ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರತಿಷ್ಠಿತ ಕ್ಷೇತ್ರ : ಬೆಂಗಳೂರು ಉತ್ತರ ಯಾರ ಮಡಿಲಿಗೆ?

|
Google Oneindia Kannada News

ಬೆಂಗಳೂರು, ಏ. 7 : ಮಾಜಿ ಸಿಎಂ ಡಿವಿ ಸದಾನಂದ ಗೌಡರು ಲೋಕಸಭೆ ಚುನಾವಣೆ ಕಣಕ್ಕೆ ಧುಮುಕಿರುವುದರಿಂದ ಬೆಂಗಳೂರು ಉತ್ತರ ಕ್ಷೇತ್ರ ಜನರಲ್ಲಿ ಕುತೂಹಲ ಮೂಡಿಸಿದೆ. ಕಾಂಗ್ರೆಸ್ ಕ್ಷೇತ್ರದಲ್ಲಿ ಆಂತರಿಕ ಚುನಾವಣೆ ನಡೆಸುವ ಮೂಲಕ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಬಿಜೆಪಿಗೆ ಸೆಡ್ಡು ಹೊಡೆಯಲು ಸಜ್ಜಾಗಿದೆ. ಜೆಡಿಎಸ್ ಮಾಜಿ ಪೊಲೀಸ್ ಅಧಿಕಾರಿಯನ್ನು ಕಣಕ್ಕಿಳಿಸಿ ಚುನಾವಣೆಗೆ ಖಾಕಿ ಖದರ್ ತುಂಬಿದೆ.

ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಬಿಜೆಪಿಯಿಂದ ಡಿವಿ ಸದಾನಂದ ಗೌಡ, ಕಾಂಗ್ರೆಸ್ ಪಕ್ಷದಿಂದ ಸಿ.ನಾರಾಯಣಸ್ವಾಮಿ, ಜೆಡಿಎಸ್ ಪಕ್ಷದಿಂದ ಮಾಜಿ ಪೊಲೀಸ್ ಅಧಿಕಾರಿ ಅಬ್ದುಲ್ ಅಜೀಂ, ಆಮ್ ಆದ್ಮಿ ಪಕ್ಷದಿಂದ ಬಾಬು ಮ್ಯಾಥ್ಯೂ ಕಣದಲ್ಲಿದ್ದಾರೆ. ಎಲ್ಲಾ ಅಭ್ಯರ್ಥಿಗಳು ಬಿರುಸಿನ ಪ್ರಚಾರ ನಡೆಸುತ್ತಿದ್ದು, ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ನಡೆಯಲಿದೆ ಎಂಬುದು ಸದ್ಯದ ಅಭಿಪ್ರಾಯ.

Bangalore North

ಉತ್ತರ ಕ್ಷೇತ್ರದ ಟಿಕೆಟ್ ಪಡೆಯಲು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದಲ್ಲಿ ಭಾರೀ ಪೈಪೋಟಿ ನಡೆದಿತ್ತು. ಕಾಂಗ್ರೆಸ್ ಅಂತಿಮವಾಗಿ ಆಂತರಿಕ ಚುನಾವಣೆ ನಡೆಸಿ ಸಿ.ನಾರಾಯಣಸ್ವಾಮಿ ಅವರನ್ನು ಅಭ್ಯರ್ಥಿ ಎಂದು ಘೋಷಿಸಿತು. ಆರ್.ಅಶೋಕ್, ಶೋಭಾ ಕರಂದ್ಲಾಜೆ ಮತ್ತು ಡಿವಿ ಸದಾನಂದ ಗೌಡರು ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಪಡೆಯಲು ಪ್ರಯತ್ನ ನಡೆಸಿದ್ದರು. ಅಂತಿಮವಾಗಿ ಗೌಡರು ಕಣಕ್ಕಿಳಿಸಿದ್ದಾರೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

ಕೊನೆ ಕ್ಷಣದವರೆಗೂ ಉತ್ತರದ ಅಭ್ಯರ್ಥಿ ಬಗ್ಗೆ ಮೌನ ವಹಿಸಿದ್ದ ಜೆಡಿಎಸ್ ನಾಮಪತ್ರ ಸಲ್ಲಿಕೆಗೆ ಒಂದು ದಿನ ಬಾಕಿ ಉಳಿದಿರುವಾಗ ಮಾಜಿ ಪೊಲೀಸ್ ಅಧಿಕಾರಿ ಅಬ್ದುಲ್ ಅಜೀಂ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿತು. ಆಮ್ ಆದ್ಮಿ ಪಕ್ಷ ಕಾನೂನಿನ ಪ್ರೊಫೆಸರ್ ಆಗಿ ವಿವಿಧ ವಿವಿಗಳಲ್ಲಿ ಉನ್ನತ ಹುದ್ದೆ ಅಲಂಕರಿಸಿರುವ ಬಾಬು ಮ್ಯಾಥ್ಯೂ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದೆ.

