ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶುಕ್ರವಾರ ವಿಧಾನಪರಿಷತ್ತಿನ ನಾಲ್ಕು ಕ್ಷೇತ್ರಗಳಿಗೆ ಚುನಾವಣೆ

|
Google Oneindia Kannada News

ಬೆಂಗಳೂರು, ಜೂ. 19 : ವಿಧಾನ ಪರಿಷತ್ತಿನ ಎರಡು ಪದವೀಧರ ಹಾಗೂ ಎರಡು ಶಿಕ್ಷಕರ ಕ್ಷೇತ್ರಗಳಿಗೆ ಶುಕ್ರವಾರ ಮತದಾನ ನಡೆಯಲಿದೆ. ರಾಜ್ಯ ಚುನಾವಣಾ ಆಯೋಗವು ಮತದಾನಕ್ಕಾಗಿ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದು, ನಾಲ್ಕು ಕ್ಷೇತ್ರಗಳಲ್ಲಿ ಒಟ್ಟಾರೆ 2.61 ಲಕ್ಷ ಮತದಾರರು ಮತದಾನ ಮಾಡುವ ಹಕ್ಕು ಹೊಂದಿದ್ದಾರೆ.

ಬೆಂಗಳೂರಿನಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿದ ಅನಿಲ್ ಕುಮಾರ್ ಝಾ, ಜೂ.20ರ ಶುಕ್ರವಾರ ಬೆಳಗ್ಗೆ 8ರಿಂದ ಸಂಜೆ 4ರವರೆಗೆ ಮತದಾನ ಮಾಡಲು ಅವಕಾಶ ನೀಡಲಾಗಿದೆ ಎಂದರು. ಜೂನ್‌ 24ರ ಬೆಳಗ್ಗೆ 8ಗಂಟೆಯಿಂದ ಮತ ಎಣಿಕೆ ನಡೆಯಲಿದೆ ಎಂದು ಅನಿಲ್ ಕುಮಾರ್ ಝಾ ಹೇಳಿದರು. [ಪದವೀಧರ, ಶಿಕ್ಷಕರ ಕ್ಷೇತ್ರದ ಚುನಾವಣೆಗಾಗಿ ರಜೆ]

Anil Kumar Jha

ಚುನಾವಣೆಗಾಗಿ ಸಾಂಪ್ರದಾಯಿಕ ಮತ ಪೆಟ್ಟಿಗೆಗಳನ್ನು ಬಳಸಲಾಗುತ್ತಿತ್ತು. ಅಭ್ಯರ್ಥಿಗಳಿಗೆ ಎಂದಿನಂತೆ ಚುನಾವಣಾ ಚಿಹ್ನೆ ನೀಡುವುದಿಲ್ಲ. ಕ್ರಮ ಸಂಖ್ಯೆ ಮತ್ತು ಅಭ್ಯರ್ಥಿಯ ಹೆಸರು ಮಾತ್ರ ಇರುತ್ತದೆ. ಮತಪತ್ರದಲ್ಲಿ ನೇರಳೆ ಬಣ್ಣದ ಸ್ಕೆಚ್‌ ಪೆನ್‌ ನಿಂದ ಆದ್ಯತೆ ಮತಗಳನ್ನು ಚಲಾಯಿಸಬೇಕು. ಮೊದಲ ಆದ್ಯತಾ ಮತ ಕಡ್ಡಾಯವಾಗಿದ್ದು, ಮೊದಲ ಆದ್ಯತೆ ಚಲಾಯಿಸದ ಮತವನ್ನು ಅನರ್ಹ ಎಂದು ಪರಿಗಣಿಸಲಾಗುವುದು ಎಂದರು.

