿಧಿವಶರಾಗಿದ್ದಾರೆ. ಇಂಗ್ಲೀಷ್ ಟೀಚರ್, ವಿಶ್ವವಿದ್ಯಾಲಯದ ಕುಲಪತಿ, ರಾಷ್ಟ್ರೀಯ ಪುಸ್ತಕ ಟ್ರಸ್ಟ್ ಮುಖ್ಯಸ್ಥ, ಎಫ್ ಟಿಐಐ ಚೇರ್ಮನ್, ರಾಜ್ಯಸಭೆಗೆ ಸ್ಪರ್ಧಿಯಾಗಿ ಸದಾ ಉತ್ಸಾಹದ ಚಿಲುಮೆಯಾಗಿದ್ದ 'ಸುರಗಿ'ಯ ಅನಂತ ಪರಿಮಳದ ಹಾದಿಯನ್ನು ನೆನಯುತ್ತಾ...

ಮಲೆನಾಡಿನ ಮೇಳಿಗೆಯಲ್ಲಿ 1932ರ ಡಿಸೆಂಬರ್ 21ರಂದು ಅನಂತಮೂರ್ತಿ ಅವರು ಜನಿಸಿದರು. ತಂದೆ ಉಡುಪಿ ರಾಜಗೋಪಾಲಾಚಾರ್ಯ. ತಾಯಿ ಸತ್ಯಭಾಮ. [ಯು.ಆರ್ 'ಅನಂತ'ಮೂರ್ತಿ ಅಸ್ತಂಗತ]

ದೂರ್ವಾಸಪುರದ ಸಂಸ್ಕೃತ ಪಾಠಶಾಲೆಯಲ್ಲಿ ವಿದ್ಯಾಭ್ಯಾಸ ಆರಂಭ. ಪ್ರಾಥಮಿಕ ವಿದ್ಯಾಭ್ಯಾಸವನ್ನು ಮೇಳಿಗೆ, ಕೋಣಂದೂರು, ತೀರ್ಥಹಳ್ಳಿ ಶಾಲೆಗಳಲ್ಲಿ ಓದಿದ್ದಕ್ಕಿಂತ ನಿಸರ್ಗದ ಓಡನಾಟದಲ್ಲಿ ಕಲಿತ್ತಿದ್ದೇ ಹೆಚ್ಚು. ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಇಂಟರ್ ಮೀಡಿಯಟ್ ಸೇರಿದ ಅವರು, ಇದೇ ಸಂದರ್ಭದಲ್ಲಿ ಕಾಗೋಡು ಹೋರಾಟದಲ್ಲಿ ಪಾಲ್ಗೊಂಡಿದ್ದರು. [ನಿಧನಕ್ಕೆ ಸಂತಾಪ ಸೂಚಿಸಿದ ಮೋದಿ]

ಲೋಹಿಯಾ, ಶಾಂತವೇರಿ ಗೋಪಾಲಗೌಡರ ಒಡನಾಟ, ಚಳವಳಿಯ ಕಾವು ಅವರನ್ನು ನಾಡಿನ ಶ್ರೇಷ್ಠ ಚಿಂತಕ, ಹೋರಾಟಗಾರ, ಖಂಡಿತವಾದಿಯನ್ನಾಗಿಸಿಬಿಟ್ಟಿತು. ತುರ್ತು ಪರಿಸ್ಥಿತಿಯಲ್ಲೂ ಅನಂತಮೂರ್ತಿ ಸಕ್ರಿಯವಾಗಿ ಹೋರಾಟ ಮುಂದುವರೆಸಿದರು. ಅನಾರೋಗ್ಯದ ನಡುವೆಯೂ ಸ್ನೇಹಪರ ಜೀವಿಯಾಗಿ ದೇಶದ ಹಿರಿಯ ಚಿಂತಕರಾಗಿ ಜೀವನೋತ್ಸಾಹದಿಂದ ಸದಾಕಾಲ ಚಲನಶೀಲರಾಗಿದ್ದ ಇವರ ಕಿರು ಪರಿಚಯ ಇಲ್ಲಿದೆ.