ಡಿವಿ ಸದಾನಂದ ಗೌಡ
ಬೆಂಗಳೂರು ಉತ್ತರ ಕ್ಷೇತ್ರದ ಟಿಕೆಟ್ ಪಡೆಯಲು ಡಿವಿ ಸದಾನಂದ ಗೌಡ, ಆರ್.ಅಶೋಕ್ ಮತ್ತು ಶೋಭಾ ಕರಂದ್ಲಾಜೆ ಅವರ ನಡುವೆ ಸ್ಪರ್ಧೆ ಉಂಟಾಗಿತ್ತು. ಕೊನೆಗೆ ಶೋಭಾ ಕರಂದ್ಲಾಜೆ ಅವರು ಉಡುಪಿ-ಚಿಕ್ಕಮಗಳೂರು ಕ್ಷೇತ್ರಕ್ಕೆ ತೆರಳಿದರೆ, ಆರ್.ಅಶೋಕ್ ಸ್ಪರ್ಧೆಯಿಂದ ಹಿಂದೆ ಸರಿದರು. ಇದರಿಂದಾಗಿ ಕ್ಷೇತ್ರದ ಟಿಕೆಟ್ ಸದಾನಂದ ಗೌಡರಿಗೆ ಸಿಕ್ಕಿತ್ತು. [ಸದಾನಂದ ಗೌಡರ ಸಂದರ್ಶನ ಓದಿ]

ಮೋದಿ ಅಲೆ ಮತ್ತು ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಆರ್.ಅಶೋಕ್ ಅವರಿಗಿರುವ ಹಿಡಿತ ಸದಾನಂದ ಗೌಡರ ಬೆಂಬಲಕ್ಕಿದೆ. ಮುಖ್ಯಮಂತ್ರಿ ಆದ ಅವಧಿಯಲ್ಲಿ ಅವರು ಮಾಡಿದ ಕಾರ್ಯಗಳು ಸೇರಿದರೆ, ಸದಾನಂದ ಗೌಡರ ಗೆಲುವು ನಿಶ್ಚಿತ. ಸದಾನಂದ ಗೌಡರಿಗೆ ಗೆಲುವು ಎಂಬ ಮಾತುಗಳು ಈಗಾಗಲೇ ಕ್ಷೇತ್ರದಲ್ಲಿ ಕೇಳಿಬರುತ್ತಿವೆ.

ಸಿ.ನಾರಾಯಣ ಸ್ವಾಮಿ
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ 1996ರಲ್ಲಿ ನಾರಾಯಣಸ್ವಾಮಿ ಜೆಡಿಎಸ್ ಅಭ್ಯರ್ಥಿಯಾಗಿ ಸಂಸತ್ತಿಗೆ ಆಯ್ಕೆಯಾಗಿದ್ದರು. ಜೆಡಿಎಸ್ ನಲ್ಲಿ ಹಲವಾರು ಹುದ್ದೆಗಳನ್ನು ನಿರ್ವಹಿಸಿದ ಅವರು ಸಿದ್ದರಾಮಯ್ಯ ಜೆಡಿಎಸ್ ನಲ್ಲಿದ್ದಾಗ ಅವರ ಪರಮಾಪ್ತಗಿದ್ದರು. ದೇವನಹಳ್ಳಿಯವರಾದ ನಾರಾಯಣಸ್ವಾಮಿ ಸದ್ಯ ಕಾಂಗ್ರೆಸ್ ಪಕ್ಷದಲ್ಲಿದ್ದು, ಉತ್ತರದಿಂದ ಸ್ಪರ್ಧೆಗೆ ಇಳಿದಿದ್ದಾರೆ.