ಮತಗಟ್ಟೆಗಳ ವಿವರ : ಧಾರವಾಡ ಪಶ್ಚಿಮ ಪದವೀಧರರ ಕ್ಷೇತ್ರದಲ್ಲಿ 94,356 ಮತದಾರರಿದ್ದು, 133 ಮತಗಟ್ಟೆಗಳನ್ನು ತೆರೆಯಲಾಗಿದೆ. ದಾವಣಗೆರೆಯ ಆಗ್ನೇಯ ಪದವೀಧರರ ಕ್ಷೇತ್ರದಲ್ಲಿ 101 ಮತಗಟ್ಟೆಗಳಿದ್ದು, 98,037 ಮತದಾರರಿದ್ದಾರೆ. ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ 105 ಮತಗಟ್ಟೆಗಳಲ್ಲಿ 31,809 ಮತದಾರರಿದ್ದಾರೆ. ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ 48 ಮತಗಟ್ಟೆಗಳಲ್ಲಿ 36,957 ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.

ಮತದಾರರು ಚುನಾವಣಾ ಆಯೋಗ ನೀಡಿದ ಎಪಿಕ್‌ ಕಾರ್ಡ್ ಅಥವಾ ಪರ್ಯಾಯ ಗುರುತಿನ ಚೀಟಿಗಳನ್ನು ಹಾಜರುಪಡಿಸಿ, ಮತ ಚಲಾಯಿಸಬಹುದು ಎಂದು ಅನಿಲ್ ಕುಮಾರ್ ಝಾ ಹೇಳಿದರು. ನಕಲಿ ಮತದಾನವನ್ನು ತಡೆಯುವ ಉದ್ದೇಶದಿಂದ ಪ್ರತಿ ಮತಗಟ್ಟೆಯಲ್ಲಿ ವೀಡಿಯೋ ಚಿತ್ರೀಕರಣ ನಡೆಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ವಿಶೇಷ ರಜೆ : ನಾಲ್ಕು ಕ್ಷೇತ್ರಗಳಲ್ಲಿನ ಶಿಕ್ಷಕ ಮತ್ತು ಪದವೀಧರ ಮತದಾರರಿಗೆ ಜೂನ್‌ 20ರಂದು ವಿಶೇಷ ಸಾಂದರ್ಭಿಕ ರಜೆ ಘೋಷಿಸಲಾಗಿದೆ. ಚುನಾವಣೆ ನಡೆಯಲಿರುವ ಕ್ಷೇತ್ರದಲ್ಲಿನ ಮತದಾರರಿಗೆ ಮಾತ್ರ ವಿಶೇಷ ರಜೆ ಮಂಜೂರು ಮಾಡಲಾಗಿದ್ದು, ಉಳಿದ ಕಡೆ ಇದು ಅನ್ವಯವಾಗುವುದಿಲ್ಲ ಎಂದರು.

ಕಣದಲ್ಲಿರುವ ಅಭ್ಯರ್ಥಿಗಳ ವಿವರ : ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಎಂ. ನೀಲಯ್ಯ (ಬಿಜೆಪಿ), ಬಿ.ಕೆ. ವೆಂಕಟೇಶ್‌ (ಕಾಂಗ್ರೆಸ್‌), ಪುಟ್ಟಣ್ಣ (ಜೆಡಿಎಸ್‌). ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ ಶಶೀಲ್‌ ನಮೋಶಿ (ಬಿಜೆಪಿ), ಶರಣಪ್ಪ ಮತ್ತೂರ (ಕಾಂಗ್ರೆಸ್‌), ಮಹಾಂತಪ್ಪ (ಜೆಡಿಎಸ್‌).

ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಸಂಕನೂರು ವೀರಪ್ಪ (ಬಿಜೆಪಿ), ಪಾಂಡುರಂಗ ನೀರಲಕೇರಿ (ಕಾಂಗ್ರೆಸ್‌), ವಸಂತ್‌ (ಜೆಡಿಎಸ್‌), ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಡಾ.ಎ.ಎಚ್‌. ಶಿವಯೋಗಿಸ್ವಾಮಿ (ಬಿಜೆಪಿ), ಸಿ.ಎಚ್‌. ಮುರುಗೇಂದ್ರಪ್ಪ (ಕಾಂಗ್ರೆಸ್‌), ಆರ್‌. ಚೌಡರೆಡ್ಡಿ (ಜೆಡಿಎಸ್‌)

English summary
Karnataka Chief Electoral Officer Anil Kumar Jha said, the enrollment in the voters list for the four Legislative Council constituencies, by graduates and teachers, has doubled in the past two years. The elections are scheduled to be held on June 20, Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X