ವೃತ್ತಿ ಜೀವನ

ವೃತ್ತಿ ಜೀವನ

* 1970: ಮೈಸೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲೀಷ್ ಉಪನ್ಯಾಸಕರಾಗಿ ಸೇರ್ಪಡೆ
* 1987: ಕೇರಳದ ಕೊಟ್ಟಾಯಂ ಮಹಾತ್ಮಗಾಂಧಿ ವಿಶ್ವವಿದ್ಯಾಲಯದ ಉಪಕುಲಪತಿ
* 1992-93: ಅವಧಿಯಲ್ಲಿ ನ್ಯಾಷನಲ್ ಬುಕ್ ಟ್ರಸ್ಟ್ ಆಫ್ ಇಂಡಿಯಾದ ಅಧ್ಯಕ್ಷ
* 1993: ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ( ವಿ.ಕೃ ಗೋಕಾಕರ ನಂತರ ಈ ಸಂಸ್ಥೆಯ ಆಯ್ಕೆಯಾದ ಎರಡನೇ ಕನ್ನಡಿಗ)

ದೇಶ ವಿದೇಶಗಳ ಹಲವು ವಿಶ್ವವಿದ್ಯಾಲಯಗಳಲ್ಲಿ ಸಂದರ್ಶಕ ಪ್ರಾಧ್ಯಾಪಕ. ಜವಾಹರ್ ಲಾಲ್ ನೆಹರು ವಿ.ವಿ. ಅಮೆರಿಕದ ಐಯೊವಾ ವಿವಿ,ಜರ್ಮನಿಯ ತೂಬಿಂಗೆನ್ ವಿವಿ.,ಕೊಲ್ಲಾಪುರದ ಶಿವಾಜಿ ವಿವಿಗಳಲ್ಲಿ ಪ್ರಧ್ಯಾಪಕ.
ಆಕಾಶವಾಣಿ ಸಂಗ್ರಹಿತ ಚಿತ್ರದಲ್ಲಿ

ಆಕಾಶವಾಣಿ ಸಂಗ್ರಹಿತ ಚಿತ್ರದಲ್ಲಿ

ಮೈಸೂರು ಆಕಾಶವಾಣಿಗಾಗಿ ಗೋಪಾಲಕೃಷ್ಣ ಅಡಿಗ, ಶಿವರಾಮ ಕಾರಂತ, ಆರ್.ಕೆ.ನಾರಾಯಣ್.ಆರ್.ಕೆ. ಲಕ್ಷ್ಮಣ್, ಜನರಲ್ ಕಾರಿಯಪ್ಪ ಅವರನ್ನು ಸಂದರ್ಶಿಸಿದ್ದರು.

ಚಿತ್ರದಲ್ಲಿ ಮಾಜಿ ಮುಖ್ಯಮಂತ್ರಿ ದಿವಂಗತ ಜೆ.ಎಚ್ ಪಟೇಲ್ ಅವರ ಜೊತೆ. ಕರ್ನಾಟಕ ವಾರ್ತೆ ಚಿತ್ರ
ಸಾಹಿತ್ಯ ಕೃಷಿ, ಇವರ ಬಹುಚರ್ಚಿತ ಕಥೆಗಳು

