ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೇಲುಕೋಟೆ: ಮದ್ವೆ ಸಂಭ್ರಮಕ್ಕೆ ಸೂತಕದ ಸಿಡಿಲು

By Mahesh
|
Google Oneindia Kannada News

ಮಂಡ್ಯ, ಮೇ.18: ಜಿಲ್ಲೆಯ ಪಾಂಡವಪುರ ತಾಲೂಕಿನ ತೀರ್ಥ ಕ್ಷೇತ್ರ ಮೇಲುಕೋಟೆ ಕಲ್ಯಾಣಿಯಲ್ಲಿ ಭಾನುವಾರ ಬೆಳಗ್ಗೆ ಇಬ್ಬರು ಮುಳುಗಿ ಸಾವನ್ನಪ್ಪಿರುವ ದುರಂತ ಘಟನೆ ನಡೆದಿದೆ. ಮದುವೆ ಸಂಭ್ರಮದಲ್ಲಿದ್ದ ಕುಟುಂಬದಕ್ಕೆ ಸೂತಕವು ಬರಸಿಡಿಲಿನಲ್ಲಿ ಅಪ್ಪಳಿಸಿದೆ.

ಮೃತಪಟ್ಟವರನ್ನು ಕಳೆದ ಮೂರು ದಿನಗಳ ಹಿಂದೆ ವಿವಾಹವಾಗಿದ್ದ 28 ವರ್ಷದ ರವಿ ಹಾಗೂ ಆತನ ನಾದಿನಿ 18 ವರ್ಷದ ಸೌಮ್ಯ ಎಂದು ಗುರುತಿಸಲಾಗಿದೆ. ಕಳೆದ ಮೂರು ದಿನಗಳ ಹಿಂದೆಯಷ್ಟೆ ಹಾಸನದ ಕಾಳಿಕಾಂಬ ಕಲ್ಯಾಣ ಮಂಟಪದಲ್ಲಿ ರವಿ ಮತ್ತು ರಜಿತಾಳ ಎಂಬುವರ ಮದುವೆ ನಡೆದಿತ್ತು.

ಮದುವೆ ನಂತರ ಸಂಸಾರ ಸಮೇತ ವಿವಿಧ ಪವಿತ್ರ ಕ್ಷೇತ್ರಗಳಿಗೆ ನವ ವಿವಾಹಿತರು, ಸ್ನೇಹಿತರು, ಬಂಧು ಮಿತ್ರರು ಭೇಟಿ ನೀಡಿದ್ದರು. ಭಾನುವಾರ ಮೇಲುಕೋಟೆ ಚಲುವನಾರಾಯಣಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ, ಸ್ನೇಹಿತರಿಗೆ ಔತಣಕೂಟ ನೀಡಲು ಎಲ್ಲ ಸಿದ್ಧಮಾಡಿಕೊಂಡಿದ್ದರು.

Two drown to death in Melukote, Mandya

ಮೃತ ರವಿ ಮತ್ತು ಆಕೆಯ ಪತ್ನಿ ರಂಜಿತ ಹಾಗೂ ರಂಜಿತಳ ತಂಗಿ ಸೌಮ್ಯ ಹಾಗೂ ಇತರರು ಮೇಲುಕೋಟೆಯ ಕಲ್ಯಾಣಿಯೊಂದರಲ್ಲಿ ಸ್ನಾನ ಮಾಡಿ, ದೇವಸ್ಥಾನದಲ್ಲಿ ಪೂಜೆ ಮಾಡಲು ತಯಾರಾಗುತ್ತಿದ್ದರು. ಈ ಸಂದರ್ಭದಲ್ಲಿ ಸೌಮ್ಯ ಕಾಲು ಜಾರಿ ಬಿದ್ದು ಮುಳುಗತೊಡಗಿದ್ದಾಳೆ. ಆಕೆಯನ್ನು ರಕ್ಷಿಸಲು ರವಿ ನೀರಿಗೆ ಹಾರಿದ್ದಾನೆ. ಆದರೆ, ಇಬ್ಬರೂ ಕೂಡಾ ಉಸಿರಾಡಲು ಆಗದೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಕಣ್ಣೆದುರಲ್ಲೇ ಪತಿಯನ್ನು ಹಾಗೂ ತಂಗಿಯನ್ನು ಕಳೆದುಕೊಂಡ ನವ ವಿವಾಹಿತೆ ರಂಜಿತ ಕೂಡಾ ನೀರಿಗೆ ಹಾರಲು ಯತ್ನಿಸಿದ್ದಾಳೆ. ಅದರೆ, ಸಂಬಂಧಿಕರು ರಕ್ಷಿಸಿ, ಸಮಾಧಾನ ಹೇಳಿದ್ದಾರೆ. ಘಟನಾ ಸ್ಥಳಕ್ಕೆ ಆಗಮಿಸಿದ ಮೇಲುಕೋಟೆ ಠಾಣೆ ಪೊಲೀಸರು ಸ್ಥಳೀಯ ಈಜುಗಾರರ ನೆರವಿನಿಂದ ಮೃತ ದೇಹಗಳನ್ನು ಹೊರ ತೆಗೆಯಲು ಹಲವು ಗಂಟೆಗಳನ್ನು ತೆಗೆದುಕೊಳ್ಳಬೇಕಾಯಿತು.

ಪಾಂಡವಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ಮೃತ ದೇಹಗಳನ್ನು ಇರಿಸಲಾಗಿದ್ದು, ಮರಣೋತ್ತರ ಪರೀಕ್ಷೆ ನಂತರ ಸಂಬಂಧಿಕರಿಗೆ ನೀಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಮದುವೆ ಮನೆ ಸಂಭ್ರಮಾಚರಣೆ ನಂತರ ಸೂತಕದ ನೋವನ್ನು ಅನುಭವಿಸುತ್ತಿರುವ ಕುಟುಂಬದ ರೋದನ ಕಂಡು ಮೇಲುಕೋಟೆ ಜನತೆ ಮಮ್ಮಲ ಮರಗಿದರು.

English summary
Two drown in a Temple Kalyani(pond) in Melukote, Pandavapura Taluk, Mandya today(May.18). The deceased identified as Ravi Kumar and Asha a native of Hassan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X