ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೃತೀಯರಂಗದ ತ್ರಿಶಂಕು ಸ್ವರ್ಗದಲ್ಲಿ ಧನಂಜಯ್

By Mahesh
|
Google Oneindia Kannada News

ಚಿಕ್ಕಮಗಳೂರು, ಏ.3: ಜನತೆ ಯುಪಿಎ ಸರ್ಕಾರದ ಬೆಲೆ ಏರಿಕೆ, ಬಿಜೆಪಿ ಸರ್ಕಾರದ ಹುಚ್ಚು ಭರವಸೆಗಳನ್ನು ನಂಬದೆ ತೃತೀಯರಂಗಕ್ಕೆ ಬಹುಮತ ನೀಡುತ್ತಾರೆ. ಕೇಂದ್ರದಲ್ಲಿ ಮುಂದಿನ ಸರ್ಕಾರ ರಚನೆಯಲ್ಲಿ ತೃತೀಯರಂಗ ಮಹತ್ವದ ಪಾತ್ರ ವಹಿಸಲಿದೆ ಎಂದು ಉಡುಪಿ- ಚಿಕ್ಕಮಗಳೂರು ಜೆಡಿಎಸ್ ಅಭ್ಯರ್ಥಿ ಧನಂಜಯ್ ಕುಮಾರ್ ಭವಿಷ್ಯ ನುಡಿದಿದ್ದಾರೆ.

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಸ್ಕಲ್ ಗ್ರಾಮದಲ್ಲಿ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಧನಂಜಯ್, ನರೇಂದ್ರ ಮೋದಿ ಅಧಿಕಾರಕ್ಕೆ ಬರುವುದಿಲ್ಲ. ಕಾಂಗ್ರೆಸ್ ಪಕ್ಷದ ಭ್ರಷ್ಟ ಆಡಳಿತದಿಂದ ಜನರು ಕಂಗೆಟ್ಟು ಹೋಗಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ಉಡುಪಿ ಕ್ಷೇತ್ರದಲ್ಲಿ ಸಂಸದನಾಗಿ ಕಾರ್ಯನಿರ್ವಹಿಸಿದ ಅನುಭವ ನನಗಿದೆ. ಚಿಕ್ಕಮಗಳೂರು ಜಿಲ್ಲೆ ಕೂಡಾ ನನಗೆ ಹೊಸದಲ್ಲ. ಎಲ್ಲಿಂದಲೋ ಬಂದ ಶೋಭಾ ಅವರು ಯಾವ ಸಾಧನೆಯನ್ನು ಮಾಡದೆ ಸಂಸತ್ ಪ್ರವೇಶ ಬಯಸಿದ್ದಾರೆ. ಬಿಜೆಪಿ ತನ್ನ ಹಿರಿಯ ನಾಯಕರಾದ ಎಲ್ ಕೆ ಅಡ್ವಾಣಿ, ವಾಜಪೇಯಿ ಅವರ ಮಾತು ಕೇಳದೆ ತಪ್ಪು ಮಾಡಿದೆ ಎಂದರು. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

Udupi Chikamagalur JDS Candidate Dhananjay on Third Front

ಮಾಜಿ ಪ್ರಧಾನಿ ದೇವೇಗೌಡ ಅವರ ಅವಧಿಯಲ್ಲಿ ರಾಜ್ಯಕ್ಕೆ ಹತ್ತು ಹಲವು ಯೋಜನೆಗಳನ್ನು ತಂದರು. ಕಡೂರು-ಚಿಕ್ಕಮಗಳೂರು-ಸಕಲೇಶಪುರ ರೈಲು ಮಾರ್ಗ, ಹಾಸನ-ನೆಲಮಂಗಲ ಬೆಂಗಳೂರು ರೈಲು ಮಾರ್ಗಕ್ಕೆ ಸಮ್ಮತಿ ನೀಡಿದವರು, ರೈತರ ರಸಗೊಬ್ಬರಕ್ಕೆ ಸಹಾಯ ಧನ ಸೇರಿದಂತೆ ಕೃಷಿಗೆ ಪೂರಕವಾದ ಯೋಜನೆಗಳನ್ನು ಅನುಷ್ಠಾನಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.

ರಾಜ್ಯದಲ್ಲಿ ಎಚ್ ಡಿ ಕುಮಾರಸ್ವಾಮಿ ಅವರು ತಮ್ಮ ಅಧಿಕಾರ ಅವಧಿಯಲ್ಲಿ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವುದರೊಂದಿಗೆ ಕಾಫಿ ಬೆಳೆಗಾರರ ಸಾಲದ ಬಡ್ಡಿ ಮನ್ನಾ ಸೇರಿದಂತೆ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯಶಸ್ವಿಯಾಗಿದೆ.

ಮಲೆನಾಡು ಭಾಗದಲ್ಲಿ ಒತ್ತುವರಿ ಸಮಸ್ಯೆ ಸೇರಿದಂತೆ ಅನೇಕ ಸಮಸ್ಯೆಗಳು ಕಾಡುತ್ತಿದ್ದು, ಇನಾಂ ಭೂಮಿ ಸಮಸ್ಯೆಗೆ ಸ್ವತಃ ಕುಮಾರಸ್ವಾಮಿ ಅವರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಅಡಿಕೆ ಹಳದಿ ರೋಗ, ಕಸ್ತೂರಿ ರಂಗನ್ ವರದಿ ದುಷ್ಪರಿಣಾಮಗಳ ವಿರುದ್ಧ ಜನಪರವಾಗಿ ಕೆಲಸ ಮಾಡುವುದಾಗಿ ಧನಂಜಯ್ ಭರವಸೆ ನೀಡಿದರು. ಧನಂಜಯ್ ಕುಮಾರ್ ಅವರ ಜತೆ ಕ್ಷೇತ್ರದ ಶಾಸಕ ಬಿ.ಬಿ ನಿಂಗಯ್ಯ, ಕ್ಷೇತ್ರಾಧ್ಯಕ್ಷ ಗಬ್ಬಳ್ಳಿ ಚಂದ್ರೇಗೌಡ ಮುಂತಾದ ಸ್ಥಳೀಯ ನಾಯಕರು ಉಪಸ್ಥಿತರಿದ್ದರು.

English summary
Party hopper Former MP and JD(S) candidate for Udupi-Chikmagalur Lok Sabha constituency Dhananjay Kumar has expressed confidence that the Third Front would play a decisive role after the Lok Sabha polls at national-level. HD Deve Gowda and HD Kumaraswamy are true leaders of Karnataka added Dhananjay
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X