ಸಾಹಿತ್ಯ ಕೃಷಿ, ಇವರ ಬಹುಚರ್ಚಿತ ಕಥೆಗಳು

* 1955: ಎಂದೆಂದೂ ಮುಗಿಯದ ಕಥೆಯಿಂದ ಸಾಹಿತ್ಯ ಕೃಷಿ ಆರಂಭ
ಜಿ.ಎಚ್.ಪಟೇಲರ ಸಮೀಪವರ್ತಿ ಆಗಿದ್ದ ಅನಂತಮೂರ್ತಿ ಶಾಂತವೇರಿ ಗೋಪಾಲಗೌಡ, ಲೋಹಿಯಾ ಅವರ ಪ್ರಭಾವಕ್ಕೆ ಒಳಗಾಗಿದ್ದರು.
* 1965: ಅನಂತಮೂರ್ತಿ ಅವರ ಸಂಸ್ಕಾರ ಕಾದಂಬರಿ ಪ್ರಕಟ. ಚಲನಚಿತ್ರವಾದಾಗ ವಿವಾದವಾಗಿತ್ತು. ಕಾದಂಬಂರಿ ಹಲವಾರು ದೇಶೀಯ ಮತ್ತು ವಿದೇಶಿ ಭಾಷೆಗಳಿಗೆ ಅನುವಾದಗೊಂಡಿತ್ತು.
* 1981: ರಾಜಕೀಯ ಸಾಂಸ್ಕೃತಿಕ ಸಾಹಿತ್ಯಕ ವಿಷಯಗಳಿಗೆ ರುಜುವಾತು ತ್ರೈಮಾಸಿಕ ಪತ್ರಿಕೆ ಆರಂಭ.
* ಸಂಸ್ಕಾರ, ಅವಸ್ಥೆ ಕಾದಂಬರಿ ಮತ್ತು ಬರ, ಘಟಶ್ರಾದ್ಧ ಕತೆಗಳು ಆಧಾರಿಸಿ ಚಲನಚಿತ್ರವಾಗಿದೆ.
* ಸಂಸ್ಕಾರ ಕಾದಂಬರಿ ಭಾರತದ ಹಲವು ಭಾಷೆಗಳಲ್ಲದೆ, ಇಂಗ್ಲಿಷ್, ರಷ್ಯನ್, ಫ್ರೆಂಚ್, ಜರ್ಮನ್, ಹಂಗೇರಿಯನ್ ಮತ್ತಿತರ ಭಾಷೆಗಳಿಗೆ ಅನುವಾದವಾಗಿದೆ. ಭಾರತೀಪುರ, ಅವಸ್ಥೆ ಮತ್ತು ಭವ ಇವರ ಇತರ ಕಾದಂಬರಿಗಳು.
* ಘಟಶ್ರಾದ್ಧ ಕತೆಯನ್ನು ಆಧಾರಿಸಿ ದೀಕ್ಷಾ ಎಂಬ ಹಿಂದಿ ಚಲನಚಿತ್ರ ತಯಾರಾಗಿದೆ.
* ಮೌನಿ, ಪ್ರಶ್ನೆ, ಆಕಾಶ ಮತ್ತು ಬೆಕ್ಕು ಇವರ ಕಥಾ ಸಂಕಲನಗಳು. ಈ ಎಲ್ಲ ಕತೆಗಳನ್ನೂ ಒಳಗೊಂಡ ಮೂರು ದಶಕದ ಕಥೆಗಳು 1989 ರಲ್ಲಿ ಪ್ರಕಟವಾಗಿದೆ.
* ಆವಾಹನೆ ಎಂಬ ಒಂದು ನಾಟಕ ಹಾಗೂ 15 ಪದ್ಯಗಳು, ಮಿಥುನ ಮತ್ತು ಅಜ್ಜನ ಹೆಗಲ ಸುಕ್ಕುಗಳು ಎಂಬ ಮೂರು ಕವನ ಸಂಕಲನಗಳು ಪ್ರಕಟವಾಗಿವೆ.
* ಪ್ರಜ್ಞೆ ಮತ್ತು ಪರಿಸರ, ಪೂರ್ವಾಪರ, ಸಮಕ್ಷಮ- ಪ್ರಬಂಧ ಸಂಕಲನಗಳು.
* 1981 ರಲ್ಲಿ ರಾಜಕೀಯ, ಸಾಂಸ್ಕೃತಿಕ ಮತ್ತು ಸಾಹಿತ್ಯಕ ವಿಷಯಗಳಿಗೆಂದು ‘ರುಜುವಾತು' ತ್ರೈಮಾಸಿಕ ಪತ್ರಿಕೆಯನ್ನು ಆರಂಭಿಸಿದರು.
* ಸೂರ್ಯ ಕುದುರೆ, ನವಿಲುಗಳು, ಬರ, ಘಟಶ್ರಾದ್ಧ, ತಾಯಿ, ಹುಲಿಯ ಹೆಂಗರಳು ಇವರ ಬಹುಚರ್ಚಿತ ಕಥೆಗಳು.

ಪ್ರಶಸ್ತಿಗಳು, ಗೌರವ ಆದರಗಳು

ಪ್ರಶಸ್ತಿಗಳು, ಗೌರವ ಆದರಗಳು

* ಸಂಸ್ಕಾರ, ಘಟಶ್ರಾದ್ಧ ಆಧಾರಿತ ಚಿತ್ರಗಳು ಭಾರತ ಸರ್ಕಾರದಿಂದ ಸ್ವರ್ಣ ಕಮಲ ಪ್ರಶಸ್ತಿಯನ್ನುಗಳಿಸಿದೆ.
* 1983: ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
* 1984: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ
* 1992: ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
* 1994: ಜ್ಞಾನಪೀಠ ಪ್ರಶಸ್ತಿ(ಆರನೇ ಜ್ಞಾನಪೀಠ ಪ್ರಶಸ್ತಿ ಸಮಗ್ರ ಸಾಹಿತ್ಯ)
* 1995: ಮಾಸ್ತಿ
* 1998: ಪದ್ಮಭೂಷಣ
* 2008: ನಾಡೋಜ ಹಂಪಿ ವಿಶ್ವವಿದ್ಯಾಲಯ
2013ರಲ್ಲಿ ಅನಂತಮೂರ್ತಿವರಿಗೆ ಸಿಗಲಿದೆ ಎಂದು ಹೇಳಲಾಗುತ್ತಿದ್ದ ಮ್ಯಾನ್ ಬೂಕರ್ ಇಂಟರ್‍ನ್ಯಾಷನಲ್ ಪ್ರಶಸ್ತಿ ಕೊನೆ ಕ್ಷಣದಲ್ಲಿ ಕೈ ತಪ್ಪಿ ಹೋಗಿತ್ತು.