ಕಾಂಗ್ರೆಸ್ ಪಕ್ಷದಲ್ಲೂ ಉತ್ತರ ಕ್ಷೇತ್ರದ ಟಿಕೆಟ್ ಗಾಗಿ ಪೈಪೋಟಿ ಏರ್ಪಟ್ಟಿತ್ತು. ಪಕ್ಷದ ನಾಯಕರಾದ ಬಿ.ಎಲ್.ಶಂಕರ್, ಸಿ.ನಾರಾಯಣಸ್ವಾಮಿ, ನೆಲ ನರೇಂದ್ರ ಬಾಬು, ಸಚಿವ ಕೃಷ್ಣ ಭೈರೇಗೌಡ ಹೆಸರು ಸಹ ಕೇಳಿಬಂದಿತ್ತು. ಕೊನೆಗೆ ಆಂತರಿಕ ಚುನಾವಣೆ ಮೊರೆ ಹೋದ ಪಕ್ಷ ಯಶಸ್ವಿಯಾಗಿ ಚುನಾವಣೆ ನಡೆಸಿತು. ಸಿ.ನಾರಾಯಣಸ್ವಾಮಿ ಆಂತರಿಕ ಚುನಾವಣೆಯಲ್ಲಿ ಜಯಗಳಿಸಿ ಟಿಕೆಟ್ ಪಡೆದಿದ್ದಾರೆ. ಸಿದ್ದರಾಮಯ್ಯ ಪರಮಾಪ್ತರಾಗಿರುವ ನಾರಾಯಣ ಸ್ವಾಮಿ ಗೆಲುವಿನ ಉತ್ಸಾಹದಲ್ಲಿದ್ದಾರೆ.

ಅಬ್ದುಲ್ ಅಜೀಂ
ನಿವೃತ್ತ ಪೊಲೀಸ್ ಅಧಿಕಾರಿ ಅಬ್ದುಲ್ ಅಜೀಂ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ. ಸ್ವತಃ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅಬ್ದುಲ್ ಅಜೀಂ ಅವರಿಗೆ ಬಿಫಾರಂ ನೀಡಿ ಕಣಕ್ಕಿಳಿಸಿದ್ದಾರೆ. ಕೊನೆ ಕ್ಷಣದವರೆಗೂ ಅಭ್ಯರ್ಥಿ ಹುಡುಕಾಟದಲ್ಲಿದ್ದ ಜೆಡಿಎಸ್ ನಾಮಪತ್ರ ಸಲ್ಲಿಕೆಗೆ ಒಂದು ದಿನ ಮುಂಚಿತವಾಗಿ ಅಜೀಂ ಹೆಸರನ್ನು ಘೋಷಿಸಿತು. ದೇವೇಗೌಡರು ಅಜೀಂ ಪರ ಪ್ರಚಾರ ನಡೆಸುತ್ತಿದ್ದು, ಅವರು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬಾಬು ಮ್ಯಾಥ್ಯೂ
ಆಮ್ ಆದ್ಮಿ ಪಕ್ಷ ಸಹ ಉತ್ತರ ಕ್ಷೇತ್ರದಲ್ಲಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಪ್ರೊ. ಬಾಬು ಮ್ಯಾಥ್ಯೂ ಕ್ಷೇತ್ರದ ಅಭ್ಯರ್ಥಿ. ಕಾನೂನಿನ ಪ್ರೊಫೆಸರ್ ಆಗಿ ವಿವಿಧ ವಿವಿಗಳಲ್ಲಿ ಉನ್ನತ ಹುದ್ದೆ ಅಲಂಕರಿಸಿರುವ ಬಾಬು ಮ್ಯಾಥ್ಯೂ ಅವರು ನೆಹರೂ ಅವರ ಚಿಂತನೆಯನ್ನು ಅಳವಡಿಸಿಕೊಂಡವರು. ಕಾರ್ಮಿಕರ ಒಕ್ಕೂಟದ ಉಪಾಧ್ಯಕ್ಷರಾಗಿದ್ದವರು. ಕಾರ್ಮಿಕರ ಹಕ್ಕು, ಕಾನೂನು, ಮಕ್ಕಳ ಹಕ್ಕು, ಮಾನವ ಹಕ್ಕು ಈ ಬಗ್ಗೆ ಆಳವಾದ ಜ್ಞಾನವುಳ್ಳವರು. ಇವರು ಉತ್ತರದಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

English summary
Elections 2014 : Former Karnataka chief minister DV Sadananda Gowda will take on Congress's C. Narayanaswamy, JD(S)'s Abdul Azeem and Aam Aadmi Party's Prof. Babu Mathew in Bangalore North constituency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X