 ಖಂಡಿತವಾದಿ ಲೋಕವಿರೋಧಿ

ಖಂಡಿತವಾದಿ ಲೋಕವಿರೋಧಿ

* ಬಲಪಂಥೀಯ ವ್ಯಕ್ತಿಗಳಿಗೆ ಅನಂತಮೂರ್ತಿ ಕೃತಿಗಳಿಗೆ, ಹೇಳಿಕೆಗಳಿಗೆ ವಿರೋಧ ವ್ಯಕ್ತವಾಗುತ್ತಿತ್ತು.
* ಎಸ್ ಎಲ್ ಭೈರಪ್ಪ ಮತ್ತು ಅನಂತಮೂರ್ತಿ ನಡುವೆ ಸಾಹಿತ್ಯಕ ಗಲಾಟೆ ನಿರಂತರವಾಗಿ ಬೆಳೆದಿದ್ದು ದುರಂತ.
* ಮೋದಿ ಅವರ ಅಭಿವೃದ್ಧಿಯನ್ನು ಶ್ಲಾಘಿಸಿದರೂ, ಸಮಾಜವಾದಿ ಚಿಂತನೆಗೆ ಬದ್ಧರಾಗದ ಕಾರಣ ಮೋದಿ ಸೇರಿದಂತೆ ಅನೇಕ ರಾಜಕೀಯ ಮುಖಂಡರನ್ನು ತೀವ್ರವಾಗಿ ಟೀಕಿಸಿದರು.
* ಭಾರತದ ಬಹುಭಾಷೆಯ ನಾಡು. ಎಲ್ಲಾ ಭಾಷೆಯಂತೆ ಹಿಂದಿಯೂ ಒಂದು. ಹಿಂದಿ ಚೆನ್ನಾಗಿ ಮಾತನಾಡುತ್ತಾನೆ ಎನ್ನುವ ಕಾರಣಕ್ಕೆ ಮೋದಿ ದೇಶದ ಪ್ರಧಾನಿಯನ್ನಾಗಿ ಮಾಡುವುದು ಸರಿಯಲ್ಲ. ಈ ಸಂಪ್ರದಾಯ ಮುಂದುವರಿದರೆ ಮುಂದೆ ಕನ್ನಡಿಗ, ತಮಿಳಿಗ, ತೆಲುಗನಿಗೆ ಪ್ರಧಾನಿಯಾಗಲು ಸಾಧ್ಯವಿಲ್ಲ ಎಂದಿದ್ದರು.
* ಮೋದಿ ಟೀಕಿಸಿದ್ದಕ್ಕೆ ಅವರ ಬೆಂಬಲಿಗರಿಂದ ಬಂದ ಟೀಕಾಸ್ತ್ರಗಳನ್ನು ಮುಕ್ತವಾಗಿ ಸ್ವೀಕರಿಸಿದರು.

ಅನಂತಮೂರ್ತಿ ವ್ಯಕ್ತಿಚಿತ್ರ ವಿಡಿಯೋ

ಕರ್ನಾಟಕ ವಾರ್ತಾ ಇಲಾಖೆ ಪ್ರಸ್ತುತಪಡಿಸುವ ಯು.ಆರ್ ಅನಂತಮೂರ್ತಿ ವ್ಯಕ್ತಿಚಿತ್ರ ವಿಡಿಯೋ

English summary
Jnanpith award-winning Kannada writer, English teacher, Kottayam University vice-chancellor, National Book Trust chief, chairman of the Film & Television Institute of India, one of 50 most important people in India according to the Illustrated Weekly of India, Rajya Sabha candidate. He has been them all. Here is Udupi Rajagopalacharya Ananthamurthy brief Porfile
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X